ರಾಯಚೂರು: ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ ಜೋಡಣೆ ಮತ್ತು ಮೀಟರ್ ಅಳವಡಿಕೆ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ದಿಂದ ಜೆಸ್ಕಾಂ ಕಛೇರಿ ವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ ರಾಜ್ಯ ಸರಕಾರ ವಿರುದ್ದ ಘೋಷಣೆ ಕೂಗಿದ್ದರು. ನಂತರ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಕೃಷಿ ಪಂಪ್ ಸೆಟ್‌ಗಳಿಗೆ ಆಧಾರ ಜೋಡಣೆ ಮತ್ತು ಮೀಟರ್ ಅಳವಡಿಕೆ ತಕ್ಷಣ ಕೈ ಬಿಡಬೇಕು,ನಗರ ಪ್ರದೇಶ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ತಾರತಮ್ಯ ಇಲ್ಲದೇ ಸಮಾನಾಗಿ ವಿದ್ಯುತ್ ಸರಬರಾಜು ಮಾಡಬೇಕು, ಗುಣಮಟ್ಟದ ವಿದ್ಯುತ್ ಪೂರೈಕೆ ಇಲ್ಲದೇ ರಾಜ್ಯದಲ್ಲಿ 30 ಲಕ್ಷ ಪಂಪ್ ಸೆಟ್‌ಗಳು ವರ್ಷದಲ್ಲಿ ಒಮ್ಮೆ ಸುಟ್ಟು ಹೋದರೆ ರಿವೈಡಿಂಗ್ ಸೇರಿ ಅಂದಾಜು 8000 ರೂ. ಪ್ರತಿ ರೈತರಿಂದ ಖರ್ಚು ಆಗುತ್ತದೆ. ಇದಕ್ಕಾಗಿ ಪ್ರತಿ ವರ್ಷ 2400 ಕೋ. ರೈತರು ಖರ್ಚು ಮಾಡುತ್ತಿದ್ದಾರೆ. ಇದನ್ನು ಸರಕಾರವೇ ಭರಿಸಬೇಕು,ಫಸಲು ನಷ್ಟ ಅಂದಾಜಿಸಿ ದರ ನಿಗದಿ ಮಾಡಬೇಕು,ವಿದ್ಯುತ್ ಪರಿವರ್ತಕಗಳು ಸುಟ್ಟ 24 ಗಂಟೆಯೊಳಗಾಗಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಬೇಕು ಅದರ ಸಾರಿಗೆ ವೆಚ್ಚನ್ನು ಸರಕಾರವೇ ಭರಿಸಬೇಕು ಸೇರಿದಂತೆ ಅನೇಕ ಬೇಡಿಕೆಗಳು ಈಡೇರಿಸಲು ಮನವಿಯಲ್ಲಿ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಮುಖಂಡರಾದ ಬಸನಗೌಡ ಹಿರೇಹೆಸರೂರು, ರಾಜ್ಯ ಮಹಿಳಾ ಸಂಚಾಲಕಿ ಉಮಾದೇವಿ, ಕುಪ್ಪಣ್ಣ,ಮಾಣಿಕ್,ತಾಯಪ್ಪ, ಶಿವಪುತ್ರ ಗೌಡ ನಂದಿಹಾಳ, ಮಲ್ಲಿಕಾರ್ಜುನ ನಾಯಕ, ಬಾಬುಸಾಬು, ಮರಿಲಿಂಗ ಗೌಡ ಸೇರಿದಂತೆ ಅನೇಕರು ಭಾಗಹಿಸಿದ್ದರು.