ಬಿಜೆಪಿ ಜೆಡಿಎಸ್ ಮೈತ್ರಿ ಪಾಲನೆ | ಕಾಂಗ್ರೆಸ್ ಅಪಪ್ರಚಾರ ಎನ್ ಡಿ ಎ ಮೈತ್ರಿಕೂಟದ ಅಭ್ರ‍್ಥಿ ಗೆಲುವು ನಿಶ್ಚಿತ : ಶಾಸಕ ಸುರೇಶ್ ಗೌಡ

filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;
Eshanya Times

ಶಹಾಪುರ:

ಮೇ ೭ರಂದು ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು,ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ
ಶಹಪೂರ ಕ್ಷೇತ್ರದಿಂದ ೧೯೦೦೦ ಲೀಡ್ ಕೊಟ್ಟಿದ್ದು, ಈ ಸಾರಿ ಕೂಡ ೩೦,೦೦೦ ಲೀಡ್ ಕೊಡಬೇಕು.ಎನ್ ಡಿ ಎ ಮೈತ್ರಿಕೂಟದ ಅಭ್ರ‍್ಥಿ ಗೆಲುವು ನಿಶ್ಚಿತ ಎಂದು ಶಾಸಕರು ಹಾಗೂ ಚುನಾವಣಾ ಉಸ್ತುವಾರಿಗಳು ಸುರೇಶಗೌಡ ಹೇಳಿದರು.ನಗರದ ಬಿಜೆಪಿ ಜಿಲ್ಲಾಧ್ಯಕ್ಷರಾದ ಅಮ್ಮೀನರೆಡ್ಡಿ ಪಾಟೀಲ್ ಯಾಳಗಿರವರ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಹಾಪೂರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ.ಕಾಂಗ್ರೇಸ್ ನವರು ಅಪಪ್ರಚಾರ ಮಾಡುತ್ತಿದ್ದಾರೆ.ಕೇಂದ್ರದಲ್ಲಾದ ಮೈತ್ರಿಯನ್ನು ಪಾಲಿಸುತ್ತೇವೆ.ಮಾಜಿ ಶಾಸಕರಾದ ಗುರು ಪಾಟೀಲ್ ಜೊತೆ ಮಾತನಾಡಿದ್ದು ಸಾಯಂಕಾಲ ಪಕ್ಷದ ಮುಖಂಡರ ಜೊತೆಗೂಡಿ ರ‍್ಚಿಸುವುದಾಗಿ ತಿಳಿಸಿದರು.

ಯಾದಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಅಮಿನ್ ರೆಡ್ಡಿ ಪಾಟೀಲ್ ಯಾಳಗಿ ಮಾತನಾಡಿ,ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಅದನ್ನು ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಪಾಲಿಸುತ್ತೇವೆ. ಶಹಾಪೂರ ಕ್ಷೇತ್ರದಲ್ಲಿ ಕಾಂಗ್ರೆಸ್ನವರು ಸುಳ್ಳು ಹೇಳುತ್ತಾ, ಜೆಡಿಎಸ್ ನವರು ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಸುಳ್ಳು ಹೇಳಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ.ಯಾದಗಿರಿ ಕ್ಷೇತ್ರದಲ್ಲಿ ಈಗಾಗಲೇ ಜೆಡಿಎಸ್ ಮುಖಂಡರಾದ ಮಾಲ್ಕ ರೆಡ್ಡಿ ಅವರು ಬಿಜೆಪಿ ಅಭ್ರ‍್ಥಿ ಅಂಬರೇಶ ನಾಯಕ್ ಪರ ಪ್ರಚಾರ ಕೈಗೊಂಡಿದ್ದಾರೆ. ಮಾಜಿ ಶಾಸಕರಾದ ಗುರು ಪಾಟೀಲ್ ಶಿವವಾಳ ಅವರನ್ನು ಈಗಾಗಲೇ ಭೇಟಿ ಮಾಡಿದ್ದು ಅವರು ಕೂಡ ಮೈತ್ರಿ ಪಾಲನೆ ಮಾಡುವುದಾಗಿ ತಿಳಿಸಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಗುರು ಪಾಟೀಲ್ ಶಿರವಾಳ ಆದಷ್ಟು ಬೇಗ ಜೆಡಿಎಸ್ ಕರ‍್ಯರ‍್ತರಿಗೆ ಒಳ್ಳೆಯ ಸಂದೇಶ ನೀಡಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಹಿರಿಯ ಮುಖಂಡರಾದ ಡಾ. ಚಂದ್ರಶೇಖರ್ ಸುಬೇದಾರ್, ಬಸವರಾಜ ವಿಭೂತಿಹಳ್ಳಿ, ಡಾ. ಶಿವರಾಜ್ ದೇಶಮುಖ್, ಗುರುಕಾಮ, ರಾಜುಗೌಡ ಉಕ್ಕಿನಾಳ, ರಾಜಶೇಖರ್ ಗೂಗಲ್, ವೆಂಕಟೇಶ,ದೇವೆಂದ್ರಪ್ಪ ಕೊನೇರ್, ಬಾಲಕೃಷ್ಣ,ಮಲ್ಲಿಕರ‍್ಜುನ ಕಂದಕೂರ್, ರಾಘವೇಂದ್ರ ಯಕ್ಸ್ಚಿಂತಿ, ಯಲ್ಲಪ್ಪ ನಾಯಕ್, ಹನುಮಂತ ಸೇರಿದಂತೆ ಇತರರು ಇದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";