ಸಿಂಧನೂರು.ಜೂ.೨೨- ಖರೀದಿ ಕೇಂದ್ರಗಳ ಮೂಲಕ ಸರ್ಕಾರ ಖರೀದಿಸಿದ ಜೋಳಕ್ಕೆ ರೈತರ ಖಾತೆಗೆ ಹಣ ಜಮಾ ಮಾಡುವಲ್ಲಿ ಪ್ರತಿ ಕ್ವಿಂಟಲ್ ಗೆ ೨ ರೂಪಾಯಿ ಲಂಚ ಕೇಳುವ ಮೂಲಕ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸಿ ರೈತ ಸಮೂಹದ ವಿಶ್ವಾಸಕ್ಕೆ ದ್ರೋಹ ಬಗೆಯುವ ಕೆಲಸ ಮಾಡುತ್ತಿರುವುದು ಖಂಡನೀಯ, ಅತಿ ಶೀಘ್ರದಲ್ಲಿ ಎಚಿದರೆ ಇಚಿದು ವಾರದೊಳಗೆ ರೈತರ ಖಾತೆಗೆ ಹಣ ಜಮ ಆಗದಿದ್ದರೆ ಶಾಸಕರ ಮನೆ ಮುಂದೆ ಧರಣಿ ಮಾಡಲಾಗುವದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಿಗಿ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಎಂಟು ದಿನಗಳ ಒಳಗಾಗಿ ರೈತರ ಖಾತೆಗೆ ಹಣ ಜಮಾ ಮಾಡದಿದ್ದಲ್ಲಿ, ಶಾಸಕ ಹಂಪನಗೌಡ ಬಾದರ್ಲಿಯವರ ಮನೆ ಮುಂದೆ ಧರಣಿ ಮಾಡಲಾಗುವದು, ಜಿಲ್ಲೆಯಲ್ಲಿ ೩೦ ಕ್ಕೂ ಹೆಚ್ಚು ಜೋಳ ಖರೀದಿ ಕೇಂದ್ರಗಳಿವೆ. ಎಂ.ಡಿ.ಶಿವಬಸಪ್ಪ ಕ್ವಿಂಟಲ್ ಗೆ ೨ ರೂ ಕೊಟ್ಟರೆ ಮಾತ್ರ ಹಣ ಹಾಕುತ್ತಿದ್ದಾರೆ. ಲಂಚ ಕೊಡದ ತಾಲೂಕಿನ ಆರ್.ಎಚ್ ಕ್ಯಾಂಪ್ ೨, ದಿದ್ದಿಗಿ, ಬಾದರ್ಲಿ, ಹುಡಾ, ಗುಡುದೂರು, ಸೊಸೈಟಿಗಳ ರೈತರ ಖಾತೆಗೆ ಇಲ್ಲಿಯವರೆಗೂ ಹಣ ಜಮಾ ಮಾಡಿಲ್ಲ. ಲಂಚ ಕೊಟ್ಟ ದಡೆಸ್ಗೂರು ಸೂಸೈಟಿ ಫಲಾನುಭವಿಗಳಿಗೆ ಸಂಪೂರ್ಣ ಹಣ ಜಮಾ ಆಗಿದೆ. ಲಂಚಕ್ಕೆ ಸಂಬAಧಿಸಿದAತೆ ಜಿಲ್ಲಾಧಿಕಾರಿ, ಮಂತ್ರಿ, ಯಾರ ಹತ್ರನೂ ಹೋಗಿ ಹೇಳಿ ಎಂದು ರಾಜಾರೋಷವಾಗಿ ಹೇಳುತ್ತಿದ್ದಾರೆ.
ಈ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು, ಶಾಸಕರು, ಮತ್ತು ಮಂತ್ರಿಗಳು, ಒತ್ತಿ ಬಿದ್ದಿದ್ದಾರಾ ? ಎಂದು ಪ್ರಶ್ನೆ ಮಾಡಿದರು. ತಾಲೂಕಿನಲ್ಲಿ ೭,೫೦,೦೦೦ ( ಏಳು ಲಕ್ಷ ಐವತ್ತು ಸಾವಿರ ) ಕ್ವಿಂಟಲ್ ಜೋಳ ಖರೀದಿ ಆಗಿದೆ ಎಂದು ವರದಿ ಇದೆ. ಬೆಳೆಹಾನಿ ಬರಗಾಲದಿಂದ ಅಷ್ಟೊಂದು ಜೋಳ ನಮ್ಮ ತಾಲೂಕಿನಲ್ಲಿ ಬೆಳೆದಿಲ್ಲ. ಇದು ವರ್ತಕರಿಂದ ಬೇರೆ ಬೇರೆ ಜಿಲ್ಲೆ ಮತ್ತು ಹೊರ ರಾಜ್ಯಗಳ ಜಿಲ್ಲೆಗಳಿಂದ ಸಿಂಧನೂರು ತಾಲೂಕಿನಲ್ಲಿ ಜೋಳ ಖರೀದಿ ನಡೆದಿದೆ. ಇದರ ಬಗ್ಗೆ ನೀವು ಧ್ವನಿ ಎತ್ತಬೇಕಾಗಿತ್ತು ಎಂದು ಪತ್ರಕರ್ತರು ರೈತ ಸಂಘಟನೆ ಹೋರಾಟಗಾರರಿಗೆ ಪ್ರಶ್ನಿಸಿದಾಗ ಎಪಿಎಂಸಿಯಲ್ಲಿ ಅನಧಿಕೃತ ಜೋಳ ಖರೀದಿಸಿದ ಲಾರಿಗಳನ್ನು ಹಿಡಿದು ಈಗಾಗಲೇ ದೂರು ದಾಖಲಿಸಿದ್ದೆವೆಂದು ರೈತ ಸಂಘಟನೆಯ ಮುಖಂಡರು ಮಾಹಿತಿ ಕೊಟ್ಟರು.
ಈ ಸಂದರ್ಭದಲ್ಲಿ: ಬಸವರಾಜ ಹಂಚಿನಾಳ, ಅಣ್ಣಪ್ಪ ಜಾಲಿಹಾಳ, ಯೂಸುಫ್ ಸಾಬ್ ಕುನ್ನಟಗಿ, ಇಸ್ಮಾಯಿಲ್, ವೀರೇಶ, ಸೇರಿದಂತೆ ರೈತ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಶೀಘ್ರದಲ್ಲಿ ಜೋಳ ಖರೀದಿ ಹಣ ರೈತರ ಖಾತೆಗೆ ಜಮಾ ಆಗದಿದ್ದರೆ ಶಾಸಕರ ಮನೆ ಮುಂದೆ ಧರಣಿ: ದಿದ್ದಿಗಿ
