ರಾಯಚೂರು: ಎಪಿಎಂಸಿ ನಿವೇಶನ ಹಂಚಿಕೆ ತಡೆ ಹಿಡಿದ ಸಚಿವರ ಮೌಖಿಕ ಆದೆಶವನ್ನು ಹಿಂಪಡೆಯಲು ಒತ್ತಾಯಿಸಿ ಉಸ್ಮಾನಿಯ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ದಿ ಸಂಘದ ನೇತೃತ್ವದಲ್ಲಿ ಎಪಿಎಂಸಿ ಕಛೇರಿ ಮೂಂದೆ ಅನಿರ್ಧಿಷ್ಟ ಧರಣಿ ಆರಂಭಿಸಲಾಗಿದೆ.
ಎಪಿಎಂಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿ, 2022 ಡಿಸೆಂಬರ್‌ನಲ್ಲಿ ನಿವೇಶನ ಹಂಚಿಕೆ ಪ್ರಕ್ರಿಯೆ ಆಂಭವಾಯಿತು. ಈ ಹಿಂದೆ ಅನ್ಯಾಯವಾದ ತರಕಾರಿ ಮಾರಾಟಗಾರರಿಗೆ ನಿವೇಶನ ಹಂಚಿಕೆ ಮಾಡಿರುವುದಿಲ್ಲ, ಸತತ ಹೋರಾಟಕ್ಕೆ ಸ್ಪಂದಿಸಿ ನಿವೇಶನ ಹಂಚಿಕೆಗೆ ಆದೇಶ ನೀಡಲಾಗಿತ್ತು. ಎಪಿಎಂಸಿಯ ಅಧಿಸೂಚನೆ ಪ್ರಕಾರ ನಿಯಮಾಸನುಸಾರ ಷರತ್ತು ಒಳಗೊಂಡAತೆ ತರಕಾರಿ ಮಾರಾಟಗಾರರು ಮುಂಗಡ ಹಣವನ್ನು ಪಾವತಿಸಿದ್ದಾರೆ. ನಿಯಮಾನುಸಾರ ಹಣ ಪಾವತಿಸಿ ನಿವೇಶನ ಪಡೆದಿಕೊಳ್ಳುವ ಸಂದರ್ಭದಲ್ಲಿ ಎಪಿಎಂಸಿ ಸಚಿವ ಶಿವಾನಂದ ಪಾಟೀಲ್ರು ನಿವೇಶನ ದರ ಹೆಚ್ಚಿಸಿ ಮೌಖಿಕ ಆದೇಶ ನೀಡಿ ಬಡ ಮತ್ತು ಎಸ್ಸಿ,ಎಸ್ಟಿ ಸಮುದಾಯ ಹಾಗೂ ಇತರೆ ಜಾತಿಗಳ ತರಕಾರಿ ವ್ಯಾಪಾರಸ್ಥರಿಗೆ ಅನ್ಯಾಯವೆಸಗಿದ್ದಾರೆಂದು ಆರೋಪಿಸಿದರು.
ಕಳೆದ ಒಂದುವರೆ ವರ್ಷ ದಿಂದ ನಿವೇಶನ ಹಂಚಿಕೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದ್ದು, ಕೂಡಲೇ ನಿವೇಶನ ಹಂಚಿಕೆಗೆ ಮುಂದಾಬೇಕೆAದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಧರಣಿಯಲ್ಲಿ ಸಂಘದ ಅಧ್ಯಕ್ಷ ಎನ್.ಮಹಾವೀರ, ಕಾರ್ಯದರ್ಶಿ ಪ್ರಭು ನಾಯಕ ಸೇರಿದಂತೆ ವ್ಯಾಪಾರಸ್ಥರು ಭಾಗವಹಿಸಿದರು.