ಶಹಾಪುರಃ
ನಗರದ ಫಕಿರೇಶ್ವರ ಮಠದ ಆವರಣದಲ್ಲಿ ಜ್ಞಾನಾಮೃತ ಸೇವಾ ಶಿಕ್ಷಣ ಟ್ರಸ್ಟ್, ಪತಂಜಲಿ ಯೋಗ ವಿಜ್ಞಾನ ತರಬೇತಿ ಕೇಂದ್ರ, ವೈದ್ಯಶ್ರೀ ಸಮಗ್ರ ಆರೋಗ್ಯ ಕೇಂದ್ರ ಮತ್ತು ಸೇಡಂನ ಶ್ರೀಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯಿಂದ ೭ ದಿನಗಳ ಕಾಲ ಉಚಿತ ಯೋಗ ಶಿಬಿರ ಕರ‍್ಯಕ್ರಮವನ್ನು ಸಸಿಗೆ ನೀರೆರಿಯುವ ಮೂಲಕ ಫಕಿರೇಶ್ವರ ಮಠದ ಗುರುಪಾದ ಮಹಾಸ್ವಾಮೀಜಿಯವರು ಚಾಲನೆ ನೀಡಿದರು.
ಕಳೆದ ೩೦ ರ‍್ಷಗಳಿಂದ ಯೋಗಾಚರ‍್ಯ ನರಸಿಂಹ ವೈದ್ಯ ಅವರು ನಗರ ಸೇರಿದಂತೆ ಹಲವಡೆ ಉಚಿತ ಯೋಗ ತರಬೇತಿ ನೀಡುವ ಮೂಲಕ ಆರೋಗ್ಯಕರ ಸಮಾಜ ನರ‍್ಮಾಣಕ್ಕೆ ಯುವಕರ ತಂಡ ಕಟ್ಟಿಕೊಂಡು ಶ್ರಮಿಸುತ್ತಿರುವದು ಶ್ಲಾಘನೀಯವೆಂದು ತಿಳಿಸಿದರು.
ಯೋಗಾಚರ‍್ಯ ನರಸಿಂಹ ವೈದ್ಯರು ೭ ದಿನಗಳ ಕಾಲ ಕಲಿಸಿದ ಯೋಗವನ್ನು ತಪ್ಪದೆ ಕಲಿತು ನಿತ್ಯ ಪರಿಪಾಠವನ್ನು ಹಾಕಿಕೊಳ್ಳುವ ಮೂಲಕ ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳಬೇಕು. ಕೇವಲ ೧೦ ನಿಮಿಷ ಶಾಂತವಾಗಿ ಕುಳಿತು ನಿತ್ಯ ಧ್ಯಾನ ಮಾಡಿದ್ದಲ್ಲಿ ಅದ್ಭುತ ಶಕ್ತಿ ನಿಮಗೆ ಲಭಿಸಲಿದೆ ಆದರೆ ನಿತ್ಯ ಅದನ್ನು ಅನುಸರಿಸಬೇಕು ಅಂತಹ ಶಕ್ತಿ ಯೋಗದಲ್ಲಿದೆ ಅದನ್ನು ಮನಗಾಣಬೇಕಿದೆ. ಶಿಬಿರದಲ್ಲಿ ಭಾಗವಹಿಸಿ ಸದುಪಯೋಗ ಪಡೆಯಬೇಕೆಂದು ಕರೆ ನೀಡಿದರು.
ಕರವೇ ಉಕ ಅಧ್ಯಕ್ಷ ಡಾ.ಶರಣು ಗದ್ದುಗೆ ಹಾಗೂ ಪತ್ರರ‍್ತರ ಸಂಘದ ಅಧ್ಯಕ್ಷ ಮಲ್ಲಿಕರ‍್ಜುನ ಮುದ್ನೂರ ಮಾತನಾಡಿ, ಯೋಗಾಚರ‍್ಯ ನರಸಿಂಹ ವೈದ್ಯ ಅವರು ಹಲವಾರು ರ‍್ಷಗಳಿಂದ ಶಹಾಪುರದಲ್ಲಿ ಉಚಿತವಾಗಿ ಯೋಗ ಶಿಬಿರಗಳನ್ನು ಆಯೋಜಿಸಿ ಜನರಿಗೆ ರ‍್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಂತರ ರಾಷ್ಟ್ರೀಯ ಯೋಗ ದಿನ ಘೋಷಣೆಯಾಗುವ ಸುಮಾರು ೧೦ ರ‍್ಷಗಳ ಮೊದಲೇ ನಗರದಲ್ಲಿ ಯುವಕರಿಗೆ, ಮಹಿಳೆಯರಿಗೆ ಶಾಲಾ ವಿದ್ಯರ‍್ಥಿಗಳಿಗೆ ಯೋಗವನ್ನು ಕಲಿಸುವಂತ ಕೆಲಸ ಮಾಡುತ್ತಾ ಬಂದಿದ್ದಾರೆ. ಜನರು ಆರೋಗ್ಯಕರ ಬದುಕು ಕಟ್ಟಿಕೊಳ್ಳಲಿ ಎಂಬ ಮಹಾದಾಸೆಯಿಂದ ಸೇವಾ ಮನೋಭಾವದಿಂದ ಅವರು ಕೆಲಸ ಮಾಡುತ್ತಿದ್ದು, ರ‍್ವರ ಸಹಭಾಗಿತ್ವ ಅಗತ್ಯವಿದೆ ಎಂದರು.
ಡಾ.ಮಹೇಶ ಪಾಟೀಲ್ ಮಾತನಾಡಿದರು. ವಕೀಲರಾದ ರಾಯಣ್ಣ ಹೊನ್ನಾರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಗತಿಪರ ರೈತ ಅಮರೇಶಗೌಡ ಪಾಟೀಲ್ ಇದ್ದರು.
ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಸಂಗೀತ ಸೇವೆ ನೀಡಿದರು.
ಯೋಗಬಂಧು ವೀರೇಶ ಉಳ್ಳಿ ನಿರೂಪಿಸಿದರು. ಸಂಗನಗೌಡ ಪಾಟೀಲ್ ಅನವಾರ ವಂದಿಸಿದರು.