ರಾಯಚೂರು,ಸೆ.29: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಸಂಖ್ಯೆ ಹೆಚ್ಚಾಗುತ್ತಿದ್ದು, ಹೆಚ್ಚಾಗುತ್ತಿರುವ ಹೃದಯಾಘಾತಗಳಿಗೆ ಕಾರಣ ಮತ್ತು ತಡೆಗಟ್ಟಲು ಇರುವ ಮಾರ್ಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜ ಹೇಳಿದರು.
ನಗರದ ಬೆಟ್ಟದೂರು ಆಸ್ಪತ್ರೆ ಮತ್ತು ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಆಯೋಜಿಸಿದ ಸೈಕಲ್ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿ,ಬೆಟ್ಟದೂರು ಆಸ್ಪತ್ರೆಯ ವೈದ್ಯರು ಮತ್ತು ಸ್ನೇಹಿತರು ಸೈಕಲ್ ಜಾಥದ ಮೂಲಕಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವೆಂದರು.
ಇ0ದಿನ ಒತ್ತಡದ ಜೀವನ ಆಹಾರ ಪದ್ದತಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ನನಗೆ ನನ್ನ ವೈದ್ಯರು ಸೂಚಿಸಿದ ನಿಯಮನುಸಾರ ಜೀವನ ಶೈಲಿ ಅಳವಸಿಕೊಂಡಿರುವೆ. ಹಾಗಾಗಿ ಆರೋಗ್ಯವಂತಾಗಿದ್ದೇನೆAದರು.
ಖ್ಯಾತ ಹೃದಯರೋಗ ತಜ್ಞ ಡಾ.ಸುರೇಶ ಸಗರದ, ಡಾ.ಬಸವಪ್ರಭು ಪಾಟೀಲ್ ಮಾತನಾಡಿದರು. ಈ ಸಂದರ್ಭದಲ್ಲಿ ಡಾ.ಸಕಲೇಶ ಪಾಟೀಲ್, ಡಾ.ಮಂಜುನಾಥ ಹಟ್ಟಿ, ಡಾ.ರವಿ ಪಾಟೀಲ್, ಡಾ.ಬಿ.ಕೆ.ದೇಸಾಯಿ ಸೇರಿದಂತೆ ಅನೇಕ ವೈದ್ಯರು ಉಪಸ್ಥಿತರಿದ್ದರು.
ಡಾ.ಮಂಜುನಾಥ ನಿರುಪಿಸಿದರು. ಮಹಾಂತೇಶ ಸಜ್ಜನ್ ವಂದಿಸಿದರು.
ಬೆಟ್ಟದೂರು ಆಸ್ಪತ್ರೆಯಿಂದ ಆರಂಭವಾದ ಸೈಕಲ್ ಜಾಥ ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರಿಸಿತು.ಜಾಥ ಉದ್ದಕ್ಕೂ ಹೃದಯ ರೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.