ಔರಾದ್ : ಸಾಧಿಸುವ ಛಲ ಇದ್ದವರಿಗೆ ಕಷ್ಟ, ಬಡತನ ಯಾವುದೂ ಅಡ್ಡಿಯಾಗುವುದಿಲ್ಲ ಎಂದು ಎಂದು ಬಸವಕಲ್ಯಾಣದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು. ತಾಲೂಕಿನ ಸಂತಪೂರ ಗ್ರಾಮದ ಅನುಭವ ಮಂಟಪ ಪ್ರೌಢ ಶಾಲೆಯಲ್ಲಿ ಶನಿವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ವಿದ್ಯರ‍್ಥಿಗಳಿಗೆ ಹಮ್ಮಿಕೊಂಡ ಸತ್ಕಾರ ಸಮಾರಂಭ ಕರ‍್ಯಕ್ರಮದಲ್ಲಿ ಮಾತನಾಡಿದರು. ಕಠಿಣ ಶ್ರಮ ವಹಿಸಿದರೆ ಯಾರು ಬೇಕಾದರೂ ಉನ್ನತವಾದುದನ್ನು ಸಾಧಿಸಬಹುದು. ಜೀವನದಲ್ಲಿ ಸಾಧನೆ ಮಾಡಲು ಗುರಿ, ಆತ್ಮವಿಶ್ವಾಸ, ದೃಢ ನರ‍್ಧಾರ ಮುಖ್ಯ. ವಿದ್ಯರ‍್ಥಿಗಳು ಗುರಿಯನ್ನು ನರ‍್ಧರಿಸಿಕೊಂಡು ಕರ‍್ಯೋನ್ಮುಖರಾದರೆ ಯಶಸ್ಸು ಸಾಧಿಸಬಹುದು ಎಂದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀಗಳಾದ ಗುರುಬಸವ ಪಟ್ಟದ್ದೇವರು ಮಾತನಾಡಿ, ವಿದ್ಯರ‍್ಥಿಗಳ ಜೀವನದಲ್ಲಿ ಮರಳಿ ಹೋದ ಕಾಲ ಮತ್ತೆ ಬರುವುದಿಲ್ಲ. ಹಾಗಾಗಿ ವಿದ್ಯರ‍್ಥಿಗಳು ತಾವು ಏನಾದರೂ ಸಾಧನೆ ಮಾಡಬೇಕೆಂದರೆ ಇದೊಂದು ಉತ್ತಮ ಅವಕಾಶವಿದೆ ಎಂದರು. ಇಲ್ಲಿಯ ಶಿಕ್ಷಕರು ಮತ್ತು ವಿದ್ಯರ‍್ಥಿಗಳ ನಡುವೆ ಉತ್ತಮ ಬಾಂಧವ್ಯ ರ‍್ಪಟ್ಟಿದರಿಂದ ಕಳೆದ ೧೪ ರ‍್ಷದಿಂದ ಶೇ. ೧೦೦ರಷ್ಟು ಫಲಿತಾಂಶ ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯರ‍್ಥಿಗಳು ಸಮಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಸಾಧಿಸುವ ಸಂಕಲ್ಪ ಮಾಡಬೇಕು ಅಂದಾಗ ಸಾಧನೆ ಮಾಡಲು ಸಾಧ್ಯ ಎಂದು ಸಲಹೆ ನೀಡಿದರು.
ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಡಾ. ಸಂಜೀವಕುಮಾರ ಜುಮ್ಮಾ, ಪತ್ರರ‍್ತ ಸಂಘದ ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಹಿರಿಯ ಪತ್ರರ‍್ತರಾದ ಶರಣಪ್ಪ ಚಿಟಮೆ, ಮನ್ಮಥ ಸ್ವಾಮಿ, ಮಲ್ಲಪ್ಪ ಗೌಡಾ, ಸರ‍್ಯಕಾಂತ ಎಕಲಾರ, ಶಿವಕುಮಾರ ಸಾದುರೆ, ಅಹ್ಮದ್ ಜಂಬಗಿ, ಪಿಯು ಕಾಲೇಜಿನ ಪ್ರಾಂಶುಪಾಲ ನವೀಲಕುಮಾರ ಉತ್ಕಾರ, ಶಾಲೆಯ ಮುಖ್ಯಗುರು ಶಿವಕುಮಾರ ಹಿರೇಮಠ, ಶಿಕ್ಷಕರಾದ ರಾಜಕುಮಾರ ಘಾಟೆ, ತಾನಾಜಿ ಗಾಯಕವಾಡ, ಅವಿನಾಶ, ರಾಜಕುಮಾರ ಸೇರಿದಂತೆ ಅನೇಕರಿದ್ದರು. ಈ ವೇಳೆ ಎಸ್ಸೆಸ್ಸೆಲ್ಸಿ ಅಗ್ರಶ್ರೇಣ ಯಲ್ಲಿ ಪಾಸಾದ ವಿದ್ಯರ‍್ಥಿಗಳಿಗೆ ಹಾಗೂ ಪತ್ರರ‍್ತರಿಗೆ ಸತ್ಕರಿಸಲಾಯಿತು. ಸಂಗಮೇಶ ಬ್ಯಾಳೆ ನಿರೂಪಿಸಿದರು. ಮಾರುತಿ ಗಾದಗೆ ಸ್ವಾಗತಿಸಿದರು. ಸಾಯಪ್ಪ ಕರಂಜೆ ವಂದಿಸಿದರು.
೧೪ ರ‍್ಷದಿಂದ ಶೇ. ೧೦೦ರಷ್ಟು ಫಲಿತಾಂಶ ಸಂತಪೂರ ಅನುಭವ ಮಂಟಪ ಶಾಲೆ ಕಳೆದ ೧೪ ರ‍್ಷದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. ೧೦೦ರಷ್ಟು ಫಲಿತಾಂಶ ತೆಗೆಯುತ್ತಿದೆ ಎಂದು ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು. ಬೀದರ ಜಿಲ್ಲೆಯಲ್ಲಿ ಅನುಭವ ಮಂಟಪ ಶಾಲೆ ಮಾದರಿಯಾಗಿದೆ. ಇಲ್ಲಿಯ ಶಿಕ್ಷಕರ ಪ್ರಯತ್ನದಿಂದ ವಿದ್ಯರ‍್ಥಿಗಳು ನೀರಿಕ್ಷೆಯಂತೆ ಫಲಿತಾಂಶ ತೆಗೆಯುತ್ತಿದ್ದಾರೆ. ಇನ್ನೂ ಹೆಚ್ಚಿನ ಪ್ರಯತ್ನ ಮಾಡಿದರೇ ರಾಜ್ಯಕ್ಕೆ ಪ್ರಥಮ ಸ್ಥಾನವು ಬರುವದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಸಾಧಿಸುವ ಛಲವಿದ್ದರೆ ಯಾವುದೂ ಅಡ್ಡಿಯಲ್ಲ : ಪಟ್ಟದ್ದೇವರು
WhatsApp Group
Join Now