ರಾಯಚೂರು- ೨೪ ಕೋಟಿ ೬೫ ಲಕ್ಷ ರೂಗಳ ಕೆರೆ ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ
ರಾಯಚೂರು: ರಾಜ್ಯದ ಕೆರೆಗಳ ಸಂರಕ್ಷಣೆ ನಮ್ಮ ಹೊಣೆಯಾಗಿದೆ. ಕೆರೆಗಳ ಸಂರಕ್ಷಣೆ ಮೂಲಕ ಅಂತರ್ಜಲ ವೃದ್ಧಿಗಾಗಿ ವೈಜ್ಞಾನಿಕ ಯೋಜನೆಗಳನ್ನು ರೂಪಿಸಿ ಈ ಭಾಗದ ಕೆರೆಗಳನ್ನು ಅಭಿವೃದ್ಧಿಗೊಳಿಸಲು ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯಿಂದ ೨೪ ಕೋಟಿ ೬೫ ಲಕ್ಷ ರೂ ವೆಚ್ಚದ ಕಾಮಗಾತಿಗಳಿಗೆಶಂಕು ಸ್ಥಾಪನೆ ಮಾಡಿದ್ದೇವೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್.ಎಸ್. ಬೋಸರಾಜು ಅವರು ತಿಳಿಸಿದರು.
ರಾಯಚೂರು ನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಲಿಯಾಬಾದ್ ಮಲ್ಲ ಕೆರೆಯಲ್ಲಿ ಭೂಮಿ ಪೂಜೆ ಮಾಡಿ ಮಾತನಾಡಿದರು.
೪ ಕೋಟಿ ೫೦ ಲಕ್ಷ ರೂ ವೆಚ್ಚದಲ್ಲಿ ದೇವನಪಲ್ಲಿ ಊರಕೆರೆಯ ಪುನರುಜ್ಜೀವನ ಮತ್ತು ಕಾಲುವೆಗಳ ಆಧುನಿಕರಣ ಕಾಮಗಾರಿ.
೩ ಕೋಟಿ ೨೫ ಲಕ್ಷ ರೂ ವೆಚ್ಚದಲ್ಲಿ ರಾಯಚೂರು ತಾಲೂಕಿನ ಮಲಿಯಾಬಾದ್ ಮಲ್ಲಕೆರೆ ಪುನರ್ ಜೀವನ ಮತ್ತು ಕಾಲುವೆಗಳ ಆಧುನಿಕರಣ ಕಾಮಗಾರಿ, ೩ ಕೋಟಿ ೪೦ ಲಕ್ಷ ವೆಚ್ಚದಲ್ಲಿ ಮಲೆಯಬಾದ್ ಸಮುದ್ರ ಕೆರೆಯ ಅಭಿವೃದ್ಧಿ ಕಾಮಗಾರಿ.
೨ ಕೋಟಿ ೭೫ ಲಕ್ಷ ವೆಚ್ಚದಲ್ಲಿ ರಾಯಚೂರು ತಾಲೂಕಿನ ಒಡವಟ್ಟಿ ಗ್ರಾಮದಲ್ಲಿ ಕೆರೆಯಪ್ಪನವರ ಜೀವನ ಮತ್ತು ಕಾಲುವೆಗಳ ಆಧುನಿಕರಣ, ೫ ೫ ಕೋಟಿ ವೆಚ್ಚದಲ್ಲಿ ರಾಯಚೂರು ತಾಲೂಕ ಕುರುಬ ದಡ್ಡಿ ಗ್ರಾಮದ ಯದ್ದಲಕುಂಟ ಕೆರೆಯ ಅಭಿವೃದ್ಧಿ ಕಾಮಗಾರಿ ಸೇರಿ ಏಗನೂರು ಗ್ರಾಮದ ಊರಕೆರೆ ಅಭಿವೃದ್ಧಿಗಾಗಿ ೩ ಕೋಟಿ ೭೫ ಲಕ್ಷ ಹಾಗೂ ೨ ಕೋಟಿ ವೆಚ್ಚದಲ್ಲಿ ರಾಜಲಬಂಡ ಗ್ರಾಮದ ಕುಂಟ ಕೆರೆಯ ಪುನರ್ಜೀವನ ಮತ್ತು ಕಾಲುವೆಗಳ ಆಧುನಿಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರಸ್ ಮುಖಂಡರಾದ ಜಯಣ್ಣ, ಬಶೀರುದ್ಧೀನ್, ಮೊಹಮ್ಮದ್ ಶಾಲಂ, ಬಸವರಾಜ ರಡ್ಡಿ, ಜಯಂತರಾವ್ ಪತಂಗೆ ಸೋಮನಾಥ, ಕುರಬದೊಡ್ಡಿ ಆಂಜನೇಯ್ಯ, ನರಸಿಂಹಲು ಮಾಡಗಿರಿ, ರುದ್ರಪ್ಪ ಅಂಗಡಿ, ಜಿ ಶಿವಮೂರ್ತಿ, ತಿಮ್ಮಪ್ಪ, ಮಹಾದೇವ್ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು