ರಾಯಚೂರು,ಆ.10: ರಾಯಚೂರಿನಲ್ಲಿ ರಾಜಕೀಯ ಇಚ್ಛಾ ಶಕ್ತಿ ಕೊರತೆಯೇ ಏಮ್ಸ್ ಸ್ಥಾಪನೆ ವಿಳಂಬಕ್ಕೆ ಕಾರಣ, ನಾನು ಪ್ರಯತ್ನಿಸುತ್ತೇನೆ, ಸಂಬ0ಧಿಸಿದ ಸಚಿವರೊಂದಿಗೆ ಮಾತನಾಡುತ್ತೇನೆ ಬಾಗಲಕೋಟೆಯ ಸಂಸದ ಪಿ.ಸಿ ಗದ್ದಿ ಗೌಡರ್ ಹೇಳಿದರು.
ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಿಯೋಗ ಆಗಸ್ಟ್ 9 ರಂದು ಬಾಗಲಕೋಟೆ ಹಿರಿಯ ಸಂಸದ ಪಿ ಸಿ ಗದ್ದಿಗೌಡರ್ ರವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿ ಮಾಡಿ ಸನ್ಮಾನಿಸಲಾಯಿತು. ಮನವಿ ಪತ್ರ ಸಲ್ಲಿಸಿ, ರಾಯಚೂರಿನಲ್ಲಿ ಏಮ್ಸ್ ಗಾಗಿ ನಡೆಯುತ್ತಿರುವ ಸುಧೀರ್ಘ ಹೋರಾಟದ ಬಗ್ಗೆ ವಿವರವಾದ ಮಾಹಿತಿ ನೀಡಿ, ಐಐಟಿ ಇಂದ ವಂಚಿತಗೊ0ಡ ಮಹತ್ವಕಾಂಕ್ಷಿ ಜಿಲ್ಲೆ, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಸಂಬ0ಧಿಸಿದ0ತೆ ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕೆಂದು ವಿನಂತಿಸಿಕೊಳ್ಳಲಾಯಿತು. ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಸಂಸದರು, “ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಸುಧೀರ್ಘ ಹೋರಾಟ ನಡೆಯುತ್ತಿದ್ದರು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ವಿಳಂಬವಾಗಿ ಇದುವರೆಗೂ ಸಾಧ್ಯವಾಗಿಲ್ಲ, ನಾನು ಸಂಬ0ಧಿಸಿದ ಸಚಿವರೊಂದಿಗೆ ಮಾತನಾಡುತ್ತೇನೆ, ರಾಯಚೂರಿಗೆ ಏಮ್ಸ್ ಮಂಜೂರಾತಿಗಾಗಿ ನಾನು ಪ್ರಯತ್ನಿಸುತ್ತೇನೆ” ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ಡಾ. ಬಸವರಾಜ ಕಳಸ, ಎನ್. ಉದಯಕುಮಾರ್ ಸಿರವಾರ್’ ಸುಲೋಚನಾ ಸಂಘ, ವಿನಯ್ ಕುಮಾರ್ ಚಿತ್ರಗಾರ, ಶ್ರೀರಾಮಚಂದ್ರ ಹೊಸಪೇಟೆ ,ದೆಹಲಿ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ವೈಜನಾಥ ಬಿರಾದರ್ ಮುಂತಾದವರು ಉಪಸ್ಥಿತರಿದ್ದರು.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ: ಸಂಬಂಧಿಸಿದ ಸಚಿವರೊಂದಿಗೆ ಚರ್ಚೆ- ಸಂಸದ ಪಿ.ಸಿ.ಗದ್ದಿಗೌಡರ್
