ರಾಯಚೂರು: ಲಿಂಗಸೂಗೂರ ತಾಲೂಕಿನ ಹಟ್ಟಿ ಚಿನ್ನದ ಗಣಿ ಅಳದಲ್ಲಿ ಕೆಲಸ ಮಾಡುತ್ತಿದ್ದ ಸಂಧರ್ಭದಲ್ಲಿ ಅದಿರಿನ ಕಲ್ಲು ಬಂಡೆ ಕುಸಿದು ಬಿದ್ದು ಸ್ಥಳದಲ್ಲಿಯೇ ಕಾರ್ಮಿಕ ಮೌನೇಶ ಮೃತಪಟ್ಟು ಕೆಲ ಕಾರ್ಮಿಕರು ಗಾಯಗೊಂಡ ಘಟನೆ ನಡೆದಿತ್ತು.
ಬುಧವಾರದಂದು ಸಂಸದ ಜಿ.ಕುಮಾರ ನಾಯಕ ಹಟ್ಟಿ ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಮೃತ ಕಾರ್ಮಿಕ ಮೌನೇಶ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿ, ಅಂದು ಅಪಘಾತ ಸಂಭವಿಸಿದ ಸುದ್ದಿ ತಿಳಿದ ತಕ್ಷಣ ಹಟ್ಟಿ ಚಿನ್ನದ ಗಣಿ ವ್ಯವಸ್ಥಾಪಕ ನಿರ್ಧೇಕರೊಂದಿಗೆ ಚರ್ಚಿಸಿ ಹೆಚ್ಚಿನ ಪರಿಹಾರ ಮತ್ತು ಪುತ್ರನಿಗೆ ಉದ್ಯೋಗ ನೀಡಲು ಸೂಚನೆ ನೀಡಿದೆ ಎಂದು ತಿಳಿಸಿದರು. ಇನ್ನು ಹೆಚ್ಚಿನ ಪರಿಹಾರಕ್ಕಾಗಿ ಆಡಳಿತ ವರ್ಗದೊಂದಿಗೆ ಚರ್ಚಿಸುತ್ತೇನೆಂದರು.
ಮೃತ ಮೌನೇಶ ಪತ್ನಿ ಮತ್ತು ಮಕ್ಕಳೊಂದಿಗೆ ಚರ್ಚಿಸಿದರು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತೆ ಸಲಹೆ ನೀಡಿದರು. ಮೃತ ಮೌನೇಶ ಭಾವಚಿತ್ರಕ್ಕೆ ನಮನ ಸಲ್ಲಿಸಿ ಶೃದ್ದಾಂಜಲ್ಲಿ ಸಲ್ಲಿಸಿ ಕುಟುಂಬದವರಿಗೆ ಧೈರ್ಯ ತುಂಬಿದರು.
ಗಣಿ ಆಡಳಿತ ವರ್ಗದೊಂದಿಗೆ ಚರ್ಚೆ:
ಹಟ್ಟಿ ಚಿನ್ನದ ಅತಿಥಿ ಗೃಹದಲ್ಲಿ ಗಣಿ ಕಾರ್ಯನಿರ್ವಾಹಕ ನಿರ್ದೇಶಕರಾದ ಪ್ರಕಾಶ, ಹಿರಿಯ ವ್ಯವಸ್ಥಾಪಕರು (ಮಾಸಅ) ಯಮನೂರಪ್ಪನವರೊಂದಿಗೆ ಸಂಸದ ಕುಮಾರ ನಾಯಕ ಚರ್ಚಿಸಿ ಮೃತ ಕಾರ್ಮಿಕನ ಕುಟುಂಬಕ್ಕೆ ನೀಡಿದ ಪರಿಹಾರ ಮತ್ತು ಪುತ್ರನಿಗೆ ಉದ್ಯೋಗ ನೀಡಿದ ಬಗ್ಗೆ ಮಾಹಿತಿ ಪಡೆದರು. ಇನ್ನೂ ಹೆಚ್ಚಿನ ಪರಿಹಾರ ನೀಡುವಂತೆ ಸೂಚನೆ ನೀಡಿದರು. ಆಡಳಿತ ಮಂಡಳಿ ಸಭೆಯಲ್ಲಿ ಹೆಚ್ಚಿನ ಪರಿಹಾರ ನೀಡಲು ಪ್ರಸ್ತಾವನೆ ಸಲ್ಲಿಸಿದರೆ ಗಣಿ ಅಧ್ಯಕ್ಷರು ಮತ್ತು ನಿರ್ದೇಶಕರೊಂದಿಗೆ ಚರ್ಚಿಸಿ ಹೆಚ್ಚಿನ ಪರಿಹಾರಕ್ಕೆ ಮಂಜೂರಾತಿಗೆ ಪ್ರಯತ್ತಿಸುವುದಾಗಿ ಹೇಳದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಎಸ್.ಹೂಲಗೇರಿ, ಲಿಂಗಸೂಗೂರ ಬ್ಲಾಕ್ ಅಧ್ಯಕ್ಷ ಗೋವಿಂದ್ ನಾಯಕ, ಮುದ್ಗಲ್ ಬ್ಲಾಕ್ ಅಧ್ಯಕ್ಷ ಶಿವಶಂಕರಗೌಡ, ಲಿಂಗಸೂಗೂರ ಕಾಂಗ್ರೆಸ್ ಮುಖಂಡ ಸಂಜೀವ್,ಹಟ್ಟಿ ಬ್ಲಾಕ್ ಅಧ್ಯಕ್ಷ ಅಹ್ಮದ್ ಬಾಬಾ, ಕಾರ್ಮಿಕ ಸಂಘದ ಅಧ್ಯಕ್ಷ ಎಸ್.ಎಂ.ಶಫೀ, ಉಪಾಧ್ಯಕ್ಷ ಶಾಂತಪ್ಪ ಆನ್ವರಿ, ಕಾರ್ಯದರ್ಶಿ ಮೈನುದ್ದೀನ್, ಸಿದ್ದಪ್ಪ ಮುಂಡರಗಿ,ಚAದ್ರು, ಹಟ್ಟಿ ಪ.ಪಂ.ಸದಸ್ಯರಾದ ಸಿರಾಜುದ್ದೀನ್ ಖುರೇಶ, ಸೈಯದ್ ಇಸ್ಮಾಯಿಲ್(ಗೋರಿ) ಬಾಬು ನಾಯಿಕೊಡಿ, ರಂಗಪ್ಪ ಮುಂಡರಗಿ, ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ವಿನೋದ, ಪ್ರ.ಕಾ. ಸುನೀಲ್,ಎಚ್.ಎ.ಲಿಂಗಪ್ಪ, ಆನಂದ, ಹಟ್ಟಿ ಚಿನ್ನದ ಗಣಿ ಪ.ಜಾ.ಪಂ. ನೌಕರ ಸಂಘದ ಅಧ್ಯಕ್ಷ ಜಮದಗ್ನಿ,ಪ್ರಧಾನ ಕಾರ್ಯದರ್ಶಿ ಶರಣಗೌಡ ಗುರಿಕಾರ, ಕರವೇ ಮೌನೇಶ,ನಾರಾಯಣ, ಕಾಂಗ್ರೆಸ್ ಮುಖಂಡರಾದ ಲಿಂಗರಾಜ್, ನಿಂಗಪ್ಪ ಮನಗೊಳಿ, ಜೆ.ಸುಭಾನ್, ಸೈಯದ್ ಟೈಲರ್,ಜಿಲಾನಿ ಖುರೇಶಿ,ದೇವೇಂದ್ರಪ್ಪ, ಸೈಯದ್ ಶಂಶುದ್ದೀನ್ ವಕೀಲ್,ಮೈಹಿಬೂಬು ಮೆಕನಿಕ್,ಮೌಲಿ ಸಾಬ,ರಾಯಚೂರು ಕಾಂಗ್ರೆಸ್ ಮುಖಂಡರಾದ ಕೆ.ಶಾಂತಪ್ಪ, ಜಿ.ಶಿವಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೆಚ್ಚುವರಿ ಅಧೀಕ್ಷಕರಾದ ಡಾ.ಶಿವಕುಮಾರ ಮಾರ್ಗದರ್ಶದಲ್ಲಿ ಹಟ್ಟಿ ಸಿಪಿಐ ಹೊಸಕೇರಪ್ಪ ಮತ್ತು ಪೊಲೀಸ್ ಸಿಬ್ಬಂದಿ ಬಿಗೀ ಬದೋಬಸ್ತ ಮಾಡಿದರು.