ರಾಯಚೂರು, ಜೂ.23: ಮುನ್ನೂರು ಕಾಪು ಸಮಾಜ ಆಯೋಜಿಸಿದ ಮೂರು ದಿನದ ಮುಂಗಾರು ಸಾಂಸ್ಕೃತಿಕ ಭಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ವಿಜೇತಗೊಂಡ ಜೋಡು ಎತ್ತುಗಳಿಗೆ ಬಹುಮಾನ ವಿತರಿಸಲಾಯಿತು.
ಕರ್ನಾಟಕ ತೆಲಂಗಾಣ ಮತ್ತು ಆಂಧ್ರಪ್ರದೇಶ ಗಾಜ ಗಾತ್ರದ 9 ಜೋಡು ಎತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಗರಿಷ್ಠ 20 ನಿಮಿಷದಲ್ಲಿ ಎರಡುವರೆ ಟನ್ ಭಾರ ಎಳೆಯುವ ಸ್ಪರ್ಧೆ ಗಂಜ್ ಆವರಣದಲ್ಲಿ ನಡೆಯಿತು. ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಂಗವಾಗಿ ಇಂದು ಕೊನೆಯ ದಿನದ ಎರಡುವರೆ ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ನಂದ್ಯಾಲ ಜಿಲ್ಲೆಯ ಪಿಆರ್ ಪಾಳ್ಯಂ ಗ್ರಾಮದ ಎಂ ನಾಗಯ್ಯ ಅವರ ಜೋಡು ಎತ್ತು ಪ್ರಥಮ ಬಹುಮಾನ ಪಡೆದುಕೊಂಡಿದೆ. ದೇವದುರ್ಗ ತಾಲೂಕಿನ ಮಾರಪಹಳ್ಳಿ ಗ್ರಾಮದ ರವಿಗೌಡ ಅವರ ಜೋಡು ಎತ್ತು ದ್ವಿತೀಯ ಸ್ಥಾನ ಬಹುಮಾನ ಅಲಂಕರಿಸಿದೆ.
ಕರ್ನೂಲ್ ಜಿಲ್ಲೆಯ ಯಾದರೆಡ್ಡಿಪಾಳ್ಯಂ ಗ್ರಾಮದ ಅರೆಕೇಶರೆಡ್ಡಿ ಅವರ ಜೋಡು ಎತ್ತು ತೃತೀಯ ಸ್ಥಾನ, ಬಾಬಟ್ಲ ಜಿಲ್ಲೆಯ ವೇಟಾಪಾಳ್ಯಂ ಗ್ರಾಮದ ಅತೋಟಿ ಚೌದ್ರಿ ಶಿವಕೃಷ್ಣ ಚೌದರಿ ಅವರ ಜೋಡು ಎತ್ತು ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
ಅನ0ತಪೂರು ಜಿಲ್ಲೆಯ ತ್ರೋಪತುರ್ತಿ ಗ್ರಾಮದ ಕೆ. ಚನ್ನಪ್ಪ ಅವರ ಜೋಡು ಎತ್ತು ಐದನೇ ಸ್ಥಾನ, ಅದೇ ರೀತಿ ಕರ್ನೂಲ್ ಜಿಲ್ಲೆಯ ಗುಡಕಲ್ ಗ್ರಾಮದ ಗುಡಕಲ್ ದಾಸ್ ಅವರ ಜೋಡು ಎತ್ತು ಆರನೇ ಸ್ಥಾನ ಪಡೆದರೆ ದೇವದುರ್ಗ ತಾಲೂಕಿನ ರಾಮದುರ್ಗ ಗ್ರಾಮದ ವೆಂಕಟೇಶ ನಾಯಕ ಅವರ ಜೋಡು ಎತ್ತು ಏಳನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.
ಸ್ಪರ್ಧೆಯಲ್ಲಿ ವಿಜೇತವಾದ ಜೋಡಿ ಎತ್ತುಗಳಿಗೆ ಹಬ್ಬದ ರೂವಾರಿ ಮಾಜಿ ಶಾಸಕ ಪಾಪಾರೆಡ್ಡಿ ಮತ್ತು ಮುನ್ನೂರು ಕಾಪು ಸಮಾಜ ಅಧ್ಯಕ್ಷರಾದ ಬೆಲ್ಲಂ ನರಸರೆಡ್ಡಿ ಮತ್ತು ಸಮಾಜದ ಮುಖಂಡರು ಬಹುಮಾನ ಜೊತೆಗೆ ನಗದು ವಿತರಿಸಿದರು.