ರಾಯಚೂರು, ಮೇ.೪: ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗುವ ಆಶಾ ಕಾರ್ಯಕರ್ತೆಯರಿಗೆ ಕುಡಿಯುವ ನೀರು ಊಟ ಭತ್ಯೆ ಮತ್ತು ನೆರಳನ್ನು ಖಾತ್ರಿಪಡಿಸಬೇಕೆಂದು ಎಐಯುಟಿಯುಸಿ ಸೇರಿದ ಅಶಾ ಸಂಘಟನೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮನವಿ ಮಾಡಿವೆ.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ರಾಯಚೂರು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯ ನಿಯೋಗವು ಚುನಾವಣಾ ಅಧಿಕಾರಿಗಳಾದ ಚಂದ್ರಶೇಖರ್ ನಾಯಕ್ ಅವರನ್ನು ಭೇಟಿ ಮಾಡಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗುವ ಆಶಾ ಕಾರ್ಯಕರ್ತೆಯರಿಗೆ ಕುಡಿಯುವ ನೀರು ಊಟ ಭತ್ಯೆ ಮತ್ತು ನೆರಳನ್ನು ಖಾತ್ರಿಪಡಿಸಬೇಕೆಂದು ಮನವಿ ಸಲ್ಲಿಸಲಾಯಿತು..
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಚುನಾವಣಾಧಿಕಾರಿಗಳು ನೀರು ನೆರಳು ಊಟ ವ್ಯವಸ್ಥೆ ಖಂಡಿತ ಮಾಡಲಾಗುವುದು, ಅದು ಎಲ್ಲರಿಗೂ ಇರುವಂತೆ ಇವರಿಗೂ ಇರುತ್ತದೆ ಎಂದು ಹೇಳಿದರು.. ಇನ್ನು ಭತ್ಯೆ ವಿಷಯ ನೋಡುತ್ತೇನೆ.. ಭತ್ಯೆ ಕೊಡುವ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದರು..
ಕಳೆದ ಎಲ್ಲ ಚುನಾವಣೆಗಳಲ್ಲಿ ಅದು, ಜಿ.ಪಂ ಇರಲಿ ಅಥವಾ ವಿಧಾನಸಭೆ/ಲೋಕಸಭೆ ಸಾರ್ವತ್ರಿಕ ಚುನಾವಣೆಗಲ್ಲಿ ಆಶಾ ಕಾರ್ಯಕರ್ತೆಯರನ್ನು ಚುನಾವಣೆ ಸಂಬAಧಿಸಿದ ಎಲ್ಲಾ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳಾಗುತ್ತ ಬರಲಾಗಿದೆ. ಆದರೆ ಅವರಗೆ ಸೂಕ್ತ ಸಂಭಾವನೆ ಮತ್ರ ಕೊಟ್ಟಿಲ್ಲ. ಪ್ರತಿ ದಿನ ೭೦೦ ರೂ ಭತ್ಯೆ ಕೊಡಬೇಕೆಂದು ತೀರ್ಮಾನವಾದಾಗ್ಯೂ ಇಡೀ ದಿನ ಬಿಸಿಲಿನಲ್ಲಿ ಹೊರಗಡೆ ಇರುವ ಈ ಬಡಪಾಯಿ ಕಾರ್ಯಕರ್ತೆಯರಿಗೆ ನೀರು, ಊಟದ ವ್ಯವಸ್ಥೆ ಸಹ ಮಾಡದಿರುವ ಪ್ರಸಂಗಗಳು ಎದುರಾಗಿವೆ. ಅಂತೆಯೆ ಈ ಬಾರಿ ಅದೂ ಸಹ ಕಡುಬಿಸಿಲಿನಲ್ಲಿ ಕೆಲಸ ನೀಡದೆ ನೆರಳಿನ ಕೆಳಗೆ ಇರುವಂತೆ, ಊಟ,ತಿಂಡಿ, ನೀರು ಇತ್ಯಾದಿ ಸೌಲಭ್ಯ ಕೊಡಬೇಕೆಂದು, ಮತದಾನದ ದಿನದಂದೆ ಇತರ ಸಿಬ್ಬಂಧಿಗಳಿಗೆ ಭತ್ಯೆ ಬಟವಾಡೆ ಮಡುವಂತೆ ಅಂದಿನ ದಿನವೇ ಅವರಿಗೆ ಡಿ ಗ್ರೂಪ್ ನೌಕರರಿಗೆ ಕೊಡುವ ಭತ್ಯೆಯನ್ನು ಆಶಾ ಕಾರ್ಯಕರ್ತೆಯರಿಗೂ ಕೊಡಬೆಕೆಂದು ಆಗ್ರಹಿಸಲಾಯಿತು.
ಈ ನಿಯೋಗದಲ್ಲಿ ಜಿಲ್ಲಾಧ್ಯಕ್ಷರಾದ ವೀರೇಶ್ ಎನ್ ಎಸ್, ಮಾನ್ವಿ ಗೌರವ ಅಧ್ಯಕ್ಷರಾದ ಚನ್ನಬಸವ ಜಾನೇಕಲ್ ಇತರ ಆಶಾ ಕಾರ್ಯಕರ್ತೆಯರಾದ ಶಾರದಾ ಅಮರ ಜ್ಯೋತಿ ಎಲ್ಲಮ್ಮ ದೇವಮ್ಮಮಾಸವತಿ ಇದ್ದರು.
ಚುನಾವಣೆ ಕರ್ತವ್ಯಕ್ಕೆ ನಿಯೋಜನೆ: ಆಶಾ ಕಾರ್ಯಕರ್ತೆಯರಿಗೆ ನೀರು,ಊಟ,ಭತ್ಯೆ, ನೆರಳು ಒದಗಿಸಲು ಒತ್ತಾಯ
