ರಾಯಚೂರು: ನಾ. ಡಿಸೋಜ ಅವರು ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರಾಗಿದ್ದರು ಎಂದು ಹಿರಿಯ ಸಾಹಿತಿ ವೀರ ಹನುಮಾನ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಮತ್ತು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಮಂಗಳವಾರ ಸಂಜೆ ಆಯೋಜಿಸಿದ್ದ ನಾ, ಡಿಸೋಜ ಶ್ರದ್ಧಾಂಜಲಿ ಕರ‍್ಯಕ್ರಮ ಹಾಗು ನುಡಿ ನಮನ ಕರ‍್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅನೇಕ ಪ್ರಕಾರದಲ್ಲಿ ಕನ್ನಡ ಸಾಹಿತ್ಯ ಕೃಷಿ ಮಾಡಿದವರು. ಅವರು ಕಥೆ, ಕಾದಂಬರಿಗಳಿಗೆ ಸುಪ್ರಸಿದ್ಧ ಪಡೆದಿದ್ದರು, ಪರಿಸರ ನಾಶವೇ ಮಾನವ ಜನಾಂಗದ ವಿನಾಶದ ಮೂಲ, ಪರಿಸರವನ್ನುಳಿಸಿಕೊಂಡು ಬಾಳಿದರೆ ಮಾನವನ ಬಾಳು ಸುಂದರವಾಗುತ್ತದೆ ಎಂದು ಎಚ್ಚರಿಸುತ್ತಿದ್ದರು ಎಂದು ಹೇಳಿದರು.
ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾ.ಡಿಸೋಜ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದು ಕನ್ನಡ ಸಾಹಿತ್ಯ ಲೋಕಕ್ಕೆ ಕರ‍್ತಿಯನ್ನು ತಂದಿದ್ದಾರೆ ಎಂದು ತಿಳಿಸಿದರು.
ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೆಂಕಟೇಶ ಬೇವಿನಬೆಂಚಿ ಅವರು ಮಾತನಾಡಿ ನಾ ಡಿಸೋಜ ಅವರ ಕತೆ ಕಾದಂಬರಿಗಳು ಸಮಾಜಮುಖಿ ಆಗಿದ್ದವು, ಅವರು ಕಾದಂಬರಿಗಳು ಚಲನಚಿತ್ರಗಳಾಗಿವೆ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿವೆ, ಅವರ ಸರಳ ಸಮಾಜಮುಖಿ ಚಿಂತನೆಗಳು ಎಲ್ಲರಿಗೂ ಮಾದರಿಯಾಗಿವೆ, ಅವರು ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ಶಕ್ತಿಯಾಗಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾವುತರಾವ್ ಬರೂರ, ದೇವೇಂದ್ರಮ್ಮ, ತೆರೇಸಾ, ಯಲ್ಲಪ್ಪ ರ‍್ಚೆಡ್, ವಸಂತಕುಮಾರ, ಶಿವರಾಜ, ಎಸ್. ಪ್ಯಾಟೆಪ್ಪ, ಶ್ರೀನಿವಾಸ ನವಲಕಲ್, ಬಶೀರ್ ಅಹಮದ್ ಹೊಸಮನಿ, ರಾಮಣ್ಣ ಬಯೇರ್, ಚಿದಾನಂದ ನೂಲಿ ಸೇರಿದಂತೆ ಸಾಹಿತಿಗಳು ಲೇಖಕರು ಕವಿಗಳು ಹಾಗೂ ಪರಿಷತ್ತಿನ ಪದಾಧಿಕಾರಿಗಳು ಭಾಗವಹಿಸಿದ್ದರು.