ರಾಯಚೂರು,ಮಾ.೧೬:-
ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಭಾರತ ಚುನಾವಣೆ ಆಯೋಗದಿಂದ ಚುನಾವಣೆ ವೇಳಾಪಟ್ಟಿ ಘೋಷಿಸಲಾಗಿದ್ದು, ರಾಯಚೂರು ಲೊಕಸಭಾ ಕ್ಷೇತ್ರ-೬ರ ಚುನಾವಣೆಗೆ ಸಂಬAಧಿಸಿದAತೆ ಮೇ.೭ರಂದು ಮತದಾನ ಹಾಗೂ ಜೂ.೪ರಂದು ಮತ ಏಣಿಕೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಹೇಳಿದರು.
ಅವರು ಮಾ.೧೬ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಮಡಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಏ.೪ರಂದು ನಾಮಪತ್ರ ಅಧೀಸೂಚನೆ ಹೊರಡಿಸಲಾಗುವುದು, ಏ.೧೯ರಂದು ನಾಮ ಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಏ.೨೦ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏ.೨೨ರಂದು ನಾಮಪತ್ರಗಳನ್ನು ವಾಪಸ್ಸು ಪಡೆಯಬಹುದಾಗಿದೆ. ಉಳಿದಂತೆ ಮೇ.೭ರಂದು ಜಿಲ್ಲೆಯಲ್ಲಿ ಮತದಾನ ನಡೆಯಲಿದ್ದು, ಜೂ.೪ರಂದು ದೇಶದಾದ್ಯಂತ ಮತ ಎಣಿಕೆ ಪ್ರಕ್ರಿಯೆ ಜರುಗಲಿದೆ ಎಂದು ತಿಳಿಸಿದರು.
ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸಂಬಧಪಟ್ಟAತೆ ೮ ಕ್ಷೇತ್ರಗಳಿದ್ದು, ಶೋರಪುರ, ಶಾಹಪುರ, ಯಾದಗಿರಿ, ರಾಯಚೂರು ಗ್ರಾಮೀಣ, ರಾಯಚೂರು ನಗರ ಕ್ಷೇತ್ರ, ಮಾನವಿ, ದೇವದುರ್ಗ ಮತ್ತು ಲಿಂಗಸುಗೂರು ಕ್ಷೇತ್ರಗಳು ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿವೆ. ಈ ಎಂಡು ಕ್ಷೇತ್ರಗಳಲ್ಲಿ ಒಟ್ಟು ೨೨೦೩ ಮತಗಟ್ಟೆಗಳಿವೆ ಎಂದರು.
ಜಿಲ್ಲೆಯಲ್ಲಿ ಒಟ್ಟು ೧೯,೯೩,೭೫೫ ಮತದಾರರಿದ್ದು, ೯,೮೫,೬೭೫ ಪುರುಷ ಮತದಾರರು, ೧೦,೦೫,೨೪೬ ಮಹಿಳಾ ಮತದಾರರಿದ್ದು, ೨೯೭ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ೩೩೪ ಸೇವಾ ಮತದಾರರಿದ್ದಾರೆ. ಇದರಲ್ಲಿ ೪೨,೩೯೪ ಯುವ ಮತದಾರರಿದ್ದು, ೨೨,೮೫೭ ವಿಕಲಚೇತನ ಮತದಾರರಿದ್ದಾರೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಗೆ ಸಂಬAಧಿಸಿದAತೆ ನೀತಿ ಸಂಹಿತೆ ಯ ಉಲ್ಲಂಘನೆಗಾಘಿ ಮತ್ತು ವಿವಿಧ ವಿಷಯಗಳಿಗಾಗಿ ದೂರುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ೧೯೫೦ಗೆ ಕರೆ ಮಾಡುವ ಮೂಲಕ, ಸಿವಿಜಿಲ್ ಆ್ಯಪ್ ಅಥವಾ ಇತರೆ ಮಾಧ್ಯಮದ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದರು.
ಲೋಕಸಭಾ ಚುನಾವಣೆಗೆ ೪೦೦೬ ಬಿಯು, ೨೭೩೬ ಸಿಯು ಹಾಗೂ ೨೮೬೯ ವಿವಿಪ್ಯಾಟ್‌ಗಳು ಸ್ವೀಕೃತಿಯಾಗಿದ್ದು, ಈ ಎಲ್ಲಾ ಯಂತ್ರಗಳ ಪ್ರಥಮ ಹಂತದ ತಪಾಸಣೆ ಕಾರ್ಯವು ಪೂರ್ಣಗೊಂಡಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ೫ ಅಂತರಾಜ್ಯ , ೯ ಅಂತರ ಜಿಲ್ಲೆ ಹಾಗೂ ೯ ಚೆಕ್‌ಪೋಸ್ಟ್ಗಳನ್ನು ಜಿಲ್ಲೆಯ ಒಳಗೆ ಸ್ಥಾಪಿಸಲಾಗಿದ್ದು, ಇದರ ನಿರ್ವಹಣೆಯನ್ನು ೨೪/೭ ಸಿಎಪಿಎಫ್ ಹಾಗೂ ಜಾರಿ ಸಂಸ್ಥೆಗಳು ನಿಗವಹಿಸಲಾಗುವುದು. ಎಂದರು. ಜಿಲ್ಲೆಯಲ್ಲಿ ೧೪ ಜನರನ್ನು ಗಡಿಪಾರ ಮಾಡಲು ವರದಿ ನೀಡಲಾಗಿದೆ. ಚೆಕ್ ಪೋಸ್ಟ್ಗಳಲ್ಲಿ ಸೂಕ್ತ ಭದ್ರತೆಯನ್ನು ಕಲ್ಪಿಸಲಾಗುವುದು ಮತ್ತು ಯಾವುದೇ ವ್ಯಕ್ತಿಯೂ ೫೦ ಸಾವಿರಕ್ಕಿಂತ ಹೆಚ್ಚಿನ ಹಣವನ್ನು ದಾಖಲೆ ರಹಿತವಾಗಿ ತೆಗೆದುಕೊಮಡು ಹೋಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.