Ad imageAd image

ಲೋಕಸಭಾ ಚುನಾವಣೆ | ಬೀದರ್ : ಭಾಲ್ಕಿ ಕ್ಷೇತ್ರದಲ್ಲಿ ಅತ್ಯಾದಿತ ಮತದಾನ

Eshanya Times

ಬೀದರ. ಮೇ.೦೯ : ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ ೬೫.೪೫ರಷ್ಟು ಮತದಾನ ದಾಖಲಾಗಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಭಾಲ್ಕಿಯಲ್ಲಿ ಅತಿ ಹೆಚ್ಚು ಜನ ಹಕ್ಕು ಚಲಾವಣೆ ಮಾಡಿದ್ದಾರೆ.
ಭಾಲ್ಕಿ ಕ್ಷೇತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಪ್ರತಿನಿಧಿಸುತ್ತಾರೆ.
ಅವರ ಮಗ ಸಾಗರ್‌ ಖಂಡ್ರೆ ಈ ಸಲದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ರ‍್ಥಿಯೂ ಹೌದು. ಶೇ ೭೦.೦೫ರಷ್ಟು ಮತದಾನ ಭಾಲ್ಕಿಯಲ್ಲಾಗಿದ್ದು, ಈ ಕ್ಷೇತ್ರದಲ್ಲಿ ಯಾರಿಗೆ ಮುನ್ನಡೆ ಸಿಗಲಿದೆ ಎಂಬ ಸಹಜ ಪ್ರಶ್ನೆ ಸರ‍್ವಜನಿಕರಲ್ಲಿ ಮೂಡಿದೆ.
ಇನ್ನು, ಭಾಲ್ಕಿ ನಂತರ ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲೂ ಮತದಾರರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ಶೇ ೬೯.೮೦ರಷ್ಟು ಮತದಾನ ದಾಖಲಾಗಿದ್ದು, ಕ್ಷೇತ್ರದಲ್ಲಿ ಅತಿ ಹೆಚ್ಚು ಮತ ಚಲಾವಣೆಯಾದ ಕ್ಷೇತ್ರಗಳಲ್ಲಿ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಔರಾದ್‌, ಹುಮನಾಬಾದ್‌ ಕ್ಷೇತ್ರಗಳಿವೆ. ಕ್ರಮವಾಗಿ ಎರಡೂ ಕ್ಷೇತ್ರಗಳಲ್ಲಿ ಶೇ ೬೬.೯೪, ಶೇ ೬೬.೨೮ರಷ್ಟು ಜನ ಹಕ್ಕು ಚಲಾಯಿಸಿದ್ದಾರೆ.
ಇದಾದ ಬಳಿಕ ಬೀದರ್‌ ಕ್ಷೇತ್ರವಿದ್ದು, ಶೇ ೬೫.೩೦ರಷ್ಟು ಮತದಾನಕ್ಕೆ ಸಾಕ್ಷಿಯಾಗಿದೆ. ಬಸವಕಲ್ಯಾಣದಲ್ಲಿ ಶೇ ೬೩.೫೩ರಷ್ಟು, ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ ೫೯.೦೬ರಷ್ಟು ಮತದಾನ ದಾಖಲಾಗಿದೆ. ಈ ಕ್ಷೇತ್ರವನ್ನು ಕಾಂಗ್ರೆಸ್‌ ಶಾಸಕರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯ ಸಲಹೆಗಾರ ಬಿ.ಆರ್‌. ಪಾಟೀಲ ಅವರು ಪ್ರತಿನಿಧಿಸುತ್ತಾರೆ.
ಗೆಲುವಿನ ಲೆಕ್ಕಾಚಾರ ಶುರು: ಮತದಾನ ಮುಗಿದ ಬೆನ್ನಲ್ಲೇ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಕಣದಲ್ಲಿ ಒಟ್ಟು ೧೮ ಅಭ್ರ‍್ಥಿಗಳಿದ್ದರು. ಆದರೆ, ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ನಡೆದಿದೆ.
೨೦೧೯ರಲ್ಲಿ ನಡೆದ ಚುನಾವಣೆಯಲ್ಲಿ ಶೇ ೬೨.೫೮ರಷ್ಟು ಮತದಾನ ದಾಖಲಾಗಿತ್ತು. ಈಗ ಶೇ ೬೫.೪೫ರಷ್ಟು ದಾಖಲಾಗಿದ್ದು, ತುಸು ಹೆಚ್ಚಳ ಕಂಡಿದೆ.
ಅಧಿಕ ಮತದಾನ ನಡೆದಿರುವುದಕ್ಕೆ ಕಾಂಗ್ರೆಸ್‌ನವರು ಕೇಂದ್ರ ಸಚಿವ, ಬಿಜೆಪಿ ಅಭ್ರ‍್ಥಿ ಭಗವಂತ ಅವರ ವಿರೋಧಿ ಅಲೆಯೇ ಇದಕ್ಕೆ ಕಾರಣ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಇನ್ನು, ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯಿಂದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಹಿಂದಿನ ಸಲಕ್ಕಿಂತ ಈ ಸಲ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲುವುದಾಗಿ ಬಿಜೆಪಿ ಮುಖಂಡರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಆದರೆ, ಈ ಸಲದ ಚುನಾವಣೆಯಲ್ಲಿ ಹೇಳಿಕೊಳ್ಳುವಂತಹ ಮೋದಿ ಅಲೆ ಇರಲಿಲ್ಲ. ಭಗವಂತ ಖೂಬಾ ಅವರು ಕಳೆದ ೧೦ ರ‍್ಷಗಳಲ್ಲಿ ಮಾಡಿರುವ ಕೆಲಸಗಳು ಹಾಗೂ ಸಚಿವ ಈಶ್ವರ ಬಿ. ಖಂಡ್ರೆಯವರ ಮನೆತನದ ರ‍್ಚಸ್ಸು, ಗ್ಯಾರಂಟಿಗಳ ನಡುವಿನ ಚುನಾವಣೆಯಾಗಿ ಬದಲಾಗಿತ್ತು. ಖೂಬಾ ಹಾಗೂ ಖಂಡ್ರೆಯವರಿಗೆ ಇದು ಪ್ರತಿಷ್ಠೆಯ ಚುನಾವಣೆ ಆಗಿದ್ದು, ಮತದಾರರು ಯಾರಿಗೆ ಆಶರ‍್ವದಿಸಿದ್ದಾರೆ ಎನ್ನುವುದನ್ನು ತಿಳಿಯಲು ಜೂನ್‌ ೪ರ ವರೆಗೆ ಕಾಯಬೇಕು.
ಬೀದರ್‌ ಲೋಕಸಭೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರವಾರು ಮತದಾನದ ವಿವರ
ಕ್ಷೇತ್ರದ ಹೆಸರು; ಮತದಾನದ ಪ್ರಮಾಣ (ಶೇಕಡಾವಾರು) ಒಟ್ಟು ಮತದಾನ; ೬೫.೪೫ ಬೀದರ್‌; ೬೫.೩೦ ಬೀದರ್‌ ದಕ್ಷಿಣ; ೬೯.೮೦ ಬಸವಕಲ್ಯಾಣ; ೬೩.೫೩ ಭಾಲ್ಕಿ; ೭೦.೦೫ ಹುಮನಾಬಾದ್‌; ೬೬.೨೮ ಔರಾದ್‌; ೬೬.೯೪ ಆಳಂದ; ೫೯.೦೬ ಚಿಂಚೋಳಿ; ೬೩.೩೩ (ಮೂಲ: ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಬೀದರ್‌)

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";