ರಾಯಚೂರು,ಮಾ.೧೦: ನಗರಕ್ಕೆ ನೀರು ಪೂರೈಕೆ ಮಾಡುವ ರಾಂಪೂರ ಜಲಾಶಕ್ಕೆ ಶಾಸಕ ಡಾ.ಶಿವರಜ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ಮಾಡಿದರು.
ನಂತರ ಮಾತನಾಡಿದ ಅವರು ಮುಂದಿನ ಹತ್ತು ದಿನದಲ್ಲಿ ಗಣೇಕಲ್ ಜಲಾಶಯ ಭರ್ತಿಗೆ ಜಿಲ್ಲಾಧಿಕಾರಿಗಳು ಹಾಗೂ ಸಂಭAದಿಸಿದ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಒಂದು ವೇಳೆ ನಿರ್ಲಕ್ಷö್ಯ ತೋರಿದರೆ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ತುಂಗಭದ್ರ ಜಲಾಶಯ ದಿಂದ ನಿತ್ಯ ೧೩ ಕುಸೆಕ್ಸ್ ನೀರು ಹರಿಬಿಡಲಾಗಿದ್ದು, ನೀರು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಕೃಷ್ಣ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ಎರಡು ಪಂಪ್‌ಗಳ ಮೂರು ನೀರು ಸಂಗ್ರಹಿಸಲಾಗುತ್ತಿದೆ. ವೈಟಿಪಿಎಸ್ ಘಟಕಕ್ಕೆ ಕೃಷ್ಣ ನದಿ ನೀರು ಹರಿಸಿದ್ದರಿಂದ ಎರಡಜು ಪಂಪ್ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇನ್ನೂ ಮೂರು ಪಂಪ್‌ಗಳ ಮೂಲಕ ನೀರು ಭರ್ತಿಮಾಡಿಕೊಳ್ಳಬೇಕಿದೆ. ನೀರಿನ ಲಭ್ಯತೆ ಅನುಗುಣವಾಗಿ ಗಣೇಕಲ್ ಜಲಾಶಯ ೨೫ ಅಡಿ ನೀರು ಸಂಗ್ರಹಕ್ಕೆ ಅಧಿಕಾರಿಗಳು ಮೇಲುಸ್ತುವಾರಿ ಮಾಡಲು ಕೈ ಮುಗಿದು ಕೇಳುತ್ತೇನೆ. ಎರಡು ನದಿಗಳಿದ್ದರೂ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗುವದು ಅವಮಾನದ ಸಂಗತಿ ಎಂದರು. ಅಧಿಕಾರಿಗಳು ಮುಂದಿನ ಹತ್ತುದಿನಗಳಲ್ಲಿ ಗಣೇಕಲ್ ಜಲಾಶಯ ಭರ್ತಿ ಮಾಡಿಕೊಂಡು ಬೇಸಿಗೆ ದಿನಗಳಲ್ಲಿ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು, ಒಂದು ವೇಳೆ ನೀರು ಸಂಗ್ರಹಿಸದೇ ಹೋದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಶಶಿರಾಜ, ಕಡಗೋಳ ಆಂಜಿನೇಯ್ಯ, ಎನ್.ಶ್ರೀನಿವಾಸ ರೆಡ್ಡಿ, ಪೋಗಲ್ ಆಂಜಿನೇಯ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಾಂಪೂರ ಜಲಾಶಯಕ್ಕೆ ಶಾಸಕ ಡಾ.ಶಿವರಾಜ್ ಪಾಟೀಲ್ ಭೇಟಿ
WhatsApp Group
Join Now