ವಿವಿಧ ಇಲಾಖೆಯಲ್ಲಿ ರ‍್ಕಾರದ ಅನುದಾನ ದರ‍್ಬಳಕೆ:ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹನುಮಂತ ಸೀಕಲ್, ಕಾಶೀನಾಥ್ ಕರ‍್ಡಿ ಆಗ್ರಹ

Eshanya Times

ಮಾನ್ವಿ,: ಜಿಲ್ಲಾ ಪಂಚಾಯತಿಯ ಸಹಾಯಕ ಕರ‍್ಯನರ‍್ವಾಹಕ ಅಭಿಯಂತರ ಶಿವಾಜಿ ಚೌವ್ಹಾಣ ಮತ್ತು ವೆಂಕಟೇಶ ಕಿರಿಯ ಅಭಿಯಂತರರು ಇವರು ಜಿಲ್ಲಾ ಪಂಚಾಯತ ಇಂಜಿನಿಯರಿಂಗ್ ಉಪ ವಿಭಾಗದಿಂದ ಅನುಷ್ಠಾನಗೊಳಿಸಿದ ರಸ್ತೆ ಸೇತುವ ಯೋಜನೇತರ(ನರ‍್ವಹಣೆ ಅನುದಾನದಡಿ) ಗ್ರಾಮೀಣ ಲೆಕ್ಕ ಶರ‍್ಷಿಕೆ ೫೦೫೪ ಗ್ರಾಮೀಣ ಯೋಜನೆ ರಸ್ತೆ ಕೆ.ಕೆ.ಆ‌ರ್.ಡಿ.ಬಿ ಜಿಲ್ಲಾ ಪಂಚಾಯತ ಅಂಕ ಡಾಕ್ಯೂಮೆಂಟ್ ರಾಜ್ಯ ಭೀಮೇಶ ಹಣಕಾಸು ಆಯೋಗದ ಜಿಲ್ಲಾ ಪಂಚಾಯತ ರ‍್ನಿಂಬಧಿತ ಅನುದಾನದ ಅಡಿ ನರೇಗಾ ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಎರಡು ಮತ್ತು ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಅನುದಾನವನ್ನು ದರ‍್ಬಳಕೆ ಮಾಡಿದ್ದು ಕೆಲವೊಂದು ಕಡೆ ಅಸರ‍್ಪಕ ಅವೈಜ್ಞಾನಿಕವಾಗಿ ಕಳಪೆ ಗುಣಮಟ್ಟದ ಕಾಮಗಾರಿ ನರ‍್ವಹಣೆ ಕೆಲವು ಕಡೆ ಅಂದಾಜು ಪತ್ರಿಕೆ ವಿವಿಧ ಲೆಕ್ಕ ಅನ್ವಯ ಕಾಮಗಾರಿಯನ್ನು ನರ‍್ವಹಿಸಿರುವುದಿಲ್ಲ ಹಾಗೂ ಮನ್ಸೂರು ಅಹ್ಮದ್ ಶಿಶು ಅಭಿವೃದ್ಧಿ ಗ್ರಾಮೀಣ ಯೋಜನಾಧಿಕಾರಿಗಳು ಮಾನವಿ ಮತ್ತು ಇವರು ಅಂಗನವಾಡಿ ಕರ‍್ಯರ‍್ತೆಯ ಪದೋನ್ಯತಿ ಸ್ಥಾನಪಲ್ಲಟದ ಹೆಸರಿನಲ್ಲಿ ಸರಕಾರದ ಮರ‍್ಗಸೂಚಿ ಸುತ್ತೋಲೆ ಉಲ್ಲಂಘನೆ ಮಾಡಿ ವಾಮಮರ‍್ಗ ಅನುಸರಿಸಿ ಅಧ್ಯಕ್ಷರು ಆಯ್ಕೆ ಸಮಿತಿ ಇವರಿಗೆ ತಪ್ಪು ಮಾಹಿತಿ ನೀಡಿ ಅಂಗನವಾಡಿ ಕೇಂದ್ರಕ್ಕೆ ಸರಬರಾಜು ಮಾಡುವ ಪಡಿತರ ಸಾಮಗ್ರಿಗಳ ಗುತ್ತೇದಾರರಿಂದ ರ‍್ಸೆಂಟೇಜ್ ಅನುದಾನ ಹಾಗೂ ಅಂಗನವಾಡಿ ಕೇಂದ್ರ ಕಳಪೆ ದುರಸ್ತಿ ಕಾಮಗಾರಿಯನ್ನು ಅಧಿಕಾರಿಗಳನ್ನು ಸ್ಥಾನಿಕ ವೀಕ್ಷಣೆ ಮಾಡದೆ ಅಮಾನತು ಹಸ್ತಾಂತರ ಪತ್ರ ನೀಡುವುದರ ಮೂಲಕ ಆವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ದಲಿತ ಸಂರ‍್ಷ ಸಮಿತಿ ರಾಜ್ಯಾಧ್ಯಕ್ಷ ಹನುಮಂತ ಸೀಕಲ್, ಜಿಲ್ಲಾಧ್ಯಕ್ಷ ಕಾಶೀನಾಥ್ ಕರ‍್ಡಿ ಆಗ್ರಹಿಸಿದ್ದಾರೆ. ರ‍್ಕಾರದ ವಿವಿಧ ಕಾಮಗಾರಿಯ ದರ‍್ಬಳಕೆ ಹಾಗೂ ಕಾಮಗಾರಿಗಳಿಗೆ ಚಾಲನೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ತಾಲೂಕ ದಲಿತ ಸಂರ‍್ಷ ಸಮಿತಿಯಿಂದ ಶಾಸಕರ ಭವನದ ಮುಂಭಾಗದಲ್ಲಿ ಧರಣಿ ನಡೆಸಲಾಯಿತು. ಮಾತೃವಂದನಾ ಮೊಟ್ಟೆ ಸರಬರಾಜು ಇನ್ನಿತರ ಅನುದಾನದ ಸತ್ಯಾಗ್ರಹವನ್ನು ದರ‍್ಬಳಕೆ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆ ವತಿಯಿಂದ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಅನುದಾನದ ದರ‍್ಬಳಕೆ ಹಾಗೂ ಮಾತಾ ಕಾಲೋನಿಯಲ್ಲಿ ಬಾಲಕಿಯರ ವಸತಿ ನಿಲಯದ ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ ಕಳೆದ ರ‍್ಷಗಳಿಂದ ಟೆಂಡರ್ ಆಹ್ವಾನಿಸಿದರು ಬಾಲಕಿಯರ ವಸತಿ ನಿಲಯ ನರ‍್ಮಾಣ ಮಾಡುವಲ್ಲ ನಟರಾಜ ತಾಲೂಕಾ ಸಮಾಜಕಲ್ಯಾಣಾಧಿಕಾರಿಗಳು ದಿವ್ಯ ನರ‍್ಲಕ್ಷ್ಯ ಹಾಗೂ ಕಲ್ಯಾಣ ಇಲಾಖೆಗೆ ಶರ‍್ಷಿಕೆ ಯೋಜನೆಯಡಿ ಬಿಡುಗಡೆಗೊಂಡ ಅನುದಾನ ಮತ್ತು ರ‍್ನಾಟಕ ಕುಡಿಯುವ ನೀರು ನರ‍್ಮಲ್ಯ ಇಲಾಖೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಮನೆ ಮನೆಗೆ ನೀರು ಜಲಜೀವನ್ ಮಿಷನ್ ಯೋಜನೆಯಡಿ ಮಾನವಿ ತಾಲೂಕಿನಾಧ್ಯಂತ ಕಾಮಗಾರಿಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳ ದರ‍್ಬಳಕೆಗೆ ಕಾರಣೀಭೂತರಾಗಿರುವುದು ಸೇರಿದಂತೆ ಈ ವೇಳೆ ತಾ.ಪಂ.ಇಓ ಖಾಲಿದ್ ಆಹ್ಮದ್ ಇವರಿಗೆ ನೀಡಿದ ಮನವಿಯಲ್ಲಿ ಪ್ರಮುಖ ಬೇಡಿಕೆಗಳಾದ ಶಿವಾಜಿ ಚೌವ್ಹಾಣ, ಸಹಾಯಕ ಕರ‍್ಯನರ‍್ವಾಹಕ ಅಭಿಯಂತರರು ಜಿಲ್ಲಾ ಪಂಚಾಯತ ಮಾನವಿ ಇವರ ಅವಧಿಯಲ್ಲಿ ವಿವಿಧ ಲೆಕ್ಕ ಶರ‍್ಷಿಕೆ ಅಡಿ ಕೈಗೊಂಡ ಕಾಮಗಾರಿಗಳ ಸ್ಥಾನಿಕ ಪರಿಶೀಲನೆ ಹಣ ಪಾವತಿ ಮಾಡಿರುವ ಬಗ್ಗೆ ತೃತಿಯ ತಂಡವನ್ನು ರಚನೆ ಮಾಡಿ ತನಿಖೆಗೆ ಒಳಪಡಿಸಬೇಕು ಅಲ್ಲಿಯವರೆಗೆ ಸಾಕ್ಷಾಧಾರಗಳು ನಾಶವಾಗದಂತೆ ಇವರನ್ನು ಸೇವೆಯಿಂದ ಆಮಾನತ್ತುಗೊಳಿಸಲು ಸರಕಾರಕ್ಕೆ ಪ್ರಸ್ಥಾವನೆ ಸಲ್ಲಿಸಬೇಕು. ಮನ್ಸೂರು ಅಹ್ಮದ್ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಾನವಿ ಇವರು ಅಂಗನವಾಡಿ ಕರ‍್ಯರ‍್ತೆ ಪದೋನ್ಯತಿ ಸ್ಥಾನಪಲ್ಲಟದ ಹೆಸರಿನಲ್ಲಿ ಸರಕಾರದ ಮರ‍್ಗಸೂಚಿ ಸುತ್ತೋಲೆ ಉಲ್ಲಂಘನೆ ಮಾಡಿ ಸರಕಾರ ಆಫ್ ಲೈನ್ ನೇಮಕಾತಿಯನ್ನು ರದ್ದುಪಡಿಸಿದ್ದು ಈ ಮೊದಲು ಹೊರಡಿಸಿದ ಅಧಿಸೂಚನೆಯ ಅಂಗನವಾಡಿ ಕೇಂದ್ರಗಳಿಗೆ ವಾಮಮರ‍್ಗ ಅನುಸರಿಸಿ ಅಂಗನವಾಡಿ ಕರ‍್ಯರ‍್ತೆ ಪದೋನೃತಿ ಸ್ಥಾನಪಲ್ಲಟದ ಹೆಸರಿನಲ್ಲಿ ಆಫ್ ಲೈನ್ ಆಯ್ಕೆಗೆ ಸರಕಾರದಿಂದ ಅನುಮತಿ ಪಡೆಯದೆ ಆಯ್ಕೆ ಸಮಿತಿ ಅಧ್ಯಕ್ಷರು ಇವರಿಗೆ ತಪ್ಪು ಮಾಹಿತಿ ನೀಡಿದ್ದು ಗುತ್ತೇದಾರರಿಂದ ರ‍್ಸಂಟೇಜ್ ಮತ್ತು ಅಂಗನವಾಡಿ ಕೇಂದ್ರ ದುರಸ್ತಿ ಕಾಮಗಾರಿಯನ್ನು ಸ್ಥಾನಿಕ ವೀಕ್ಷಣೆ ಮಾಡದೆ ಹಸ್ತಾಂತರ ಪತ್ರ ನೀಡುವುದರ ಮೂಲಕ ಆವ್ಯವಹಾರದಲ್ಲಿ ತೊಡಗಿದ್ದು ಮಾತೃವಂದನಾ ಮೊಟ್ಟೆ ಸರಬರಾಜು ಇನ್ನಿತರ ಅನುದಾನದ ದರ‍್ಬಳಕೆ ಇದರ ಸಮಗ್ರ ತನಿಖೆಗೆ ತೃತೀಯ ತಂಡವನ್ನು ರಚನೆ ಮಾಡಿ ತನಿಖೆಗೆ ಒಳಪಡಿಸುವುದು ಮತ್ತು ಅಲ್ಲಿಯವರೆಗೆ ಸಾಕ್ಷಾಧಾರಗಳು ನಾಶವಾಗದಂತೆ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಮಾನವಿ ತಾಲೂಕಿನ ಉದ್ದಾಳ. ಕರ‍್ಡಿ, ನಂದಿಹಾಳ ಬೈಲರ‍್ಚಡ ಹಾಗೂ ಇನ್ನಿತರ ಗ್ರಾಮಗಳಲ್ಲಿ ಕೈಗೊಂಡ ಜಲ ಜೀವನ ಮಿಷಯನ್ (ಜೆ.ಜೆ.ಎಂ) ಕಾಮಗಾರಿಗಳನ್ನು ಅಂದಾಜು ಪಟ್ಟಿಯ ಅನ್ವಯ ಕಾಮಗಾರಿ ತನಿಖೆಗೆ ಒಳಪಡಿಸಬೇಕು ಹಣ ಪಾವತಿ ಮಾಡಿರುವ ಬಗ್ಗೆ ತೃತಿಯ ತಂಡವನ್ನು ರಚನೆ ಮಾಡಿ ತನಿಖೆಗೆ ಒಳಪಡಿಸಬೇಕು ಸಾಕ್ಷಾಧಾರಗಳು ಅಲ್ಲಿಯವರೆಗೆ ನಾಶವಾಗದಂತೆ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸಲು ಪ್ರಸ್ಥಾವನೆ ಸಲ್ಲಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ಮೇಲ್ವಿಚಾರಣೆಯ ವಸತಿ ನಿಲಯದ ಮೇಲ್ವಿಚಾರಕರಾದ ಶಿವಪ್ಪ, ಚಂದ್ರಶೇಖರ ಇವರ ಅವಧಿಯಲ್ಲಿ ನಡೆದ ಅವ್ಯವಹಾರದ ಕುರಿತು ತನಿಖೆಗೆ ಒಳಪಡಿಸಬೇಕು ಮತ್ತು ತಕ್ಷಣದಲ್ಲಿ ಇವರನ್ನು ಇಲ್ಲಿಂದ ರ‍್ಗಾವಣೆಗೊಳಿಸಬೇಕು. ಮಾನವಿ ನಗರದಲ್ಲಿ ಬಿನ್ ಶೇತಿಯಾಗಿ ಲೇಔಟಗಳನ್ನು ಬಿನ್ ಶೇತಿ ಪರವಾಗಿ ಪರವಾನಿಗೆ ನಗರ ಯೋಜನಾ ಪ್ರಾಧಿಕಾರದಿಂದ ತಾಂತ್ರಿಕ ಮಂಜೂರಾತಿಯ ಷರತ್ತು ಬದ್ದದ ಅನ್ವಯ ತನಿಖೆಗೆ ಒಳಪಡಿಸಿ ತಪ್ಪಿತಸ್ಥ ಸಿಬ್ಬಂದಿ ಮುಖ್ಯಾಧಿಕಾರಿಗಳು ಮಾನವಿ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು. ಉದ್ದಾಳ ಗ್ರಾಮದ ಗ್ರಾಮ ಆಡಳಿತಾಧಿಕಾರಿಯಾದ ಮಂಜುನಾಥ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಇವರ ಅಕ್ರಮ ಆಸ್ತಿಯನ್ನು ಸರಕಾರದ ಹಂತದಲ್ಲಿ ತನಿಖೆಗೆ ಒಳಪಡಿಸಿ ಸರಕಾರ ಮುಟ್ಟುಗೋಲು ಹಾಕಿಕೊಳ್ಳುವುದು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ಹಾಗೂ ಕೂಡಲೇ ಅಮಾನತು ಮಾಡುವಂತೆ ಆಗ್ರಹಿಸಿದರು.
ದಸಂಸ ರಾಜ್ಯಾಧ್ಯಕ್ಷ ಹೆಚ್.ಹನುಮಂತ ಸೀಕಲ್, ಜಿಲ್ಲಾಧ್ಯಕ್ಷ ಕಾಶೀನಾಥ್ ಕರ‍್ಡಿ, ದಲಿತ ಮುಖಂಡರಾದ ಹುಸೇನಪ್ಪ ನಂದಿಹಾಳ, ತಾಯಣ್ಣ ಕಪಗಲ್, ಹನುಮಂತ ಬೈಲರ‍್ಚಡ, ಜಿ.ಹನುಮಂತ ಉದ್ಬಾಳ, ಬಸವರಾಜ ಪೋತ್ನಾಳ, ತಿಪ್ಪಣ್ಣ ಜಾನೇಕಲ್, ಬುಡ್ಡಪ್ಪ ಕರೆಗುಡ್ಡ, ಸಿದ್ರಾಮೇಶ ಬಡಿಗೇರ, ಬಂಡೆಗುರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";