ದೇವದುರ್ಗ:
ದೇವದುರ್ಗ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕಲ್ಪಿಸಲಾಗಿದ್ದು,ಮೊದಲ ಹಂತದಲ್ಲಿ ೯.೨೫ಲಕ್ಷ ವೆಚ್ಚದ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ.ಗುಣಮಟ್ಟದ ಕಾಮಗಾರಿ ಮಾಡಲು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.
ಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕೆಕೆಆರ್‌ಡಿಬಿ ಮೈಕ್ರೋ ಯೋಜನೆಯಡಿಯಲ್ಲಿ ಅನುದಾನ ನೀಡಲಾಗಿದೆ.ಮೂಲಭೂತ ಸೌಕರ್ಯಗಳಿಗೆ ಅವಕಾಶ ನೀಡಲಾಗಿದೆ.ಶಾಂತಿನಗರ ಬಡಾವಣೆಯಲ್ಲಿ ಸಿಸಿ ರಸ್ತೆ ಚರಂಡಿ,ಮಾಳೆಗಡ್ಡಿಯಲ್ಲಿ ಶಾಲಾ ಕಂಪೌAಡ್,ಬಾಲಕಿಯರ ಪ್ರೌಢಶಾಲೆ ಕಟ್ಟಡ ನಿರ್ಮಾಣ,ಅಂಬೇಡ್ಕರ್,ವಾಲ್ಮೀಕಿ ವೃತ್ತದಲ್ಲಿ,ಜಾಲಹಳ್ಳಿ ಕ್ರಾಸ್ ಬಳಿ ಹೈಮಾಸ್ ದ್ವೀಪ ಅಳವಡಿಸುವದು,ಗೌರಂಪೇಟದಲ್ಲಿ ಶುದ್ಧ ಕುಡಿವ ನೀರಿನ ಘಟಕ,ಕಿತ್ತೂರ ರಾಣಿ ಚೆನ್ನಮ್ಮ ಶಾಲೆ ಬಳಿ ಬಸ್ ನಿಲ್ದಾಣ ನಿರ್ಮಾಣ,ಶಂಕರಬAಡಿ ಶುದ್ಧ ಕುಡಿವ ನೀರಿನ ಘಟಕ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
ಇಲಾಖೆ ಅಧಿಕಾರಿಗಳು ಹಾಗೂ ಗುತ್ತೇದಾರರು ಗುಣಮಟ್ಟದ ಕಾಮಗಾರಿಯತ್ತ ಗಮನ ಹರಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಆದನಗೌಡ ಪಾಟೀಲ್ ಬುಂಕಲದೊಡ್ಡಿ,ಮುಖAಡರಾದ ಸಿದ್ದಣ್ಣ ತಾತಾ ಮುಂಡರಗಿ,ಶರಣಪ್ಪ ಬಳೆ,ರಾಜಾ ರಂಗಪ್ಪ ನಾಯಕ,ಶೇಖ್ ಮುನ್ನಾಭೈ,ಈರಣ್ಣ ರುದ್ರಾಕ್ಷಿ,ರಾಮಣ್ಣ ಕರಿಗುಡ್ಡ,ರಾಮಣ್ಣ ಮದರಕಲ್,ರೇಣುಕಾ ಮಯೂರಸ್ವಾಮಿ,ಗೋವಿಂದರಾಜ್ ನಾಯಕ ಕೊತ್ತದೊಡ್ಡಿ,ಬಿಇಓ ಸುಖದೇವ,ಪುರಸಭೆ ಮುಖ್ಯಧಿಕಾರಿ ಹಂಪಯ್ಯ ಕೆ.ಹಾಗೂ ಇಲಾಖೆ ಅಧಿಕಾರಿಗಳು ಇದ್ದರು.