ಸಿರುಗುಪ್ಪ.ಜು.೦6: ತಾಲೂಕಿನ ತೆಕ್ಕಲಕೋಟೆ ಸಮೀಪ ರಾಷ್ಟ್ರೀಯ ಹೆದ್ದಾರಿ 150ಎ ರಲ್ಲಿ ವಾಹನಗಳ ವೇಗ ನಿಯಂತ್ರಿತ ಲೇಸರ್ ಟ್ರ‍್ಯಾಕ್ ಅಳವಡಿಸಲಾಗಿದ್ದು ಈ ಮೂಲಕ ವೇಗವಾಗಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ನಿಯಂತ್ರಿಸುವ ಕಾರ್ಯವನ್ನು ಪೊಲೀಸರು ಪ್ರಾರಂಭಿಸಿದ್ದಾರೆ.
ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪ ವೇಗ ನಿಯಂತ್ರಕ ಫಲಕ ಹಾಕಲಾಗಿದ್ದು, 50 ಕಿಲೋಮೀಟರ್ ಮಿತಿ ನಿಗದಿಪಡಿಸಲಾಗಿದೆ ಇದರ ಅನ್ವಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ವೇಗವನ್ನು ತೆಕ್ಕಲಕೋಟೆ ಪೊಲೀಸ್‌ಠಾಣೆ ಸಿಬ್ಬಂದಿ ತಪಾಸಣೆ ಮಾಡುತ್ತಿದ್ದು, ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಹೆದ್ದಾರಿಯಲ್ಲಿ ಸಂಚರಿಸಿದ 27 ವಾಹನಗಳ ಮಾಲೀಕರಿಗೆ ದಂಡವನ್ನು ತೆಕ್ಕಲಕೋಟೆ ಪೊಲೀಸರು ವಿಧಿಸಿದ್ದಾರೆ.
ಸ್ಪೀಡ್ ಲೇಸರ್ ಟ್ರ‍್ಯಾಕ್ ಮೂಲಕ ವಾಹನಗಳ ವೇಗ ನಿಯಂತ್ರಣದ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ಅಜಾಗೃತಿ ಮತ್ತು ಅತಿ ವೇಗದಿಂದ ವಾಹನ ಚಲಾಯಿಸುವವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಿ ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶ ಹೊಂದಲಾಗಿದೆ ಎಂದು ಪಿ.ಎಸ್.ಐ. ಶಾಂತಮೂರ್ತಿ ತಿಳಿಸಿದ್ದಾರೆ.
ಎ.ಎಸ್.ಐ. ಎಸ್ ಮಲ್ಲಯ್ಯ, ಪೇದೆಗಳಾದ ಮಂಜುನಾಥ, ಮಣಿಕಂಠ, ಲಿಂಗಾರೆಡ್ಡಿ, ರಸೂಲ್ ಸಾಬ್ ಇದ್ದರು.