ಸಿರುಗುಪ್ಪ: ಹಚ್ಚೊಳ್ಳಿ ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ಅಕ್ರಮ ಸಾರಾಯಿ ಸಾಗಾಟದ ಹಿನ್ನಲೆಯಲ್ಲಿ ಕಾರು ಮತ್ತು ಬೈಕುಗಳನ್ನು ಜಪ್ತಿಮಾಡಿ ಪೊಲೀಸರು ಸ್ವಯಂ ಪ್ರೇರಿತ ದಾಖಲಿಸಿಕೊಂಡ ಘಟನೆ ನಡೆದಿದೆ.
ಸೆ.22ರಂದು ದಾಖಲಿಸಲಾದ ದೂರಿನಲ್ಲಿ ಈ ಕೃತ್ಯಕ್ಕೆ ಬಳಸಿದ ಕಾರು ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ 2600 ಮೌಲ್ಯದ ೬೫ಲೀಟರ್ ಮದ್ಯ ಮತ್ತು ಸೆ.೨೯ರಂದು ದಾಖಲಿಸಲಾದ ಪ್ರಕರಣದಲ್ಲಿ 2 ಬೈಕ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ರೂ.800 ಮವಲ್ಯದ ೨೦ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಪಿ.ಎಸ್.ಐ. ಮಣಿಕಂಠ ಮೊದಲನೆ ಪ್ರಕರಣಕ್ಕೆ ಸಂಬಂಧಿಸಿದAತೆ ಆರೊಪಿತರ ಸಂಬಂಧಿಗಳಿ0ದ ಫೋನ್ ಪೇ ಮೂಲಕ ಪೇದೆಯೊಬ್ಬರ ಖಾತೆಗೆ ಹಣಪಡೆದ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೆ ಮತ್ತೊಂದು ಪ್ರಕರಣದಲ್ಲಿ ಸಿಂಧನೂರು ನಗರದ ನಿವಾಸಿ ಯುವಕ ಕಲೀಂನನ್ನು ಠಾಣೆಗೆ ಕರೆದಂತು ಮನಸೋ ಇಚ್ಚೆ ಥಳಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ, ಯುವಕನ ಕಡೆಯವರು ಸಿರುಗುಪ್ಪದಲ್ಲಿರುವ ಗ್ರಾಮೀಣ ಡಿ.ವೈ.ಎಸ್.ಪಿ. ವೆಂಕಟೇಶ್ ರವರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಈ ಘಟನೆಗೆ ಸಂಬಂದಿಸಿದAತೆ ಪ್ರತಿಕ್ರಿಯೆ ನೀಡಿದ ಡಿ.ವೈ.ಎಸ್.ಪಿ. ವೆಂಕಟೇಶ್ ಅವರು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳವರಿಗೆ ಘಟನೆಯ ಸತ್ಯಾಸತ್ಯತೆ ಕುರಿತು ಇಲಾಖಾ ವಿಚಾರಣೆ ನಡೆಸಿ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.