ರಾಯಚೂರು: ಆ-೩೦: ಜಮಾಅತೇ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದವತಿಯಿಂದ ರಾಜ್ಯದಾಧ್ಯಂತ ನೈತಿಕತೆಯೇ ಸ್ವಾತಂತ್ರö್ಯ ಭರವಸೆ ಅಭಿಯಾನ ಸೆ.೧ ರಿಂದ ೩೦ರವರೆಗೆ ನಡೆಯಲಿದೆ ಎಂದು ಸಂಚಾಲಕಿ ಅಶೀಮಾ ಸುಲ್ತಾನ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾಜದಲ್ಲಿ ಸ್ವಾತಂತ್ರö್ಯದ ಹೆಸರನಲ್ಲಿ ನಗ್ನತೆ, ಮಾದಕ ವ್ಯಸನ,ಸಲಿಂಗಕಾಮ,ವೇಶ್ಯವಾಟಿಕೆ ಸೇರಿದಂತೆ ಅನೇಕು ಕೆಡುಕುಗಳು ನಡೆಯುತ್ತಿವೆ. ಬಂಡವಾಳ ಶಾಹಿಗಳ ಕುತಂತ್ರ ದಿಂದ ಆರ್ಥಿಕ ಗುಲಾಮಗಿರಿಗೆ ತಳ್ಳುವ ಪ್ರಯತ್ನ ಒಂದು ಕಡೆ ನಡೆದರೆ ಮತ್ತೊಂದು ಕಡೆ ಆಧುನಿಕತೆ ಯುಗದಲ್ಲಿ ಯುವಕ ಯುವತಿರನ್ನು ದಾರಿತಪ್ಪಿಸುವ ಕೆಲಸ ನಡೆಯುತ್ತಿದೆ. ಆಶ್ಲೀಲತೆ ಸಾಮಾನ್ಯ ಎನ್ನುವಂತಾಗಿ ಸ್ವಾತಂತ್ರö್ಯ ಎಂದು ಬಿಂಬಿಸಲಾಗುತ್ತಿದೆ. ಸಾಮಾಜಿಕ, ಆರ್ಥಿಕ ಸವಾಲುಗಳು ಬಡ ಕುಟುಂಬಗಳನ್ನು ಕಾಡುತ್ತಿವೆ. ನೈತಿಕೆ ಕುಸಿತ ದಿಂದ ಬದಲಾವಣೆ ಹೆಸರಿನಲ್ಲಿ ಸಮಾಜಕ್ಕೆ ಮಾರಕವಾಗುವ ಬೆಳವಣಿಗೆಗಳು ನಡೆಯುತ್ತಿರುವದು ಕಳವಳಕಾರಿಯಾಗಿದೆ. ಪ್ರತಿ ಮನೆ ಮನೆಗಳಲ್ಲಿ ನೈತಿಕತೆಯನ್ನು ಜಾಗೃತಗೊಳಿಸಲು ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ಘಟಕ ದಿಂದ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು,ವಿದ್ಯಾರ್ಥಿನಿಯರು, ಪಾಲಕರು, ಬಡಾವಣೆಗಳಲ್ಲಿ ಅರಿವು ಮೂಡಿಸು ಕೆಲಸ ಮಾಡಲಾಗುತ್ತದೆ ಎಂದರು.
ವಿಚಾರಗೋಷ್ಠಿಗಳು, ಜಾಗೃತಿ ಸಭೆಗಳನ್ನು ನಡೆಸಲಾಗುವುದೆಂದರು.ಎಲ್ಲಾ ಸಮೂದಾಯದ ಜನ ನೈತಕತೆ ಸ್ವಾತಂತ್ರö್ಯದ ಅರಿವು ಪಡೆಯಬೇಕಿದೆ ಎಂದರು.
ರಾಜ್ಯ ಕಾರ್ಯದರ್ಶಿ ಶ್ರೀಮತಿ ಹುಮ್ರಾ ಸಾಹೇಬಾ ಮಾತನಾಡಿ, ರಾಷ್ಟçವ್ಯಾಪ್ತಿಯಲ್ಲಿ ನೈತಿಕತೆಯೇ ಸ್ವಾತಂತ್ರö್ಯ ಭರವಸೆ ಅಭಿಯಾನ ನಡೆಯುತ್ತದೆ. ಇದರ ಅಂಗವಾಗಿ ಸಾಮಜಿಕ ಜಾಲತಾಣಗಳಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ಮಹಿಳಾ ಘಟಕ ದಿಂದ ನಿರ್ವಹಿಸಲಾಗುತ್ತದೆ. ಉಪನ್ಯಾಸ, ಲೇಖನಗಳು,ವಿಚಾರಗೋಷ್ಠಿಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅತಿಯಾ ಸುಲ್ತಾನ್, ಶಮೀಸುದಿಯಾ ಬೇಗಂ,ಜಿಲ್ಲಾಧ್ಯಕ್ಷ ನುಶ್ರತಾಜಹಾ ಉಪಸ್ಥಿತರಿದ್ದರು.