ರಾಯಚೂರು: ಕಾರ್ಮಿಕರ ನಾಲ್ಕನೇ ರಾಜ್ಯ ಸಮ್ಮೇಳನದ ಅಂಗವಾಗಿ ಸೋಮವಾರ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್(ಎಐಯುಟಿಯುಸಿ) ಸಂಘಟನೆಯ ಜಿಲ್ಲಾ ಘಟಕದವತಿಯಿಂದ ಕೈಗಾರಿಕೆ ಪ್ರದೇಶದಲ್ಲಿ ಪ್ರಚಾರ ಜಾಥಾ ನಡೆಸಲಾಯಿತು.
ಹೊರಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ, ಕನಿಷ್ಠ್ಠ ವೇತನ 35 ಸಾವಿರ ನಿಗದಿಗೊಳಿಸಬೇಕು ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾಸಗಿಕರಣ ನಿಲ್ಲಿಸಬೇಕು, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕರ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಲಾಯಿತು.
ಕಾರ್ಮಿಕರಿಗೆ ಕನಿಷ್ಠ್ಠ ವೇತನ,ಪಿಎಫ್, ಇಎಸ್‌ಐ, ಗ್ರಾಚ್ಯೂಟಿ, ಪಿಂಚಣಿ ಮುಂತಾದ ಮೂಲ ಸೌಲಭ್ಯಗಳನ್ನು ಖಾತ್ರಿಪಡಿಸಬೇಕು ಎಂಬುವುದು ಜಾಥಾದಲ್ಲಿ ಪ್ರಚಾರ ಪಡಿಸಲಾಯಿತು.
ಪ್ರಚಾರ ಜಾಥಾ ಉದ್ದೇಶಿಸಿ ಸಂಘಟನೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್.ಎಸ್ ವೀರೇಶ ಮಾತನಾಡಿ, ಕೇಂದ್ರದಲ್ಲಿ ದೀರ್ಘಕಾಲ ಆಳಿದ ಕಾಂಗ್ರೆಸ್ ಹಾಗೂ ಪ್ರಸಕ್ತ ಬಿಜೆಪಿ ಸರ್ಕಾರಗಳು ಜಾರಿಗೆ ತಂದ ಜಾಗತೀಕರಣ ಖಾಸಗಿಕರಣ ಮತ್ತು ಉದಾರೀಕರಣ ನೀತಿಗಳು ದೇಶದ ಸಂಪತ್ತು ಮತ್ತು ಕಾರ್ಮಿಕರ ಸಮಸ್ಯೆಯನ್ನು ಲೂಟಿ ಮಾಡಲು ಅನುವು ಮಾಡಿಕೊಟ್ಟಿವೆ ಎಂದು ಆರೋಪಿಸಿದರು.
ಜನರ ತೆರಿಗೆ ಹಣ ಹಾಗೂ ಕಾರ್ಮಿಕರ ಶ್ರಮದಿಂದ ಕಟ್ಟಿದ ರೈಲ್ವೆ ಬ್ಯಾಂಕ್ ವಿಮೆ ಉಕ್ಕು ಕಲ್ಲಿದ್ದಲು ವಿದ್ಯುತ್ ಉತ್ಪಾದನೆ ಸಾರ್ವಜನಿಕ ಉದ್ದಿಮೆಗಳನ್ನು ಅಂಬಾನಿ ಅದಾನಿಯಂತಹ ಕಾರ್ಪೊರೇಟ್ ಮನೆತನಗಳಿಗೆ ಅಪಾರ ತ್ಯಾಗ ಬಲಿದಾನಗಳಿಂದ ಗಳಿಸಿದ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ದೂರಿದರು.
ಇದರ ವಿರುದ್ಧ ಬಲಿಷ್ಠಕಾರ್ಮಿಕ ಚಳುವಳಿ ನಡೆಸಲು ಎಲ್ಲ್ಲ ವರ್ಗದ ಕಾರ್ಮಿಕರು ಮುಂದೆ ಬರಬೇಕೆಂದು ಕರೆ ನೀಡಿದರು.
ಜಿಲ್ಲಾ ಕಾರ್ಯದರ್ಶಿ ಮಹೇಶ್ ಚೀಕಲಪರ್ವಿ, ಉಪಾಧ್ಯಕ್ಷÀ ಅಣ್ಣಪ್ಪ, ಸದಸ್ಯರಾದ ಚೇತನ, ರಾಮು, ಮಾರೆಪ್ಪ, ಬಸವರಾಜ, ಭೀಮಣ್ಣ, ಶಾಂತಕುಮಾರ ಹಾಗೂ ಮತ್ತಿತರರಿರು ಪಾಲ್ಗೊಂಡಿದ್ದರು.