ಕೊಪ್ಪಳ ಅಕ್ಟೋಬರ್ 04 :ಜಿಲ್ಲಾ ಪಂಚಾಯತ್‌ನ ಮೀನುಗಾರಿಕಾ ಇಲಾಖೆಯಿಂದ ಅಕ್ಟೋಬರ್ 04 ರಂದು ಮಾಸಿಕ ಸಭೆ ನಡೆಯಿತು. ಒಳನಾಡು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ವಿತರಿಸುವ ಕುರಿತು ಪ್ರಚಾರದ ಅಭಿಯಾನದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಮಾಸಿಕ ಸಭೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ವೀರೆಂದ್ರಕುಮಾರ, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಶ್ರೀನಿವಾಸ ಕುಲಕರ್ಣಿ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಬಸವರಾಜ ಪಾಟೀಲ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.