ರಸ್ತೆ ಸುರಕ್ಷತಾ ಉಪಕ್ರಮ ಅನುಷ್ಠಾನಗೊಳಿಸಿದ್ದಕ್ಕಾಗಿ ಕ.ಕ.ರ.ಸಾ. ನಿಗಮಕ್ಕೆ ರಾಷ್ಟಿçÃಯ ಪ್ರಶಸ್ತಿ

Eshanya Times

ಕಲಬುರಗಿ,ಮಾ.೦೨ :

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ರಸ್ತೆ ಸುರಕ್ಷತಾ ಉಪಕ್ರಮಗಳನ್ನು ಅನುಷ್ಠಾನಗೊಳಿಸಿದ್ದಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ರಾಷ್ಟಿçÃಯ ರಸ್ತೆ ಸಾರಿಗೆಗಳ ನಿಗಮದ ಒಕ್ಕೂಟ (ASRTU) ವು ರಾಷ್ಟಿçÃಯ ಮಟ್ಟದBest Road Safety practices ವಿಭಾಗದಡಿ ರಾಷ್ಟಿçÃಯ ಪ್ರಶಸ್ತಿ ಘೋಷಿಸಿದ್ದು, ಇದೇ ಮಾರ್ಚ್ ೧೫ ರಂದು ನವದೆಹಲಿಯಲ್ಲಿ ಜರುಗಲಿರುವ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ೬೪ನೇ ವಾರ್ಷಿಕ ಸಮಾವೇಶದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಂ. ರಾಚಪ್ಪ ಅವರು ತಿಳಿಸಿದ್ದಾರೆ.
ರಾಜ್ಯದ ಸಾರಿಗೆ ಮತ್ತು ಮುಜರಾಯಿ ಸಚಿವರು ಹಾಗೂ ನಿಗಮದ ಅಧ್ಯಕ್ಷರಾದ ರಾಮಲಿಂಗಾರೆಡ್ಡಿ ಅವರ ಮಾರ್ಗದರ್ಶನ ಹಾಗೂ ನಿಗಮದ ಎಲ್ಲ್ಲಾ ಸಿಬ್ಬಂದಿ, ಅಧಿಕಾರಿಗಳ ಸಂಯೋಜಿತ ಯೋಜನೆ ಮತ್ತು ಪರಿಶ್ರಮದಿಂದ ನಿಗಮಕ್ಕೆ ಈ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಬಂದಿರುವುದಕ್ಕೆ ನಿಗಮದ ಎಲ್ಲ ವರ್ಗದ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಪ್ರಯಾಣಿಕರಿಗೆ ವ್ಯವಸ್ಥಿತ ಮತ್ತು ಸುರಕ್ಷಿತ ಬಸ್ ಸೇವ ಒದಗಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ೨೦೨೨-೨೩ನೇ ಸಾಲಿನಲ್ಲಿ ನಿಗಮದಲ್ಲಿ ಒಂದು ಹೈಟೆಕ್ ಮಾದರಿಯ ಸಂಚಾರಿ ತರಬೇತಿ (Mobile conference Training Bus) ವಾಹನವನ್ನು ಜಿಲ್ಲಾಡಳಿತದಿಂದ ಪಡೆದು ಈ ವಾಹನದಲ್ಲಿ ಚಾಲಕರಿಗೆ ರಸ್ತೆ ಸುರಕ್ಷತೆ ನಿಯಮಗಳ ಕುರಿತು ಈ ವಾಹನವನ್ನು ನಿಗಮದ ೦೯ ವಿಭಾಗಗಳ ವ್ಯಾಪ್ತಿಯಲ್ಲಿ ಬರುವ ೫೨ ಘಟಕಗಳಿಗೆ ತೆಗೆದುಕೊಂಡು ಹೋಗಿ ತರಬೇತಿಯನ್ನು ನೀಡಲಾಗುತ್ತಿದೆ.
ಈ ಸಂಚಾರಿ ತರಬೇತಿ (Mobile conference Training Bus) ವಾಹನದ ವೈಶಿಷ್ಟತೆಗಳು: ಈ ಸಂಚಾರಿ ತರಬೇತಿ ಬಸ್‌ನಲ್ಲಿ ಸಂಪೂರ್ಣ ಹವಾ ನಿಯಂತ್ರಿತ ವ್ಯವಸ್ಥೆ ಇದ್ದು, ಒಟ್ಟು ೧೬ ಆಸನಗಳ ವ್ಯವಸ್ಥೆ, ಎಲ್.ಇ.ಡಿ ಸ್ಕಿçನ್ ಹಾಗೂ ಆಡಿಯೋ ಸಿಸ್ಟಮ್ ವ್ಯವಸ್ಥೆ ಇರುತ್ತದೆ. ಈ ಸಂಚಾರಿ ತರಬೇತಿ ವಾಹನವನ್ನು ಘಟಕಗಳಿಗೆ ತೆಗೆದುಕೊಂಡ ಹೋಗಿ ೨೦೨೨-೨೩ ನೇ ಸಾಲಿನಲ್ಲಿ ಒಟ್ಟು ೬,೫೮೩ ಚಾಲಕರಿಗೆ ತರಬೇತಿಯನ್ನು ನೀಡಲಾಗಿದೆ. ಇದರಿಂದ ನಿಗಮಕ್ಕೆ ಸರಾಸರಿ ೨ ಕೋಟಿ ರೂ. ಗಳ ಉಳಿತಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";