ಜೆಸ್ಕಾಂನಲ್ಲಿ ಯಾವುದೇ ಗೋಮಾಲ್,ಭ್ರಷ್ಟಾಚಾರ ನಡೆದಿಲ್ಲ, ಆರ್ಥಿಕ ನಷ್ಟವೂ ಆಗಿಲ್ಲ-ಹುಲಿರಾಜ್

Eshanya Times

ರಾಯಚೂರು: ಮೇ-10:

ರಾಯಚೂರು ಜೆಸ್ಕಾಂನಲ್ಲಿ ಯಾವುದೇ ಗೋಲಮಾಲ್, ಭ್ರಷ್ಠಾಚಾರ ನಡೆದಿಲ್ಲ ಹಾಗೂ ಜೆಸ್ಕಾಂಗೆ ಆರ್ಥಿಕ ನಷ್ಟವೂ ಆಗಿಲ್ಲವೆಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಮಾಜಿ ಕಾರ್ಯದರ್ಶಿ ಹುಲಿರಜ್ ಟಿ. ಸ್ಪಷ್ಟಪಡಿಸಿದ್ದಾರೆ.
ಜೆಸ್ಕಾಂ ರಾಯಚೂರು ಕಾರ್ಯ ಮತ್ತು ಪಾಲನೆ ಗ್ರಾಮೀಣ ಮತ್ತು ನಗರದ ಶಾಖಾಧಿಕಾರಿಗಳು ವಿಫಲವಾದ ವಿದ್ಯುತ್ ಪರಿವರ್ತಕ(ಟಿ.ಸಿ)ಗಳನ್ನು ವಿಭಾಗೀಯ ಉಗ್ರಾಣಕ್ಕೆ ಹಿಂತಿರುಗಿಲ್ಲವೆAದು ಕಾರ್ಯ ಮತ್ತು ಪಾಲನೆ ನಗರ ವಿಭಾಗಕ್ಕೆ ಜೆಸ್ಕಾಂ ಹೊಸಪೇಟೆ ಲೆಕ್ಕಾಧಿಕಾರಿ ವೆಂಕಟರತ್ನA,, ಹಿರಿಯ ಸಹಾಯಕ ಶ್ರೀಧರರಾವ್ ಇವರು ರಾಯಚೂರು ವಿಭಾಗಕ್ಕೆ ಆಗಮಿಸಿದೇ ಯಾವುದೇ ದಾಖಲೆ ಪರಿಶೀಲಿಸದೇ ಶಾಕಾಧಿಕಾರಿಗಳ ಹೇಳಿಕೆಯನ್ನು ಪಡೆಯದೇ ಸೌಜನ್ಯಕ್ಕಾದರೂ ಶಾಖಾಧಿಕಾರಿಗಳಿಗೆ ನೋಟಿಸ್ ನೀಡಿಲ್ಲ, ಹಾಗೂ ಜೆಸ್ಕಾಂ ಕಂಪನಿಯಲ್ಲಿ ಬೀದರ, ಹುಮಾಬಾದ್, ಕಲ್ಬುರ್ಗಿ ನಗರ ಮತ್ತು ಗ್ರಾಮಿಣ ಯಾದಗಿರಿ,ಕ ಸಿಂಧನೂರು, ಬಳ್ಳಾರಿ, ನಗರ ಮತ್ತು ಗ್ರಾಮೀಣ ಕೊಪ್ಪಳ, ಹೊಸಪೇಟೆ ಮತ್ತು ಹಗರಿಬೊಮ್ಮನಃಳಿ ವಿಭಾಗ ಉಗ್ರಾಣಗಳಲ್ಲಿ ಪರಿಶೀಲನೆ ಮಾಡದೇ ಉದ್ದೇಸಪೂರ್ವಕವಾಗಿ ಶಾಖಾಧಿಕಾರಿಗಳು ಮತ್ತು ಉನ್ನತ ಅಧಿಕಾರಿಗಳ ವಿರುದ್ದ ಸುಳ್ಳು ವರದಿಯನ್ನು ಕೊಟ್ಟಿದ್ದಾರೆಂದು ದೂರಿದ್ದಾರೆ.
ಅಲ್ಲದೇ ಸತ್ಯಾ ಸತ್ಯತೆಯನ್ನು ಅರಿಯದೇ ಒಟ್ಟು ೧೬೭ ವಿದ್ಯುತ್ ಪರಿವರ್ತಕಗಳು ಉಗ್ರಾಣಕ್ಕೆ ಹಿತಿರುಗಿಲ್ಲವೆಂದು ಸುಳ್ಳು ವರದಿ ನೀಡಿದ್ದಾರೆ. ವಿಫಲಗೊಂಡ ವಿದ್ಯುತ್ ಪರಿವರ್ತಕಗಳನ್ನು ಉಗ್ರಾಣಕ್ಕೆ ತರಲು ವಿಳಂಬವಾಗಿದೆ ಹೊರತು ಯಾವುದೇ ಭ್ರಷ್ಠಾಚಾರ ನಡೆದಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ.
ದಿ.೧೬-೪-೨೦೨೪ ರಂದು ರಾಯಚೂರು ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರಾದ ಚಂದ್ರಶೇಖರ ದೇಸಾಯಿ ಅವರು ಜೆಸ್ಕಾಂ ಕಲ್ಬುರ್ಗಿ ಪ್ರಧಾನ ವ್ಯವಸ್ಥಾಪಕರು( ಅ&ಮಾ.ಸಂ.ಅ) ಇವರಿಗೆ ಪತ್ರ ಬರೆದು ರಾಯಚೂರು ವಿಭಾಗದ ಶಾಖಾಧಿಕಾರಿಗಳು ೧೬೭ ವಿಫಲವಾದ ಪರಿವರ್ತಕಗಳಲ್ಲಿ ೧೬೦ ಪರಿವರ್ತಕಗಳನ್ನು ಹಿಂತಿರುಗಿಸಿರುತ್ತಾರೆ. ಇನ್ನೂ ೭ ಮಾತ್ರ ಹಿಂತಿರುಗಿಸಿರುವಿದಲ್ಲವೆAದು ಅವರ ವಿರುದ್ದ ಶಿಸ್ತು ಕ್ರಮ ತೆಗೆದುಕೊಳ್ಳಲು ಮೇಲಾಧಿಕಾರಿಗಳಿಗೆ ಪತ್ರವನ್ನು ಬರೆದಿರುತ್ತಾರೆ. ಆದರೆ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪತ್ರ ವ್ಯವಹಾರಗಳು ಕುಂಠಿತಗೊAಡಿರುತ್ತವೆ ಎಂದು ಅವರು ತಿಳಿಸಿದ್ದಾರೆ.
ಶಾಖಾಧಿಕಾರಿಗಳು ವಿಫಲಗೊಂಡ ವಿದ್ಯುತ್ ಪರಿವರ್ತಕಗಳು ಮರಳಿ ವಿಭಾಗೀಯ ಉಗ್ರಾಣಕ್ಕೆ ಹಿಂತಿರುಗಿಸದೇ ಇದ್ದರೆ ಅವರ ಸಂಬಳದಲ್ಲಿ ನಷ್ಟದ ಹಣವನ್ನು ನಿಯಮದ ಪ್ರಕಾರ ಕಡಿತಗೊಳಿಸಲಾಗಿದೆ. ಹೊರತು ಯಾವುದೇ ಭ್ರಷ್ಟಾಚಾರ ನಡೆದಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ.
ಹೊಸಪೇಟೆಯ ಲೆಕ್ಕಾಧಿಕಾರಿ ವೆಂಟರತ್ನA ಹಾಗೂ ಹಿರಿಯ ಸಹಾಯಕ
ಶ್ರೀಧರ ಅವರು ಸುಮಾರು ವಿಭಾಗೀಯ ಕಚೇರಿಗಳಿಗೆ ಭೇಟಿ ನೀಡದೆ ಉದ್ದೇಶಪೂರ್ವಕವಾಗಿ ರಾಯಚೂರು ವಿಭಾಗೀಯ ಕಛೇರಿಗೆ ಕೇವಲ ೨ ಗಂಟೆ ಭೇಟಿ ನೀಡಿ ಸುಳ್ಳು ವರದಿಗಳನ್ನು ಸೃಷ್ಠಿ ಮಾಡಿ ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದು, ಇವರಗಳ ವಿರುದ್ದ ಸಊಕ್ತ ಕರಮವನ್ನು ತೆಗೆದುಕೊಮಡು ಕಂಪನಿಗೆ ಕಟ್ಟೆ ಹೆಸರು ಹಾಗೂ ಕಪ್ಪು ಚುಕ್ಕೆ ತರಲು ಕಾರಣಭೂತರಾದ ಇವರ ವಿರುದ್ದ ಕಾನೂನು ಪ್ರಕಾರ ಇವರ ವಿರುದ್ದ ಕ್ರಮಕ್ಕೆ ಎಲ್ಲಾ ಆಧಿಕಾರಿಗಳು ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದಾರೆAದು ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";