ಸಿಂಧನೂರು.ಅ.೩:
ಸರ್ವೋಚ್ಚ ನ್ಯಾಯಾಲಯವು ಒಳಮೀಸಲಾತಿಗೆ ಸಂಬAಧಿಸಿದAತೆ ರಾಜ್ಯಗಳಿಗೆ ಅಧಿಕಾರ ಕೊಟ್ಟಿದೆ ರಾಜ್ಯದಲ್ಲಿ ಜನಸಂಖ್ಯೆ ಆಧಾರದ ಮೇಲೆ ಅವಕಾಶಗಳನ್ನು ಮಾಡಿಕೊಡಬೇಕಾದ ಜವಬ್ದಾರಿ ಸರಕಾರದ್ದಾಗಿದ್ದು, ಆಯಾ ಜನಸಂಖ್ಯೆ ಆಧಾರದ ಮೇಲೆ ತೀರ್ಮಾನ ಕೈಗೊಂಡರೆ ಸಮಾಜದಲ್ಲಿ ಸಮಾನತೆ ಕಾಣಬಹುದು ಎಂದು ಗಾಂಧೀಜಿ, ಬಸವಣ್ಣ, ಅಂಬೇಡ್ಕರವರು ಹೇಳಿದ್ದಾರೆ ಆದ್ದರಿಂದ ಕಟ್ಟ ಕಡೆ ವ್ಯಕ್ತಿಗೆ ಸಾಮಾಜಿಕ ಆರ್ಥಿಕ ಶೈಕ್ಷಣಿಕವಾಗಿ ಸಮಾನ ಅವಕಾಶ ಸಿಗಬೇಕು ಇದರ ಭಾಗವಾಗಿ ಬಾಬಾ ಸಾಹೇಬ್ ಅಂಬೇಡ್ಕರ್‌ರು ಸಂವಿಧಾನ ರಚಿಸಿದ್ದಾರೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ಅವರು ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ನಡೆದ ಒಳಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಿಂಧನೂರು ಬಂದ್ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ೩೦ ವರ್ಷಗಳ ಒಳ ಮೀಸಲಾತಿ ಹೋರಾಟಕ್ಕೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಸೇರಿ ಏಳು ಜನ ನ್ಯಾಯಾಧೀಶರ ಒಳಗೊಂಡು ಮಹತ್ವದ ಪೀಠವು ತೀರ್ಪನ್ನು ನೀಡಿದ್ದು ಎಸ್ಸಿ ಒಳಮೀಸಲಾತಿ ಜನಸಂಖ್ಯೆ ಆಧಾರದ ಮೇಲೆ ಅವರಿಗೆ ಹಾರ್ಥಿಕ, ಶೈಕ್ಷಣಿಕ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ, ಇದನ್ನು ಜಾರಿಗೆ ತಂದರೆ ನಮಗೆ ಮುಂದಿನ ಚುನಾವಣೆಗಳಲ್ಲಿ ಏನಾಗಬಹುದು ಎಂದು ಯೋಚಿಸುವ ಸಮಯವಲ್ಲ, ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪನ್ನು ಗೌರವಿಸುವ ಮೂಲಕ ಜಾರಿ ಮಾಡಬೇಕು ಎಂದು ಕಂಡ ತುಂಡಾಗಿ ಮಾತನಾಡಿದರು. ಈ ದೇಶದ ಸಂಪತ್ತನ್ನು ಎಲ್ಲಾ ವರ್ಗದವರು ಹಮಚಿಕೊಂಡು ತಿನ್ನುವಂತಾಗಬೇಕು, ಒಂದೇ ಸಮುದಾಯದವರು ಎಂ.ಎಲ್.ಎ, ಎಮಪಿ. ಎಂ.ಎಲ್.ಸಿಗಳಾಗುತ್ತಾ ಹೋದರೆ ಇನ್ನುಳಿದವರಿಗೆ ಅನ್ಯಾಯವಾದಂತಾಗುತ್ತದೆ, ಕಾರಣ ಉಳಿದವರು ಐಎಎಸ್, ಐಪಿಎಸ್‌ನಂತಹ ಉದ್ದೆಗಳನ್ನಾದರೂ ಮಾಡುವಂತಾಗಬೇಕು ಎಂದು ಹೇಳಿದರು.
ಒಳಮೀಸಲಾತಿ ಹೋರಾಟಕ್ಕೆ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಬೆಂಬಲಿಸಿ ಒಳಮೀಸಲಾತಿ ಜಾರಿಗೆ ಸುಪ್ರೀಂ ಕೋರ್ಟ್ ಅಸ್ತು ಅಂದಿದ್ದು, ರಾಜ್ಯ ಸರ್ಕಾರಗಳು ಜಾರಿ ಮಾಡಲೇಬೇಕು. ಅಧಿವೇಶನದಲ್ಲಿ ಈ ಕುರಿತು ಜೆಡಿಎಸ್ ಮತ್ತು ಬಿಜೆಪಿ ಧ್ವನಿ ಎತ್ತಲಿದೆ ಎಂದು ಭರವಸೆ ನೀಡಿದರು.
ಶಾಸಕ ಹಂಪನಗೌಡ ಬಾದರ್ಲಿ ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿ ಮಾಡುವಲ್ಲಿ ಈಗಾಗಲೇ ಒಂದು ಸುತ್ತಿನ ಮಾತುಕತೆ ಆಗಿದ್ದು, ನ್ಯಾಯಯುತ ಸಾಮಾಜಿಕ ಬೇಡಿಕೆಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್ ಪಕ್ಷವು ಸದಾ ಸನ್ನದ್ಧವಾಗಿರುತ್ತದೆ ಈ ಒಳಮೀಸಲಾತಿ ಹೋರಾಟ ಸಮಿತಿಯ ಮುಖಂಡರು ಸಿ.ಎಂ.ಅವರೊAದಿಗೆ ಚರ್ಚಿಸಲು ಅವಕಾಶ ಕಲ್ಪಿಸಿಕೊಡಲಾಗುವುದೆಂದು ಭರವಸೆ ನೀಡಿದರು. ಒಳಮೀಸಲಾತಿ ಹೋರಾಟದಲ್ಲಿ ನ್ಯಾಯವಾದಿಗಳು ಭಾಗವಹಿಸುವದರೊಂದಿಗೆ ಬೆಂಬಲ ಸೂಚಿಸಿದರು.
ಉತ್ತಮ ಪ್ರತಿಕ್ರಿಯೆ- ಒಳಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಿಂಧನೂರು ಬಂದ್ ಗೆ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಮಿತಿಯ ಪದಾಧಿಕಾರಿಗಳು ಬೆಳಿಗ್ಗೆ ೪ ಗಂಟೆಯಿAದಲೆ ರಸ್ತೆಗಿಳಿದು ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ವ್ಯಾಪಾರಸ್ತರಲ್ಲಿ ಮನವಿ ಮಾಡಿಕೊಳ್ಳುವುದರ ಜೊತೆಗೆ ಕೇಂದ್ರ ಬಸ್ ನಿಲ್ದಾಣಕ್ಕೆ ತೆರಳಿ ಬಸ್‌ಗಳನ್ನು ರಸ್ತೆಗಿಳಿಯದಂತೆ ನೋಡಿಕೊಳ್ಳುವಲ್ಲಿ ಹೋರಾಟಗಾರರು ಯಶಸ್ವಿಯಾದರು. ಬಸ್ ಸೌಕರ್ಯ ಇಲ್ಲದೆ ಪ್ರಯಾಣಿಕರು ಪರದಾಡಿ ಆಟೋ, ಮತ್ತು ಕೃಷರ್ ವಾಹನಗಳಿಗೆ ದುಪ್ಪಟ್ಟು ಹಣ ನೀಡಿ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿರುವ ದೃಶ್ಯ ಕಂಡು ಬಂತು.
ಬೈಕ್ ರ‍್ಯಾಲಿ- ತಹಶೀಲ್ದಾರ್ ಕಚೇರಿ ಆವರಣದ ಮುಂಭಾಗದಿAದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ಅಂಬೇಡ್ಕರ್ ಪುತ್ಥಳಿಯವರೆಗೆ ದ್ವಿಚಕ್ರ ವಾಹನದ ಮೂಲಕ ತೆರಳಿದರು ಹಿರಿಯ ದಲಿತ ಮುಖಂಡರಾದ ಬಾಲಸ್ವಾಮಿ ಕೊಡ್ಲಿ, ಆರ್.ಬೋನ್ವೆಂಚರ್, ಅಲ್ಲಮಪ್ರಭು ಪೂಜಾರ, ಎಚ್.ಎನ್.ಬಡಿಗೇರ್, ನಾಗರಾಜ ಪೂಜಾರ, ಸೇರಿದಂತೆ ಸಮಿತಿಯ ಸಂಚಾಲಕರು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಈ ರ‍್ಯಾಲಿಯು ಅಂಬೇಡ್ಕರ್ ಪುತ್ಥಳಿಯಿಂದ ಯಲ್ಲಮ್ಮ ಗುಡಿ, ಅಂಚೆ ಕಚೇರಿ, ಎಂ.ಜಿ.ಸರ್ಕಲ್, ಹಾಗೂ ಗಂಗಾವತಿ ರಸ್ತೆಯ ರಿಲ್ಯಾನ್ಸ್ ಪೆಟ್ರೋಲ್ ಬಂಕ್ ವರೆಗೂ ತೆರಳಿ ಪುನಃ ಮಹಾತ್ಮಗಾಂಧಿ ಸರ್ಕಲ್‌ಗೆ ಆಗಮಿಸಿ ಕುಷ್ಟಗಿ ರಸ್ತೆಯಲ್ಲಿರುವ ಕನಕದಾಸ ಶಿಕ್ಷಣ ಸಂಸ್ಥೆಯವರೆಗೆ ಬೈಕ್ ರ್ಯಾಲಿ ಮೂಲಕ ಬಸವವೃತ್ತ, ಟಿಪ್ಪುಸುಲ್ತಾನ ಸರ್ಕಲ್, ನಂತರ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್, ಕನಕವೃತ್ತ, ಮಾರ್ಗವಾಗಿ ದೇವರಾಜು ಅರಸು ಮಾರುಕಟ್ಟೆಯಿಂದ ನಗರದಾದ್ಯಂತ ಬೈಕ್ ರ‍್ಯಾಲಿ ನಡೆಸಿದರು. ಈ ಬೈಕ್ ರ‍್ಯಾಲಿ ಉದ್ದಕ್ಕೂ ಸಿ.ಎಂ.ಸಿದ್ದರಾಮಯ್ಯ ವಿರುದ್ದ ಘೋಷಣೆಗಳನ್ನು ಕೂಗಿದರು.
ವಿಳಂಬ ಧೋರಣೆ- ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಬಹಿರಂಗ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಹಿರಿಯ ಮುಖಂಡ ಆರ್.ಬೋನವೆಂಚರ್, ಎಚ್.ಎನ್.ಬಡಿಗೇರ್ ಮಾತನಾಡಿ, ಚುನಾವಣಾ ಪೂರ್ವದಲ್ಲಿ ಸಿದ್ದರಾಮಯ್ಯನವರು ಒಳಮೀಸಲಾತಿ ಜಾರಿ ಮಾಡುವುದು ನಾನೆ ಎಂದು ಹೇಳುತ್ತಿದ್ದರು. ಈಗ ಸುಪ್ರೀಂ ಕೋರ್ಟ್ ಒಳಮೀಸಲಾತಿ ಕುರಿತು ಮಹತ್ವದ ತೀರ್ಪು ನೀಡಿದರೂ ಕೂಡ ಜಾರಿ ಗೊಳಿಸುವಲ್ಲಿ ಸಿದ್ದರಾಮಯ್ಯ ವಿಳಂಬ ಧೋರಣೆ ಅನುಸರಿಸುತ್ತಿರುವುದು ಖಂಡನಾರ್ಹವಾಗಿದೆ.
ಕAಡಲ್ಲಿ ಘೇರಾವು- ಶಾಸಕ ಹಂಪನಗೌಡ ಬಾದರ್ಲಿಯವರು ಈ ಕುರಿತು ಧ್ವನಿ ಎತ್ತಬೇಕಾಗಿತ್ತು ಆದರೆ ದಸರಾ ಉತ್ಸವದ ಹೆಸರಿನಲ್ಲಿ ಎರಡು ಕೋಟಿ ಹಣವನ್ನು ದುಂದುವೆಚ್ಚ ಮಾಡುತ್ತಿದ್ದಾರೆಂದು ಟೀಕಿಸಿದರು. ಜೊತೆಗೆ ನಾವು ಹುಲಿಗೆಮ್ಮ ಯಲ್ಲಮ್ಮನ ಜಾತ್ರೆ ಮಾಡುತ್ತೇವೆ ಕೊಡಿ ಎಂದು ಅಪಹಾಸ್ಯ ಮಾಡಿದರು. ರಾಜ್ಯಪಾಲರು ಯಾವುದೇ ಒಂದು ಸಣ್ಣ ವಿಷಯಕ್ಕೆ ಸಿದ್ದರಾಮಯ್ಯ ನವರ ಬೆನ್ನಿಗೆ ಬಿದ್ದಿದ್ದು, ಇದೇ ಸಿದ್ದರಾಮಯ್ಯ ಸರ್ಕಾರ ಎಸ್.ಸಿ.ಎಸ್.ಟಿ. ವರ್ಗಕ್ಕೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿರುವ ಬಗ್ಗೆ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಪ್ರಶ್ನಿಸಬೇಕು. ಕೂಡಲೇ ಒಳಮೀಸಲಾತಿ ಜಾರಿ ಮಾಡಲೇಬೇಕು ತಪ್ಪಿದರೆ ಸಿ.ಎಂ.ಸಿದ್ದರಾಮಯ್ಯ ಕಂಡಲ್ಲಿ ಘೇರಾವು ಹಾಕಲಾಗುವುದು ಎಂದರು.
ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿ ಮನವಿ ಪತ್ರ ಸ್ವೀಕರಿಸಿದರು ಹಾಗೂ ಶಾಸಕ ಹಂಪನಗೌಡ ಬಾದರ್ಲಿ, ಆರ್.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಇವರಿಗೆ ಒಳಮೀಸಲಾತಿ ಐಕ್ಯ ಹೋರಾಟ ಸಮಿತಿ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆರ್.ಅಂಬ್ರೂಸ್, ಯಮನಪ್ಪ ಬಿ.ಎಸ್.ಎನ್.ಎಲ್. ಮರಿಯಪ್ಪ ಸುಕಾಲಪೇಟೆ, ಅಮರೇಶ ಗಿರಿಜಾಲಿ, ವೆಂಕಟೇಶ ಗಿರಿಜಾಲಿ, ಜಗದೀಶ್ ವಕೀಲರು, ಮೌನೇಶ ಜಾಲವಾಡಿಗಿ, ಹನುಮಂತಪ್ಪ ಹಂಪನಾಳ, ಶಿವರಾಜ ಉಪ್ಪಲದೊಡ್ಡಿ, ಹುಸೇನಪ್ಪ ಸೂಲಂಗಿ, ಯಲ್ಲಪ್ಪ ಯದ್ದಲದೊಡ್ಡಿ, ಮೌಲಪ್ಪ ಐಹೊಳೆ, ಚಿಟ್ಟಿಬಾಬು, ಚಂದ್ರಶೇಖರ್ ಗೊರೇಬಾಳ, ಡಿ.ಎಚ.ಕಂಬಳಿ, ಬಿ.ಎನ್.ಯರದಿಹಾಳ, ಮರಿಯಪ್ಪ ಚಿರು, ನಾಗರಾಜ ಸಾಸಲಮರಿ ಮುಂತಾದ ಸಾವಿರಾರು ಜನ ಹೋರಾಟದಲ್ಲಿ ಭಾಗವಹಿಸಿದ್ದರು.