ಕಾರಟಗಿ ಆ.೧೯ :
ರಕ್ಷಾ ಬಂಧನ ಅಣ್ಣ ತಂಗಿ, ಅಕ್ಕ ತಮ್ಮನ ನಡುವಿನ ಸಂಬAಧವನ್ನು ಗಟ್ಟಿಗೊಳಿಸುತ್ತದೆ, ವಿದ್ಯಾರ್ಥಿನಿಯರು ಎಲ್ಲರೊಂದಿಗೆ ಉತ್ತಮ ಸಂಬAಧವನ್ನು ಉಳಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಕನಸನ್ನು ಕಂಡು ಗುರಿ ಮುಟ್ಟುವ ಪ್ರಯತ್ನ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಇಲ್ಲಿನ ಅವರ ಗೃಹ ಕಚೇರಿಯಲ್ಲಿ ತಾಲೂಕಿನ ಸಿದ್ದಾಪುರದ ಕಸ್ತೂರಿಬಾ ಗಾಂಧಿ ಬಾಲಿಕಾ ವಿದ್ಯಾಲಯದ ವಿದ್ಯಾರ್ಥಿನಿಯರಿಂದ ಸೋಮವಾರ ರಾಖಿಯನ್ನು ಕಟ್ಟಿಕೊಂಡ ನಂತರ ಮಾತನಾಡಿದರು.
ಎಲ್ಲಾ ಕ್ಷೇತ್ರಗಳಲ್ಲಿ ಬಾಲಕಿಯರು ಉತ್ತಮ ಸಾಧನೆ ಮಾಡುತ್ತಿದ್ದಾರೆ. ನಮ್ಮ ಕನಕಗಿರಿ ಕ್ಷೇತ್ರದಲ್ಲಿನ ಬಾಲಕಿಯರು ಕೇವಲ ವಿದ್ಯಾಭ್ಯಾಸದ ಕಡೆಗೆ ಮೊದಲು ಹೆಚ್ಚು ಗಮನ ಹರಿಸಿ ತಂದೆ, ತಾಯಿಗಳಿಗೆ, ಕಲಿಸಿದ ಗುರುಗಳಿಗೆ ಮತ್ತು ಹುಟ್ಟಿದ ಊರಿಗೆ ಉತ್ತಮ ಹೆಸರು ತರಬೇಕು, ರಾಖಿ ಹಬ್ಬ ಒಡೆದು ಹೋದ ಸಂಬAಧಗಳನ್ನು ಜೋಡಿಸುವ ಕೆಲಸವನ್ನು ಮಾಡುತ್ತದೆ. ನೀವು ಎಲ್ಲರೊಂದಿಗೆ ಉತ್ತಮ ಸಂಬAಧ, ಒಳ್ಳೆಯ ಬಾಂಧವ್ಯದೊAದಿಗೆ ವಿದ್ಯಾರ್ಥಿ ಜೀವನವನ್ನು ಮುನ್ನಡೆಸಿ. ರಾಖಿ ಹಬ್ಬಕ್ಕೆ, ರಕ್ಷಾ ಬಂಧನ ದಿನಕ್ಕೆ ತನ್ನದೆ ಆದ ಹಿತಿಹಾಸವಿದೆ ಎಂದು ಸಚಿವ ತಂಗಡಗಿ ಹೇಳಿದರು.
ಉರ್ದು ಕಲಿಕಾ ಬಾಲಕಿಯರೆಲ್ಲರೂ ಸಚಿವ ಶಿವರಾಜ್ ತಂಗಡಗಿಗೆ ರಾಖಿ ಕಟ್ಟಿ ಸಹಿ ತಿನಿಸಿದರು. ಶಾಲೆಯ ಮುಖ್ಯಗುರು ಚಂದ್ರಶೇಖರ ಗಣವಾರಿ ಸಚಿವರಿಗೆ ಸನ್ಮಾನಿಸಿ ಗೌರವಿಸಿದರು.