ರಾಯಚೂರು,ಮೇ.೩೧: ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಲೆಗಳಿಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕೆಂದು ನಮ್ಮ ಕರ್ನಾಟಕ ಜನತಾ ವೇದಿಕೆ ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ರಾಜ್ಯದಾದ್ಯಂತ ಶಾಲೆಗಳು ಆರಮಭವಾಗುತ್ತಿದ್ದು, ಆದರೆ ಹಲವಾರು ಜಇಲ್ಲೆಗಳಲ್ಲಿ ಸಾವಿರಾರು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ರಾಜ್ಯದಲ್ಲಿ ೪೫,೨೦೦ ಪ್ರಾಥಮಿಕ ಶಾಲೆಗಳು ಹಾಗೂ ೫,೩೫೦ ಪ್ರೌಢಸಾಲೆಗಳಿವೆ. ಪ್ರಾಥಮಿಕ ಶಾಲೆಗಳಲ್ಲಿ ೫೦ ಸಾ. ಪ್ರೌಢಶಾಲೆಗಳಲಿ ೧೦ ಸಾ. ಶಿಕ್ಷಕರ ಕೊರತೆ ಇದ್ದು, ಶಾಲೆಯ ಆರಂಭದ ಹಂತದಲ್ಲಿಯೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದರಿಂದ ಶಾಲಾ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಸರಕಾರ ಕಳೆದ ವರ್ಷದಂತೆ ಈ ವರ್ಷವು ಅತಿಥಿ ಶಿಕ್ಷಕರನ್ನು ಜೂನ್ ತಿಂಗಳಲ್ಲಿಯೇ ನೇಮಕ ಮಾಡಿಕೊಂಡು ಮಕ್ಕಳ ಶೈಕ್ಷಣಿಕ ಗುಣಮಟ್ಟಕ್ಕೆ ಸರಕಾರ ಒತ್ತು ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಮೆರಿಟ್ ಪದ್ದತಿಯನ್ನು ಕೈ ಬಿಟ್ಟು ಕಳೆದ ಶೈಕ್ಷಣಿಕ ವರ್ಷದಲ್ಲಿ ಸೇವೆ ಸಲ್ಲಿಸಿದ ಅತಿಥಿ ಶಿಕ್ಷಕರನ್ನು ಪುನಃ ನೇಮಕ ಮಾಡಿಕೊಳ್ಳಬೇಕಿಉ, ಅತಿಥಿ ಶಿಕ್ಷಕರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕೆಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯ÷್ಕಷ ಜಿ.ಕೆ.ನಾಗರಾಜ, ಸುಲೋಚನಾ, ಸರಸ್ವತಿ, ರೇಣುಕಮ್ಮ, ಶಬಾನ ಬೇಗಂ, ಸುಮಂಗಲ, ಸುಜಾತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.