ಕುಡಿಯುವ ನೀರು, ಬಿತ್ತನೆ ಬೀಜ, ರಸಗೊಬ್ಬರದ ಕುರಿತು ನಡೆದ ಸಭೆ ನಗರ,ಜಿಲ್ಲೆಯಾದ್ಯಂತ ಶುದ್ದ ಕುಡಿಯುವ ನೀರು ಪೂರಕೆ ಕ್ರಮ ಕೈಗೊಳ್ಳಿ-  ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್

Eshanya Times
WhatsApp Group Join Now

ರಾಯಚೂರು,ಜೂ.21:

ನಗರ ಹಾಗೂ ಜಲ್ಲೆಯಾದ್ಯಂತ ಪಟ್ಟಣ ಹಾಗೂ ಗ್ರಾಮೀಣ ಪ್ರದೆಶಗಳಲ್ಲಿ ಆಶುದ್ದ,ಕಲಿಷಿತ ನೀರು ಪೂರೈಕೆ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಅನೇಕ ಕಡೆ ಸಂಕ್ರಾಮಿಕ ರೋಗ ಹರಡುವ ಭೀತಿ ಇದ್ದು, ಅದಷ್ಟು ಶುದ್ದ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಒಂದು ವೇಳೆ ನಿರ್ಲಕ್ಷö್ಯ ದಿಂದ ಯಾವುದೇ ಅಹಿತಕರ ಘಟನೆ ನಡೆದರೆ ಸಂಬAಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ವೈದ್ಯಕೀಯ ಶಿಕ್ಷಣ, ಕೌಶಲ್ಯಭಿವೃದ್ದಿ ಹಾಗೂ ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ್ ಪ್ರಕಾಶ್ ಪಾಟೀಲ್ ಎಚ್ಚರಿಕೆ ನೀಡಿದರು.

ಜೂ.೨೧ರ ಶುಕ್ರವಾರ ದಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕುಡಿಯುವ ನೀರು, ಅತಿವೃಷ್ಠಿ, ಬೀಜ ಮತ್ತು ರಸಗೊಬ್ಬರ ದಾಸ್ತಾನು ಬೇಡಿಕೆ ಪೂರೈಕೆ ಕುರಿತು ಹಮ್ಮಿಕೊಳ್ಳಲಾಗಿದ್ದ, ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಜಿಲ್ಲೆಯಲ್ಲಿನ ಕೆರೆಗಳು ತುಂಬಿಸಿರುವ ಬಗ್ಗೆ ತಾಲೂಕವಾರು ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್‌ರಿಂದ ಮಾಹಿತಿ ಪಡೆದರು.

 

ಡಾ.ಶಿವರಾಜ್ ಪಾಟೀಲ್ ಮಾತನಾಡಿ, ನಗರಕ್ಕೆ ಪೂರೈಕೆಯಾಗುತ್ತಿರುವ ನೀರು ಕುಡಿಯುವಲು ಯೋಗ್ಯವಿಲ್ಲವೆಂಬ ವರದಿ ಬಂದಿದೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ಮಾಹಿತಿ ನೀಡಬೇಂದರು. ವಿಧಾನ ಪರಿಷತ ಸದಸ್ಯ ಎ.ವಸಂತ ಕುಮಾರ ಮಾತನಾಡಿ, ರಾಂಪೂರ ಜಲಾಶಯದ ಬಳಿ ನೀರು ಪರೀಕ್ಷಿಸಲು ಲ್ಯಾಬ್ ಇಲ್ಲ, ಲ್ಯಾಬ್ ಟಿಕ್ನಿಸಿನ್ ಸಹ ಇಲ್ಲ ನೀರು ಯಾರು? ಪರೀಕ್ಷಿ ವರದಿ ನೀಡುತ್ತಿದ್ದಾರೆ. ಅಲ್ಲಂದ ಟೆಕ್ನಿಷಿಯನ್ ಅನರ್ಹರಾಗಿದ್ದು, ಅವರಿಂದಲೇ ತಮ್ಮಗೇ ಬೇಕಾದಂತೆ ಸುಳ್ಳು ವರದಿ ಸಿದ್ದಪಡಿಸುತ್ತರೆಂದು ದೂರಿದರು. ಅಲ್ಲೇ ನಗರಕ್ಕೆ ನೀರು ಪೂರೈಕೆ ಮಾಡುವ ಮೂರು ಕೇಂದ್ರಗಳು ಇವೆ. ಆದರೆ ನಗರಸಭೆ ಪೌರಾಯುಕ್ತರಿಗೆ  ಎರಡು ಕಡೆಯಿಂದ ನೀರು ಪೂರೈಕೆ ಮಾಡುವ ಬಗ್ಗೆ ಮಾಹಿತಿ ಇದೆ. ನಿಜಾಮರ ಕಾಲದ ನೀರು ಪೂರೈಕೆ ಸ್ಥಳವಿದ್ದು ಇದರ ಬಗ್ಗೆ ಪೌರಾಯಕ್ತರಿಗೆ ಮಾಹಿಹಿ ಇಲ್ಲ, ಅಲ್ಲಿಗೆ ಅವರು ಒಂದು ಬಾರಿಯೂ ಭೇಟಿ ನೀಡಿಲ್ಲ, ಅಲ್ಲಿಯ ನಗರಸಭೆ ಆಸ್ತಿ ಮತ್ತು ಕಟ್ಟಡಗಳು ಬೇರೆ ಖಾಸಗೀ ವ್ಯಕ್ತಿಗಳ ಪಾಲಾಗಿದ್ದು, ಅಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ದೂರಿದರು.

ತಕ್ಷಣ ಪೌರಾಯುಕ್ತರು ಸ್ಥಳಕ್ಕೆ ಭೇಟಿ ನೀಡಿ ನಗರಸಭೆ ಆಸ್ತಿ ಮತ್ತು ಕಟ್ಟಡಗಳನ್ನು ವಶ ಪಡೆದುಕೊಳ್ಳುವಂತೆ ಸಚಿವರು ಸೂಚನೆ ನೀಡಿದರು. ಪಾರಾಯುಕ್ತರು ಮಾತನಾಡಿ, ಕುಡಿಯುವ ನೀರಿನ ಪರೀಕ್ಷೆಯನ್ನು ಆರೋಗ್ಯ ಇಲಾಖೆಯ ಲ್ಯಾಬ್‌ನಿಂದ ಮಾಡಿಸಲಾಗುತ್ತಿದೆ. ಅವರು ನಗರಕ್ಕೆ ಪೂರೈಕೆಯಾಗುವ ಕುಡಿಯುವ ನೀರು ಯೋಗ್ಯವಾಗಿದೆ ಎಂದು ವರದಿ ನೀಡಿದ್ದಾರೆಂದು ಸಚಿವರಿಗೆ ತಿಳಿಸಿದದರು.

ಮಾನವಿ ಶಾಸಕ ಹಂಪಯ್ಯ ಸಾಹುಕಾರ ಮಾತನಾಡಿ, ಮಾನವಿ ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ, ಆದರೆ ಅಧಿಕಾರಿಗಳು ಇಲ್ಲ ಸಭೆಗೆ ಬಂದು ಸಚಿವರ ಮುಂದು ಸುಳ್ಳು ವರದಿ ನೀಡುತ್ತಿದ್ದಾರೆಂದು ಹೇಳಿದರು.

ನಾನೂ ಕಾಂಗ್ರೆಸ್ ಪಕ್ಷದ ಶಾಸಕನೋ ಅಥವಾ ಶಿವರಾಜ್ ಪಾಟೀಲ್ ಪಕ್ಷದ ಶಾಸಕನೆಂದು ಅಧಿಕಾರಿಗಳು ತಿಳಿದುಕೊಂಡಿದ್ದರೋ ಗೊತ್ತಿಲ್ಲ, ಅಧಿಕಾರಿಗಳು ನನ್ನನು ಸಂಪರ್ಕಿಸುವುದಿಲ್ಲ, ಯಾವುದೇ ಮಾಹಿತಿ ನೀಡುವುದಿಲ್ಲ, ಮತ್ತು ಯಾವುದೇ ಕೆಲಸ ಹೇಳಿದರೂ ಮಾಡುತ್ತಿಲ್ಲ, ಮಾನವಿ ಪಟ್ಟಣ ಮತ್ತು ಹಳ್ಳಿ ಜನ ನನ್ನನು ಭೇಟಿಯಾಗಿ ಕುಡಿಯುವ ನೀರು ಬರುತ್ತಿಲ್ಲ ನೀವು ಏನೂ ಮಾಡುತ್ತಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಅವರಿಗೆ ಯಾರು ಉತ್ತರ ಹೇಳಬೇಕು ಎಂದು ಆಕ್ರೋಶ ವ್ಯಕ್ತಪಸಿದರು.

ಕುಡಿಯುವ ನೀರಿನ ಸಮಸ್ಯೆಗೆ ಸಂಭAದಿಸಿದAತೆ ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಕುಡಿಯುವ ನೀರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವAತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಿಂದ ಒಟ್ಟು ೨೨೪ ಬೋರ್‌ವೆಲ್ ಬಾಡಿಗೆಗೆ ಪಡೆದ್ದು, ಸುಮಾರು ೧೪೧ ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ನಗರ ಪ್ರದೇಶದ ಒಟ್ಟು ೧೧೭೬ ಬೋರ್‌ವೆಲ್‌ಗಳಿದ್ದು, ಅದರ ಪೈಕಿ ೧೦೫೨ ಕಾರ್ಯನಿರ್ವಹಿಸುತ್ತಿವೆ. ಇನ್ನೂ ೧೧೮ ಬೋರ್‌ವೆಲ್‌ಗಳು ನಿರುಪಯಕ್ತವಾಗಿದ್ದು, ಕೂಡಲೇ ದುರಸ್ಥಿ ಕಾರ್ಯಕೈಗೊಂಡು ಯಾವುದೇ ಸಮಸ್ಯೆಯಾಗದಂತೆ ನೀರು ಸರಬರಾಜು ಮಾಡಲು ಕ್ರಮವಹಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ವಿವಿಧ ರಸಗೊಬ್ಬರ ಬೇಡಿಕೆ ಹಿನ್ನಲೆಯಲ್ಲಿ ಯೂರಿಯಾ ೩೫೦೨೨ ಬೇಡಿಕೆಯಿದ್ದು, ೪೯೪೨೧.೧೭ ದಾಸ್ತಾನು. ಡಿಎಪಿ ೨೨೩೪೪ ಬೇಡಿಕೆಯಿದ್ದು, ೧೬೫೧೦.೯೦ ದಾಸ್ತಾನು. ಎಮ್‌ಒಪಿ ೨೦೫೦ ಬೇಡಿಕೆಯಿದ್ದು, ೧೪೮೮.೮೫ ದಾಸ್ತಾನು. ಎನ್‌ಪಿಕೆ ೫೧೯೧೯ ಬೇಡಿಕೆಯಿದ್ದು, ೪೬೫೮೬.೨೦ ದಾಸ್ತಾನು. ಎಸ್‌ಎಸ್‌ಪಿ ೧೭೬೫ ಬೇಡಿಕೆಯಿದ್ದು, ೭೭೦.೨೦ ದಾಸ್ತಾನು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೧೧೩೧೦೦ ಬೇಡಿಕೆಯಿದ್ದು, ೧೧೪೭೭೭.೩೨ರಷ್ಟು ದಾಸ್ತನು ರಷ್ಟು ರಸಗೊಬ್ಬರ ದಾಸ್ತಾನು ಲಭ್ಯವಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಜಿಲ್ಲೆಯಲ್ಲಿ ೨೦೨೪-೨೫ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಬೀತ್ತನೆ ಬೀಜ ಹಾಗೂ ರಸಗೊಬ್ಬರ ವಿತರಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಹಾಗೂ ರೈತರಿಗೆ ಅವಶ್ಯವಿರುವ ಬಿತ್ತನೆ ಬೀಜ, ರಸಗೊಬ್ಬರಗಳನ್ನು ರೈತರ ಬೇಡಿಕೆಯನ್ವಯ ನಿಯಮಿತವಾಗಿ ಪೂರೈಸಬೇಕು. ಇದಕ್ಕಾಗಿ ಪ್ರತಿ ತಾಲ್ಲೂಕಿಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಭೇಟಿ ನೀಡಿ ಪರಿಶೀಲಿಸಬೇಕು. ಕಳಪೆ ಬೀಜ ಮತ್ತು ರಸಗೊಬ್ಬರ ಪೂರೈಕೆ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಕೈಗೊಳ್ಳಬೇಕೆಂದು ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತುಂಗಭದ್ರ ಎಡದಂಡೆ ಹಾಗೂ ನಾರಾಯಣಪುರ ಬಲದಂಡೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ರೈತರಿಗೆ ನೀರು ತಲುಪದೇ ಬೆಳೆಯಾನಿಗಿದೆ. ಪಹಣಿಯಲ್ಲಿ ನೀರಾವರಿ ಪ್ರದೇಶ ಎಂದು ನಮೂದಿಸಿರುವುದರಿಂದ ಪರಿಹಾರದಿಂದ ವಂಚನೆಗೊAಡಿರುವ ಕುರಿತು ಶಾಸಕ ಶಿವರಾಜ್ ಪಾಟೀಲ್ ಅವರು ಜಿಲ್ಲಾ ಉಸ್ತು ಉಸ್ತುವಾರಿ ಸಚಿವರ ಗಮನಕ್ಕೆ ತಂದರು. ಕೂಡಲೇ ಬೆಳೆ ನಷ್ಟ ಪರಿಹಾರ ವಿತರಣೆಯಲ್ಲಿ ನೀರು ಬಾರದೆ ಇರುವ ಅಚ್ಚುಕಟ್ಟು ಪ್ರದೇಶದ ರೈತರ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

೨೦೨೪ನೇ ಸಾಲಿನ ಬಾರಿ ಮಳೆ ಅಥವಾ ಪ್ರವಾಹ, ಸಿಡಿಲು ಬಡಿತದಿಂದ ಜಿಲ್ಲೆಯ ಒಂದು ಪ್ರಕರಣೆ ದಾಖಲಾಗಿದ್ದು, ೫ಲಕ್ಷ ರೂ.ಗಳ ಪರಿಹಾರ ನೀಡಲಾಗಿದೆ. ಜಾನುವಾರು ಜೀವ ಹಾನಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ೫ ಪ್ರಕರಣ ದಾಖಲಾಗಿವೆ. ಒಟ್ಟು ೧,೦೧,೫೦೦ರೂ.ಗಳ ಪರಿಹಾರ ನೀಡಲಾಗಿದ್ದು, ಇನ್ನೂ ಜಿಲ್ಲೆಯಲ್ಲಿ ಯಾವುದಾದರು ಇದೇ ತರ ಪ್ರಕರಣಗಳು ಇದ್ದಲ್ಲಿ ಕೂಡಲೇ ಪರಿಹಾರ ಧನ ವಿತರಿಸಬೇಕು. ಪರಿಹಾರ ಧನ ವಿತರಣೆಯಲ್ಲಿ ವಿಳಂಬ ನೀತಿ ಯಾವುದೇ ಕಾರಣಕ್ಕೂ ಅನುಸರಿಸಬಾರದೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯಗ ಮಂಡಳಿಯ ಅಧ್ಯಕ್ಷರು ಹಾಗೂ ಸಿಂಧನೂರು ಕ್ಷೇತ್ರದ ಶಾಸಕ ಪಂನಗೌಡ ಬಾದರ್ಲಿ, ಸಂಸದ ಜಿ.ಕುಮಾರ ನಾಯಕ, ಮಾನವಿ ಶಾಸಕ ಜಿ.ಹಂಪಯ್ಯ ನಾಯಕ, ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ್, ಎಪಿಎಮ್‌ಸಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ನಗಾರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಪ್ರಭಾರಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕರಾಮ್ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ನಿಖಿಲ್ ಬಿ. ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್, ಸಹಾಯಕ ಆಯುಕ್ತರಾದ ಅವಿನಾಶ್ ಶಿಂಧೆ, ಮೈಬೂಬಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವಪೂರೆ ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಸುರೇಂದ್ರ ಬಾಬು, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್. ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

WhatsApp Group Join Now
Telegram Group Join Now
Share This Article

Eshanya Times, Regional Kannada Daily is a leading news paper in Kalyana Karnataka (North Karnataka). Which is having large number of circulation in the districts of Raichur, Koppla, Bellary, Yadgir, Gulbarga, Bidar, Vijayanagara, Bagalkote and in the capital city of Bangalore.

This News Paper having Registred Office in Raichur City, Karnataka State.

The main mooto of the Eshanya Times news paper is to serve the nation and to give wide publicity of Government Developmental programmes and policies which are execuited in Government and also to give social justice to the people of Karnataka.

Copyright © 2024. Eshanya Times.  All Rights Reserved,

Powered By KhushiHost
24/7 Help Desk Support – Call Now +919060329333 

error: Content is protected !!