ಜೀವನದಲ್ಲಿ ಬಿಡುವಿಲ್ಲದೆ ತಪಸ್ಸಿನಂತೆ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವವರು ಮೋದಿಜೀ: ವಿಜಯೇಂದ್ರ

Eshanya Times

ಸಿ೦ಧನೂರು.ಮೇ.೩- ದೇಶ ಕಂಡ ಹೆಮ್ಮೆಯ ಪುತ್ರ ಮೋದೀಜಿಯವರು ದೇಶದ ಪ್ರಧಾನಮಂತ್ರಿಯಾಗಿ ಹತ್ತು ವರ್ಷ ಕಳೆದಿದೆ. ಒಂದು ದಿನವೂ ರಜೆ ತೆಗೆದುಕೊಳ್ಳದೆ ತಪಸ್ಸಿನ ರೀತಿಯಲ್ಲಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಅವರು ಶುಕ್ರವಾರ ನಗರದ ಜೂನೀಯರ್ ಕಾಲೇಜ ಮೈಧಾನದಲ್ಲಿ ನಡೆದ ಕೊಪ್ಪಳ ಲೋಕಸಭಾ ಬಿಜೆಪಿಯ ಅಭ್ಯರ್ಥಿ ಡಾ: ಬಸವರಾಜ ಕೆ. ಪರ ಮತ ಯಾಚನೆ ಕಾರ್ಯಕ್ರಮದಲ್ಲಿ ಮಾತನಾಡಿ, ೨೦೪೭ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸು ಮಾಡಲು ಮೋದೀಜಿ ಸಂಕಲ್ಪ ಮಾಡಿದ್ದಾರೆ, ಬಿಜೆಪಿ ಕಾರ್ಯಕರ್ತರಾದ ನಾವು ಪುಣ್ಯವಂತರು. ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡುತ್ತಾ ಗ್ಯಾರಂಟಿ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆಯಿತು. ಇದು ಶೇ. ೮೦ ಭ್ರಷ್ಟಾಚಾರದ ಸರ್ಕಾರ. ಇದು ಅಲ್ಪಸಂಖ್ಯಾತರ ತುಷ್ಟೀಕರಣದ ಸರ್ಕಾರ. ಇದು ಹಿಂದು ವಿರೋಧಿ, ರೈತ ವಿರೋಧಿ ಸರ್ಕಾರ ಎಂದು ಟೀಕಿಸಿದರು. ಹಿಂದುಗಳನ್ನು ಬೆದರಿಸಲು ಮುಂದಾದ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಮಾತನಾಡಿದರು, ಮಾಜಿ ಸಂಸದ ಕೆ ವಿರೂಪಾಕ್ಷಪ್ಪ ಮಾತನಾಡಿ, ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಕಾಂಗ್ರೆಸ್ ಸರ್ಕಾರವು ಇಲ್ಲಿಯವರಿಗೆ ಐದು ಗ್ಯಾರಂಟಿಗಳನ್ನು ಸಮಗ್ರವಾಗಿ ಜಾರಿ ಮಾಡಿಲ್ಲ, ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸಸನ ಗ್ಯಾರಂಟಿಗಳನ್ನು ಹೊತ್ತು ಸಾಗುತ್ತಿರುವ ಗಾಡಿ ರಿವರ್ಸಗೇರಿನಲ್ಲಿ ಹೊರಟಿದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹತ್ತು ವರ್ಷದ ಸಾಧನೆಗಳಾದ, ಪ್ರತಿಯೊಂದು ಕುಟುಂಬ ಶೌಚಾಲಯ ಹೊಂದಿರಬೇಕೆನ್ನುವ ದೃಷ್ಠಿಯಿಂದ ಶೌಚಾಲಯ ನಿರ್ಮಾಣ, ಮನೆ ಮನೆಗೆ (ಜೆಜೆಎಂ) ನೀರಿನ ಶೌಲಭ್ಯ, ಗ್ಯಾಸ್ ವಿತರಣೆ, ಮನೆ ಕಟ್ಟಿಕೊಳ್ಳಲು ೨೦ ಲಕ್ಷದವರಿಗೆ ಸಾಲ ಸೌಲಭ್ಯ, ೫ ಲಕ್ಷದವರಿಗೆ ಆರೋಗ್ಯಕ್ಕೆ ಹಣ, ದೇಶಾದ್ಯಂತ ರೌಲ್ವೆ ಮಾರ್ಗಗಳ ಹೆಚ್ಚಳ, ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆ; ಮುಂತಾದ ಯೋಜನೆಗಳನ್ನು ಮನೆ ಮನೆಗೆ ಮುಟ್ಟಿಸಿದ್ದೇವೆ, ಕೇಂದ್ರ ಸರಕಾರದವರು ೫ ಕೆ ಜಿ ಅಕ್ಕಿ ಕೊಡುತ್ತಿದ್ದಾರೆ. ಆ ಅಕ್ಕಿ ತಮ್ಮವೆಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ, ಅವರು ಚುನಾವಣೆಯಲ್ಲಿ ಹೇಳಿದ ಪ್ರಕಾರ ೧೫ ಕೆಜಿ. ಅಕ್ಕಿಯನ್ನು ಪ್ರತಿ ಕುಟುಂಬಕ್ಕೆ ಕೊಡಬೇಕಾಗಿತ್ತು, ಇವರಿಗೆ ಮಾನ ಮರ್ಯಾದೆ ಇದ್ದರೆ ೨೦೦ ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇವೆಂದು ಹೇಳಿ ದಿನವಿಡಿ ಲೋಡ್ ಸೆಡ್ಡಿಂಗ್ ಮಾಡುತ್ತಿದ್ದಾರಲ್ಲದೆ, ಪ್ರತಿ ವಿನಿಟ್‌ನ ಧರವನ್ನು ಸಹ ಹೆಚ್ಚುಮಾಡುವ ಮೂಲಕ ಮತ ನೀಡಿದ ನಾಡಿನ ಜನತೆಗೆ ಮೋಸ ಮಾಡಿದ್ದಾರೆ, ಮಹಿಳೆಯರಿಗೆ ೨ ಸಾವಿರ ಸರಿಯಾಗಿ ಸಿಗುವುದಿಲ್ಲ. ಕೆಲವೊಂದು ಕುಟುಂಬಗಳಿಗೆ ೨ ಸಾವಿರ ಸಿಕ್ಕರೂ ಅವರ ಮನೆಯ ಗಂಡು ಮಕ್ಕಳಿಂದ ಐದಾರು ಸಾವಿರ ಕಿತ್ತುಕೊಳ್ಳುತ್ತಿದ್ದಾರೆ, ಇದನ್ನು ಮಹಿಳೆಯರು ಗಮನಿಸ ಬೇಕು ಎಂದರು.
ಮಾಜಿ ಮಂತ್ರಿ ವೆಂಕಟರಾವ್ ನಾಡಗೌಡ ಮಾತನಾಡಿ. ಈ ಸರಕಾರಕ್ಕೆ ರೈತರ ಕಾಳಜಿ ಇಲ್ಲದಾಗಿದೆ, ಅವರದೆ ಸರಕಾರವಿದ್ದು ಜೋಳ ಬೆಳೆದ ರೈತನಿಗೆ ಖಾಲಿ ಚೀಲ ಹೊದಗಿಸಿ ಕೊಡುವಲ್ಲಿ ಶಾಸಕರು ವಿಫಲರಾಗಿದ್ದಾರೆ, ಈ ಸರಕಾರದ ಆಡಲೀತದ ವಿಫಲತೆಯನ್ನು ಕಂಡ ಯುವಕರು ಮೋದಿಯವರ ನೇತೃತ್ವದ ಬಿಜೆಪಿ ಸರಕಾರಕ್ಕೆ ಮತ್ತೊಮ್ಮೆ ಅವಕಾಶ ಕೊಡುವ ಮೂಲಕ ಮತ್ತೊಮ್ಮೆ ಈ ದೇಶಕ್ಕೆ ಮೋದಿಯವರು ಪ್ರಧಾನ ಮಂತ್ರಿಗಳಾಗಬೇAದು ಉಮ್ಮಸ್ಸಿನಲ್ಲಿದ್ದಾರೆ, ಏನು ಕಾರಣವಿಲ್ಲದೆ ನನ್ನು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದರಿ, ಚುನಾವಣೆ ಎಂದರೆ ಸೋಲು ಗೆಲುವು ಸಹಜ ಮತ್ತೊಮ್ಮೆ ಆ ತಪ್ಪು ಮಾಡಬೇಡಿರಿ, ನನ್ನನ್ನು ಸೋಲಿದರೂ ಪರವಾಗಿಲ್ಲ, ಕೊಪ್ಪಳ ಲೋಕಸಭಾ ಮೈತ್ರಿ ಅಭ್ಯರ್ಥಿ ಡಾ.ಬಸವರಾಜ ಎಸ್.ಕ್ಯಾವಟರ್ ಗೆಲ್ಲಿಸಿರಿ ಆಗ ನೀವು ನನ್ನನ್ನೆ ಗೆಲ್ಲಿಸಿದಂತೆ ಎಂದು ಸಾರ್ವಜನಿಕರಲ್ಲಿ ಮೈತ್ರಿ ಅಭ್ಯರ್ಥಿ ಡಾ.ಬಸವರಾಜ ಎಸ್.ಕ್ಯಾವಟರ್ ಪರವಾಗಿ ಮತಯಾಚನೆ ಮಾಡಿದರು.
ಕಾರ್ಯಕ್ರಮದಲ್ಲಿ – ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಡಾ.ಬಸವರಾಜ ಕ್ಯಾವಟೂರ್, ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ, ಮಾಜಿ ಶಾಸಕರಾದ ವೆಂಕಟರಾವ್ ನಾಡಗೌಡ, ಹನುಮಂತಪ್ಪ ಆಲ್ಕೊಡ್, ಪ್ರತಾಪಗೌಡ ಪಾಟೀಲ್, ರಾಜಾ ವೆಂಕಟಪ್ಪ ನಾಯಕ್, ಮುಖಂಡರಾದ ಕೆ.ಕರಿಯಪ್ಪ, ಸಿದ್ದು ಬಂಡಿ, ಅಮರೇಗೌಡ ವಿರುಪಾಪೂರ, ಬಿ.ಹರ್ಷ, ರಾಮಚಂದ್ರರಾವ್, ಕಾಡಾ ಮಾಜಿ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್, ನಯೋಪ್ರಾ ಮಾಜಿ ಅಧ್ಯಕ್ಷ ಮಧ್ವರಾಜ್ ಆಚಾರ್ಯ, ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿಗರು, ತಾಲೂಕಿನ ಹಳ್ಳಿಗಳಿಂದ ಅಪಾರ ಸಂಖ್ಯಯಲ್ಲಿ ಕಾರ್ಯಕರ್ತರು ಭಹಿರಂಗ ಸಭೆಯಲ್ಲಿ ಭಾಗವಹಿಸಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";