ಕಳಪೆ,ವಿಳಂಬ ಕಾಮಗಾರಿಗೆ ಅಧಿಕಾರಿಗಳು,ಗುತ್ತಿಗೆದಾರರ ನಿರ್ಲಕ್ಷ್ಯ ಜೆಜೆಎಂ ಕಾಮಗಾರಿ ಅವೈಜ್ಞಾನಿಕ ಸಾರ್ವಜನಿಕರು ಆರೋಪ
ಬಸವರಾಜ ಆಶಿಹಾಳ
ಮುದಗಲ್:
ಜಲ ಜೀವನ್ ಮಿಷನ್,ಪ್ರತಿ ಮನೆಗೆ ಕುಡಿಯುವ ನೀರು ಒದಗಿಸುವ ಯೋಜನೆಯು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಳಪೆ ಮತ್ತು ಅರೆ ಬರೆ ಕಾಮಗಾರಿ ನಡೆಯುತ್ತಿದೆ ಎನ್ನುವ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದೆ.ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಇದಾಗಿದ್ದು ಕೊಟ್ಯಂತರ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.ಗುತ್ತಿಗೆದಾರರ ನಿರ್ಲಕ್ಷ್ಯವೋ,ಅಧಿಕಾರಿಗಳ ಬೇಜವಾಬ್ದಾರಿಯಿಂದಲೋ ನಿಯಮ ಪಾಲಿಸದೇ ಅವೈಜ್ಞಾನಿಕ ಕಾಮಗಾರಿ ಮಾಡಿದ್ದಾರೆ ಎನ್ನುವ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದೆ.ಪಟ್ಟಣ ವ್ಯಾಪ್ತಿಯ ಆಶಿಹಾಳ,ಆರ್ಯ ಬೋಗಾಪೂರ,ಹೆಗ್ಗಾಪೂರು,ಪೂಜಾರಿ ತಾಂಡ ಆಶಿಹಾಳತಾಂಡ,ಕೊಮಲಾಪೂರ,ನಾಗರಾಳ,ಬಯ್ಯಾಪುರ ತಾಂಡ, ಗ್ರಾಮದಲ್ಲಿ ಎಲ್ಲೆಂದರಲ್ಲೇ ಕಾಂಕ್ರಿಟ್ ತ್ಯಾಜ್ಯ ಗುಡ್ಡೆ ಹಾಕಲಾಗಿದೆ ಮತ್ತು ಮುಖ್ಯ ರಸ್ತೆ ಮತ್ತು ಓಣಿಗಳು ಸಂಪೂರ್ಣ ಹದಗೆಟ್ಟು ಹೋಗಿದ್ದು ಸಾರ್ವಜನಿಕರು,ವಾಹನಗಳು ಓಡಾಡಂದಾಗಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.ಕಾಮಗಾರಿ ವಿಳಂಬ ಮಾಡುವ ಜೊತೆಗೆ ಕಾಮಗಾರಿಗಳಿಗೆ ಬಳಸುತ್ತಿರುವ ಸಾಮಗ್ರಿಗಳು ಸಹ ಕಳಪೆಯಿಂದ ಕೂಡಿವೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು,ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ.
ಕಾಮಗಾರಿ ವಿಳಂಬ
೨೦೨೪ರ ಒಳಗೆ ಪ್ರತಿಯೊಂದು ಮನೆ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಯ ಉದ್ದೇಶವಾಗಿದೆ ಆದರೆ ಕೆಲ ಗ್ರಾಮಗಳಲ್ಲಿ ಎರಡು ವರ್ಷ ಕಳೆದರೂ ಇನ್ನೂ ಕೆಲಸ ಪೂರ್ಣಗೊಳಿಸದೆ ಅರೆಬರೆ ಕೆಲಸ ಮಾಡಿದ್ದಾರೆ ಮತ್ತು ಕೆಲವು ಗ್ರಾಮಗಳಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ವರ್ಷಕಳೆದರೂ ಕೆಲಸ ಪ್ರಾರಂಬಿಸಲು ಗುತ್ತಿಗೆದಾರ ಮನಸ್ಸು ಮಾಡುತ್ತಿಲ್ಲ ಕಾಮಗಾರಿಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಹಾಗು ಗುತ್ತಿಗೆದಾರ ಹಣಬಾಕತನದಿಂದಾಗಿ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಬಹುನಿರೀಕ್ಷಿತ ಜಲ ಜೀವನ ಮಿಷನ್ ತಾಲೂಕಿನಲ್ಲಿ ಕಳಪೆ ಕಾಮಗಾರಿ ಹಾಗೂ ಅದರಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅಂದಾಜು ಪತ್ರಿಕೆ ಪ್ರಕಾರ ಮಾಡದೆ.ಕಾಮಗಾರಿ ನಿರ್ವಹಿಸುವ ಬರದಲ್ಲಿ ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡಿದ್ದಾರೆ.
ಜೆಸಿಬಿ ಕೆಲಸದಿಂದ ಹದಗೆಟ್ಟ ಸಿಸಿ ರಸ್ತೆ
ಗ್ರಾಮದಲ್ಲಿ ಓಣಿ ಮತ್ತು ಮುಖ್ಯ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸುವದ ಸಿಸಿ ರಸ್ತೆ ಜೆಸಿಬಿಯಿಂದ ನೋಡು ರಸ್ತೆಯಲ್ಲಿ ಅಗೆದಿರುವದರಿಂದ ಹೊಡೆತಕ್ಕೆ ಕೆಲವು ಕಡೆ ಹಾಕಿರುವ ಸಿಸಿ ಸಂಪೂರ್ಣ ಕಿತ್ತಿ ಹೋಗಿದ್ದು ಪರಿಣಾಮದಿಂದ ಜನರು ಮತ್ತು ವಾಹನಗಳು ಓಡಾಡದಂತೆ ಮಾಡಿದ್ದಾರೆ.ಸಾರ್ವಜನಿಕರು ಓಡಾಡವ ಪ್ರದೇಶದಲ್ಲಿ ತ್ವರಿತವಾಗಿ ಪೈಪ್ ಲೈನ್ ಮಾಡಿ ಸಿಸಿ ಹಾಕಿ ಮುಚ್ಚದೆ ರಸ್ತೆಯ ಇಕ್ಕಲೆಗಳಲ್ಲಿ ಬಿಟ್ಟು ಹೋಗಿದ್ದಾರೆ.ನಿಯಮದ ಪ್ರಕಾರ ಮೂರು ಅಡಿ ಆಳವನ್ನು ತೆಗೆದು ಪೈಪ್ ಲೈನ್ ಅಳವಡಿಸಬೇಕು.ಆದರೆ ಆಳವನ್ನ ತೆಗೆಯದೆ ಕಾಟಾಚಾರಕ್ಕೆ ಒಂದು ಅಡಿಯಷ್ಟು ತೆಗ್ಗು ಅಗೆದು ಪೈಪ್ ಲೈನ್ ಅಳವಡಿಸಿರುವುದು ಕಂಡು ಬರುತ್ತದೆ.ಇನ್ನು ಕೆಲವು ಕಡೆ ಸರಿಯಾದ ಸಿಮೆಂಟ್ ಕಡಿ ಬಳಸದೆ ಕಳಪೆ ಮಟ್ಟದ ಸಿಸಿ ಮಾಡಿದ್ದಾರೆ.ಇವರು ಹಾಕಿರುವ ಮೀಟರ್ ಕಂಬಗಳು ಕೈಯಿಂದ ನೂಕಿದರೆ ಸಾಕು ಕೆಳಗೆ ಬಿದ್ದಿವೆ ಇನ್ನು ಸಿಸಿ ರಸ್ತೆ ಕಾಲಿನಿಂದ ರಸ್ತೆ ತಿಕ್ಕಿದರೆ ಸಿಮೆಂಟ್ ಕಡಿ ಕಿತ್ತುಬರುತ್ತದೆ.ಗ್ರಾಮದಲ್ಲಿ ಸಂಪೂರ್ಣ ಕಾಮಗಾರಿ ಕಳಪೆ ಮಾಡಿದರೂ ಸಂಬAಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗುತ್ತಿಲ್ಲ.ಈ ಕಾಮಗಾರಿಯಲ್ಲಿ ಅಧಿಕಾರಿಗಳು ಗುತ್ತಿಗೆದಾರರ ಜೋಡಿ ಶಾಮೀಲಾಗಿದ್ದು ಅನುಮಾನ ಮೂಡಿಸುತ್ತಿದೆ ಮತ್ತು ಕಾಮಗಾರಿಯನ್ನು ಸಂಪೂರ್ಣ ತೆನಿಖೆ ನಡೆಸಬೇಕೆಂದು ಆಯಾ ಊರಿನ ಗ್ರಾಮಸ್ಥರಾದ ಬಸವರಾಜ ಅಂಗಡಿ ಆರ್ಯಭೋಗಾಪೂರು,ಹನುಮಗೌಡ ಗ್ರಾ,ಪಂ ಸದಸ್ಯರು ಕೊಮಲಾಪೂರ,ವೆಂಕನಗೌಡ ಉಪ್ಪಾರ ನಂದಿಹಾಳ,ಲಕ್ಕಪ್ಪ ನಾಗರಾಳ,ವೆಂಕಟೇಶ ಆಶಿಹಾಳ,ಮತ್ತು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.
ಮುಖ್ಯಾಂಶಗಳು
೧) ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಅರೆ ಬರೆ ಕಾಮಗಾರಿ
೨) ಜಲ ಜೀವನ್ ಮಿಷನ್ ಯೋಜನೆ ಆರಂಭದಲ್ಲಿ ವಿಘ್ನ
೩) ಜನರಿಗೆ,ರಸ್ತೆಗಳಿಗೆ ಕಂಟಕವಾದ ಜಲ ಜೀವನ್ ಮಿಷನ್
೪) ಕಳಪೆ ಕಾಮಗಾರಿ ಗುತ್ತಿಗೆದಾರರಿಗೆ ಅಧಿಕಾರಿಗಳು ಸಾತ್
ಜೆ ಜೆ ಎಂ ಕಾಮಗಾರಿ ವಿಳಂಬದ ಬಗ್ಗೆ ಗಮನಕ್ಕೆ ಬಂದಿದೆ ಕಾಮಗಾರಿ ಪರಿಶೀಲಿಸಲು ತಾಲೂಕು ಅಧಿಕಾರಿಗಳಿಗೆ ಸೂಚನೆ ನೀಡುತ್ತೆನೆ. ಶೀಘ್ರದಲ್ಲೇ ಕಾಮಗಾರಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡುತ್ತೆನೆ.
– ವಿನೋದ ಕುಮಾರ ಗುಪ್ತಾ
(ಕಾರ್ಯನಿರ್ವಾಹಕ ಅಧಿಕಾರಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ರಾಯಚೂರು)
ಜೆಜೆ ಎಂ ನಿಯನುಸಾರ ಯಾವುದೇ ಕಾಮಗಾರಿ ಮಾಡದೆ ಸಂಪೂರ್ಣ ಕಳಪೆಯಾಗಿದೆ.ಗುತ್ತಿಗೆದಾರ ನಿರ್ಲಕ್ಷ್ಯದಿಂದ ಸಿಸಿ ರಸ್ತೆ,ಚರಂಡಿಗಳು ಹಾಳಾಗಿದ್ದು ಎಲ್ಲೆಂದರಲ್ಲೇ ಕಾಂಕ್ರಿಟ್ ತ್ಯಾಜ್ಯ ಗುಡ್ಡೆ ಹಾಕಲಾಗಿದೆ.ರಸ್ತೆ ಅಗೆದು ವರ್ಷಗಳ ಕಳೆದರೂ ಹಾಗೆ ಬಿಟ್ಟಿದ್ದು ವಯೋವೃದ್ಧರು,ಪುಟ್ಟ ಮಕ್ಕಳು ಓಡಾಡದಂತಾಗಿದೆ.
– ವೆಂಕನಗೌಡ ಉಪ್ಪಾರ ನಂದಿಹಾಳ