ಬೀದರ, : ಜಿಲ್ಲೆಯಲ್ಲಿ ಹೊಸದಾಗಿ ಸಿಎಲ್.೭ ಹೊಸ ಮಧ್ಯದಂಗಡಿಗಳ ಪರವಾನಿಗೆ ಬಂದರೆ ಕೂಡಲೇ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಅಬಕಾರಿ ಸಚಿವರು ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ.ತಿಮ್ಮಾಪೂರ ನಿರ್ದೇಶನ ನೀಡಿದರು.
ಅವರು ಶನಿವಾರ ಅಬಕಾರಿ ಭವನ ಬೀದರದಲ್ಲಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಭಾಗವಹಿಸಿ ಮಾತಮಾಡಿದರು.
ಜಿಲ್ಲೆಯಲ್ಲಿ ರಾಷ್ಟಿçÃಯ ಹೆದ್ದಾರಿ ಹಾದು ಹೋಗಿದ್ದರಿಂದ ರಾಜ್ಯದ ಮಧ್ಯ ಬೇರೆ ರಾಜ್ಯಗಳಿಗೆ ಹೋಗದಂತೆ ನಿಗಾ ವಹಿಸಬೇಕು ಹಾಗೂ ಕದ್ದುಮುಚ್ಚಿ ಕಳ್ಳಬಟ್ಟಿ ಸರಾಯಿ ಕಂಡುಬAದರೆ ಕೂಡಲೆ ಕ್ರಮ ವಹಿಸಬೇಕು. ತಾಲ್ಲೂಕುಗಳಲ್ಲಿ ಅಬಕಾರಿ ಇಲಾಖೆಗಳಿಗೆ ಸ್ವಂತ ಕಟ್ಟಡಗಳಿಗೆ ಕೂಡಲೆ ಪ್ರಸ್ತಾವನೆಯನ್ನು ಸಲ್ಲಿಸಬೇಕು ಹಾಗೂ ಜಿಲ್ಲೆಯಲ್ಲಿರುವ ಚೆಕ್‌ಪೋಸ್ಟಗಳಲ್ಲಿ ಕಂಟೆನರಗಳ ವ್ಯವಸ್ಥೆ ಮಾಡಲಾಗಿದ್ದು ಅಧಿಕಾರಿಗಳು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಸಭೆಯಲ್ಲಿ ಕಲಬುರಗಿ ವಿಭಾಗೀಯ ಅಬಕಾರಿ ಜಂಟಿ ಆಯುಕ್ತರಾದ ಬಸವರಾಜ ಹಡಪದ, ಬೀದರ ಜಿಲ್ಲಾ ಅಬಕಾರಿ ಮುಖ್ಯಸ್ಥರಾದ ನಿಂಗನಗೌಡ ಪಾಟೀಲ, ಉಪಾಧ್ಯಕ್ಷರಾದ ಆನಂದ ಉಕ್ಕಲಿ, ಅಬಕಾರಿ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥತರಿದ್ದರು.