ಬೀದರ. ಮೇ.೦೨ : ರ‍್ನಾಟಕ ರಾಜ್ಯ ಕರ‍್ಮಿಕ ಪಡೆ ವತಿಯಿಂದ ನಗರದ ಗಾಂಧಿಗಂಜ್ ಸಂಘಟನೆ ಕಚೇರಿಯಲ್ಲಿ ಕರ‍್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕರ‍್ಯಕ್ರಮದಲ್ಲಿ ಸಂಘಟನೆ ಕಲ್ಯಾಣ ರ‍್ನಾಟಕ ವಿಭಾಗದ ಅಧ್ಯಕ್ಷರಾದ ಸೋಮನಾಥ ಎಂ. ಪಂಚಾಳ ಇವರು ಮಾತನಾಡುತ್ತಾ, ಕರ‍್ಮಿಕರಿಗೆ ಸೌಲಭ್ಯಗಳು ಇಲ್ಲ, ಬೀದರ ಜಿಲ್ಲೆಯಲ್ಲಿ ದೊಡ್ಡ ದೊಡ್ಡ ಕಂಪನಿಗಳಲ್ಲಿ ಹೊರ ರಾಜ್ಯಗಳಿಂದ ಕೂಲಿ ಕೆಲಸ ಮಾಡುತ್ತಿದ್ದು, ಇವರನ್ನು ತೆಗೆದು, ಜಿಲ್ಲೆಯ ಕರ‍್ಮಿಕರನ್ನು ಸೇವೆಗೆ ತೆಗೆದುಕೊಳ್ಳಬೇಕು ಹಾಗೂ ಜಿಲ್ಲೆಯ ಕಂಪನಿಗಳ ಮಾಲೀಕರು ಕೂಲಿಕರ‍್ಮಿಕರನ್ನು ಸರಿಯಾಗಿ ಸಂಬಳ ನೀಡದೇ, ಕರ‍್ಮಿಕರನ್ನು ಸತಾಯಿಸುತ್ತಿದ್ದಾರೆ. ಇದು ಕರ‍್ಮಿಕರಿಗೆ ಮಾಡುತ್ತಿರುವ ಅನ್ಯಾಯವಾಗಿರುತ್ತದೆ. ಅಲ್ಲದೇ ಬೀದರ ಜಿಲ್ಲೆಯ ಕಂಪನಿಗಳಲ್ಲಿ ಕೂಲಿಕರ‍್ಮಿಕರಿಗೆ ಇ.ಎಸ್.ಐ. ಸೌಲಭ್ಯಗಳು ಇರುವುದಿಲ್ಲ, ಇದನ್ನು ರ‍್ಕಾರದ ಗಮನಕ್ಕೆ ತಂದು, ಕೂಲಿಕರ‍್ಮಿಕರಿಗೆ ಹೋರಾಟದ ಮೂಲಕ ಕರ‍್ಮಿಕರನ್ನು ಎಲ್ಲಾ ಸೌಲಭ್ಯಗಳು ಒದಗಿಸಿಕೊಡುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಈ ಕರ‍್ಯಕ್ರಮದಲ್ಲಿ ಶಿವಶರಣಪ್ಪಾ ಪಾಟೀಲ ಕೊಳಾರ ಗೌರವಾಧ್ಯಕ್ಷರು, ವಿಶ್ವರ‍್ಮ ಸಮಾಜದ ಅಖಿಲ ರ‍್ನಾಟಕ ಮಹಾಸಭಾ ಜಿಲ್ಲಾಧ್ಯಕ್ಷರಾದ ಪ್ರಶಾಂತ ವಿಶ್ವರ‍್ಮ, ಜಿಲ್ಲಾ ಕರ‍್ಯರ‍್ಶಿ ರಾಘವೇಂದ್ರ, ಸಂತೋಷ ಪಾಟೀಲ ಜಿಲ್ಲಾಧ್ಯಕ್ಷರು, ಜೈ ಕರವೇ ಬೀದರ, ವಿದ್ಯಾಸಾಗರ ಜಾಂತಿ ಬೀದರ ಜಿಲ್ಲಾ ಖಜಾಂಚಿ ಇನ್ನೀತರರು ಉಪಸ್ಥಿತರಿದ್ದರು.