ರಾಯಚೂರು: ತುಂಗಭದ್ರ ಎಡದಂಡೆ ಕಾಲುವೆ ಮೈಲ್ 69ರಲ್ಲಿ ನೀರಿಗ ಗೇಜ್ ಅಳತೆಯಲ್ಲಿ 1.10 ಅಡಿ ತಪ್ಪು ಅಳತೆಯಿದ್ದು ಸರಿಪಡಿಸುವಂತೆ ಒತ್ತಾಯಿಸಿ ತುಂಗಭದ್ರ ಎಡದಂಡೆ ಕಾಲುವೆ ರೈತರ ವೇದಿಕೆ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿತು.
ರೈತ ಮುಖಂಡ ಶಂಕರಗೌಡ ಹರವಿ ನೇತೃತ್ವದ ರೈತ ನಿಯೋಗ ಜಿಲ್ಲಾಧಿಕಾರಿ ನೀತಿಶ್‌ರನು ಭೇಟಿ ಮಾಡಿ, ಒಂದು ಅಡಿ ನೀರು ಕೊನೆಭಾಗದ ರೈತರಿಗೆವಂಚಿಸಲಾಗುತ್ತಿದೆ. ಕಳೆದ ಜೂನ್ ತಿಂಗಳಿನಿ0ದ ನಿರಂತರವಾಗಿ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಲುವೆ ನೀರು ಹರಿಸುವದರೊಳಗೆ ತಪ್ಪು ಗೇಜ್ ಸರಿಪಡಿಸಬೇಕೆಂದು ಒತ್ತಾಯಿಸಿದರು. ಮೂರು ಅಳತೆಗಳನ್ನು ಅಳವಡಸಲಾಗಿದೆ. ಮುನಿರಾಬಾ ಕಡೆಯಿಂದ ಅಳತೆ ಪಟ್ಟಿ ಕಾಣುವದೇ ಇಲ್ಲ. ಎರಡನೇ ಅಳತೆ ಪಟ್ಟಿಯಲ್ಲಿ 1.10 ಅಡಿ ವ್ಯತ್ಯಾಸವಿದೆ. ಮೂರನೇ ಅಳತೆ ಪಟ್ಟಿ ಸರಿಯಿದ್ದು ಅಳತೆ ಪುಸ್ತಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಕೊನೆಭಾಗದ ರೈತರಿಗೆ ತಪ್ಪು ಅಳತೆಯಿಂದ ವಂಚಿಸಲಾಗುತ್ತಿದೆ. ಕೂಡಲೇ ಕಾಲುವೆಗಳಿಗೆ ನೀರು ಹರಿಸುವ ಮೊದಲೆ ಸಮಸ್ಯೆ ಪರಿಹರಿಸಬೇಕೆಂದು ಮನವಿ ಮಾಡಿದರು. ಜಿಲ್ಲಾಧಿಕಾರಿ ನೀತಿಶ್ ಮಾತನಾಡಿ ಈ ಕುರಿತು ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂರ್ಬದಲ್ಲಿ ಅಮರೇಶ ಪಾಟೀಲ್ ಬಲ್ಲಟಗಿ, ವೈ.ಬಸನಗೌಡ ಬಲ್ಲಟಗಿ, ಆರ್.ಎಸ್.ಪಾಟೀಲ್ ನಾಗಡದಿನ್ನಿ, ಎಂ,ಶರಣಗೌಡ, ಶಿವುಕುಮಾರ ಹಳ್ಳಿಹೊಸೂರು, ಶರಣಪ್ಪ ಗೌಡ ನಕ್ಕುಂದಿ ಸೇರಿದಂತೆ ಅನೇಕರಿದ್ದರು.