ಸಿರುಗುಪ್ಪ.ಅ.೦7:- ರಾಷ್ಟೀಯ ಬಾಲ ಸ್ವಾಸ್ತö್ಯ ಕಾರ್ಯಕ್ರಮದಡಿ ಹುಟ್ಟಿನ ಮಕ್ಕಳಿಂದ ಹಿಡಿದು ೧೮ವರ್ಷದ ವರೆಗಿನ ಮಕ್ಕಳಿಗೆ ಆರೋಗ್ಯ ತಪಾಷಣಾ ಶಿಬಿರವನ್ನು ಏರ್ಪಡಿಸಲಾಗುತ್ತಿದೆ, ಇಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ತಪಾಷಣೆ ನಡೆಸಲಾಗುತ್ತಿದೆ ಎಂದು ವೈದ್ಯ ಮೊಹಮ್ಮದ್ ಜಾಫರ್ ತಿಳಿಸಿದರು.
ತಾಲೂಕಿನ ಹಳೇಕೋಟೆಯ ೫ನೇ ಅಂಗನವಾಡಿ ಕೇಂದ್ರದಲ್ಲಿ ನಡೆದ ರಾಷ್ಟೀಯ ಬಾಲ ಸ್ವಾಸ್ತö್ಯ ಕಾರ್ಯಕ್ರಮದಡಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮವು ಜನನದಿಂದ ಹಿಡಿದು ೧೮ ವರ್ಷ ವಯಸ್ಸಿನ ಮಕ್ಕಳ ನಾಲ್ಕು ಡಿ.ಎಸ್.ಗಳ ತಪಾಸಣೆಯನ್ನು ಒಳಗೊಂಡಿರುತ್ತದೆ. ಜನನದಲ್ಲಿ ದೋಷಗಳು, ರೋಗಗಳು, ನ್ಯೂನ್ಯತೆಗಳು ಮತ್ತು ಬೆಳವಣಿಗೆಯ ವಿಳಂಬಗಳು ಎಂದು ಗುರುತಿಸಿ ಅಗತ್ಯ ಚಿಕಿತ್ಸೆಯನ್ನು ನೀಡಲಾಗುತ್ತದೆ. ೩೨ ಸಾಮಾನ್ಯ ಆರೋಗ್ಯ ಪರಿಸ್ಥಿತಿಗಳನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿ ಉಚಿತ ಚಿಕಿತ್ಸೆ ಮತ್ತು ನಿರ್ವಹಣೆ, 2ನೇ ಹಂತದಲ್ಲಿ ಶತ್ರಚಿಕಿತ್ಸೆಯನ್ನು ಮಾಡಲಾಗುತ್ತಿದೆ,
ಉತ್ತಮ ಆರೋಗ್ಯವಂತ ಮಕ್ಕಳು ದೇಶದ ಆಸ್ತಿಯಾಗಿದ್ದು, ಉತ್ತಮ ಆರೋಗ್ಯವಂತ ಮಕ್ಕಳ ಆರೋಗ್ಯ ಕಾಪಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಡಾ.ಸ್ವರ್ಣಲತ, ಸಹಾಯಕ ಶುಶ್ರೂಷಕಿ ಗ್ರೇಸಿ, ನೇತ್ರ ಸಹಾಯಕ ರಂಗನಾಥ, ಅಂಗನವಾಡಿ ಕಾರ್ಯಕರ್ತೆ ಸಾವಿತ್ರಮ್ಮ, ಸಹಾಯಕಿ ಹುಲಿಗೆಮ್ಮ ಮತ್ತು ಮಕ್ಕಳು ಇದ್ದರು.