2.5 ಕೋಟಿ ವೆಚ್ಚದಲ್ಲಿ 1960 ಎಲ್ಇಡಿ ಸ್ಟ್ರೀಟ್ ಲೈಟ್ಸ್ ಅಳಚಡಿಕೆಗೆ ಸಚಿವ ಎನ್ಎಸ್ ಬೋಸರಾಜು ಚಾಲನೆ

Eshanya Times

ರಾಯಚೂರು:

ರಾಯಚೂರು ನಗರದ ನಗರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಬೆಳಕಿನ ವಾತಾವರಣ ನಿರ್ಮಿಸಲು ಹಾಗೂ ಜಾಸ್ತಿ ಜನ ಸಂಪರ್ಕವಿರುವ ಸ್ಥಳದಲ್ಲಿ ಸಾರ್ವಜನಿಕರಿಗೆ,  ವಾಹನ ಸವಾರರಿಗೆ ಸಂಚಾರಕ್ಕೆ ತೊಂದರೆಯಾಗದಂತೆ ನಗರದಾದ್ಯಂತ 90 ವ್ಯಾಟ್ ನ 1960 ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ತಿಳಿಸಿದರು.

ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರ ಕಾರ್ಯಾಲಯದಲ್ಲಿ ನಗರದಿಲ್ಲೆಡೆ ಬೀದಿ ದೀಪಗಳ ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿದರು.

ಕೆಕೆಆರ್ ಡಿಬಿ ಅದ್ಯಕ್ಷರ ವಿವೇಚನಾ ನಿಧಿ ಅಡಿ ಅನುದಾನದಲ್ಲಿ  2.5 ಕೋಟಿ ವೆಚ್ಚದಲ್ಲ ಎಲ್ಇಡಿ ಬೀದಿ ದೀಪಗಳ ಅಳವಡಿಸಲಾಗುತ್ತಿದೆ. ಇನ್ನು ಕೆಲವೆಡೆ ಬೀದಿ ದೀಪಗಳು ಕಡಿಮೆಯಾದರೆ  ಹೆಚ್ಚಿನ ಅನುದಾನವನ್ನು ನೀಡುವ‌ ಮೂಲಕ ನಗರದಲ್ಲಿ ಸ್ವಚ್ಚ, ಸುಂದರ, ಸುರಕ್ಷತೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದರು.

ಈ‌ ಸಂದರ್ಭದಲ್ಲಿ ನಗರಸಭೆ ಉಪಾದ್ಯಕ್ಷರಾದ ಸಾಜಿದ್ ಸಮೀರ್,  ಜಯಣ್ಣ,‌ ಕೆ ಶಾಂತಪ್ಪ, ಬಿ ರಮೇಶ, ತಿಮ್ಮಾರಡ್ಡಿ, ಜಿ ಶಿವಮೂರ್ತಿ,‌ ಜಿಂದಪ್ಪ,  ನರಸಿಂಹಲು ಮಾಡಗಿರಿ, ಹರಿ ಬಾಬು, ಭೀಮರಾಯ, ವಾಹೀದ್, ಅಫ್ಜಲ್ ಅಲಿ ನಾಯಕ್, ಸಣ್ಣ ನರಸರಡ್ಡಿ, ತೇಜಪ್ಪ, ಗೋವಿಂದರಡ್ಡಿ, ಅರುಣ ದೋತರಬಂಡಿ, ಬಸವರಾಜ, ಅಫ್ರೋಜ್, ತೇಜಪ್ಪ, ಅಲೀ, ಸೇರಿ ಅನೇಕರಿದ್ದರು‌.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";