ಅಫಜಲಪುರ:ಸಮಾಜ ಸಂಘಟನೆಯ ಮೂಲಕ ಸಮಾಜದಲ್ಲಿನ ದರ‍್ಬಲರಿಗೆ ಸಹಾಯ ಮಾಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದಾಗ ಮಾತ್ರ ಸಂಘಟನೆಗೆ ಬೆಲೆ ಬರುತ್ತದೆ. ಬಸವ ತತ್ವ ಪಾಲನೆ ನಮ್ಮೆಲ್ಲರ ಧ್ಯೇಯವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಪಟ್ಟಣದ ಶೆಟ್ಟಿ ಫಂಕ್ಷನ್ ಹಾಲ್ ನಲ್ಲಿ ಶುಕ್ರವಾರ ರ‍್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಬಣಜಿಗ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಲಿಂಗಾಯತ ಉಪ ಪಂಗಡಗಳು ಸಂಘಟಿತರಾಗಿ ಬೆಳೆದಾಗ ಬಲಿಷ್ಠ ವೀರಶೈವ ಲಿಂಗಾಯತ ಸಮಾಜ ಕಟ್ಟಲು ಸಾಧ್ಯವಾಗುತ್ತದೆ.ಸಮಾಜ ಸಂಘಟನೆಗೆ ಭೇದ ಭಾವವನ್ನು ಮರೆತು ಒಂದಾಗುವುದರ ಜತೆಗೆ,ಇತರ ಸಮಾಜವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು.ಬಣಜಿಗರು ವ್ಯಾಪಾರಕ್ಕೆ ಸೀಮಿತವಾಗದೆ,ವಿವಿಧ ವೃತ್ತಿಗಳಲ್ಲಿ ಸಾಧನೆಗೈದು ಆರ‍್ಶಪ್ರಾಯರಾಗಿದ್ದಾರೆ.ಇಂದಿನ ಸ್ರ‍್ಧಾತ್ಮಕ ಯುಗದಲ್ಲಿ ಉಳ್ಳವರು ರ‍್ಥಿಕವಾಗಿ ದರ‍್ಬಲ ಮಕ್ಕಳಿಗೆ ಸಹಾಯ ಮಾಡಿ ಸಾಧನೆಗೆ ಸಹಕಾರಿಯಾಗಬೇಕು.ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ನಮ್ಮ ಸಮಾಜದವರಿದ್ದಾರೆ. ನಮ್ಮ ಸಮಾಜ ಸ್ವಾಭಿಮಾನಿಗಳು ಪೆಟ್ಟು ಬಿದ್ದರೆ ಸಹಿಸುವುದಿಲ್ಲ ಎಂದರು. ಕರ‍್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾದನೆಗೈದ ಸಾಧಕರಾದ ಡಾ.ಶರಣಬಸಪ್ಪ ದಾಮಾ, ಡಾ.ಶಿವಕುಮಾರ ಗುಣಾರಿ ಐಪಿಎಸ್, ಚಂದ್ರಶೇಖರ ಕರಜಗಿ, ಗುರುಪಾದಪ್ಪ ಫತಾಟೆ ಅವರಿಗೆ ರಾಜ್ಯ ಮಟ್ಟದ ಬಣಜಿಗ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ‍್ಯಕ್ರಮದಲ್ಲಿ ವಿಶ್ವರಾಧ್ಯ ಮಳೇಂದ್ರ ಶಿವಾಚರ‍್ಯರು, ಶಾಸಕ ಶಶೀಲ್ ನಮೋಶಿ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್, ಅಮರನಾಥ ಪಾಟೀಲ್, ಅಪ್ಪಾಸಾಹೇಬ ಪಾಟೀಲ್, ಜಿಪಂ ಮಾಜಿ ಸದಸ್ಯ ಅರುಣಕುಮಾರ.ಎಂ.ವೈ.ಪಾಟೀಲ್,ಅಂದಪ್ಪ ಜವಳಿ,ಬಣಜಿಗ ಸಮಾಜ ತಾಲೂಕಾಧ್ಯಕ್ಷ ಬಸಣ್ಣ ಗುಣಾರಿ, ಪ್ರಮುಖರಾದ ಡಾ.ಶರಣಬಸಪ್ಪ ದಾಮಾ, ಮಲ್ಲಪ್ಪ ಗುಣಾರಿ, ಶರಣು ನೂಲಾ, ಮಹಾಂತೇಶ ನೂಲಾ, ಸಂತೋಷ ದಾಮಾ, ಮುರುಘೇಂದ್ರ ಮಸಳಿ, ಧಾನು ನೂಲಾ, ಶರಣು ಶೆಟ್ಟಿ, ರಮೇಶ ಶೆಟ್ಟಿ, ಧಾನು ಫತಾಟೆ, ಸುನೀಲ ಶೆಟ್ಟಿ, ಶೈಲೇಶ ಗುಣಾರಿ, ಸಿದ್ದು ಹಳಗೋದಿ, ಮಲ್ಲಿಕರ‍್ಜುನ ಇಂಗಳೇಶ್ವರ, ಜಿ.ಎಸ್.ಬಾಳಿಕಾಯಿ, ಗಂಗಾಧರ ಶ್ರೀಗಿರಿ, ನಾನಾಸಾಹೇಬ ಪಾಟೀಲ್, ಚನ್ನುಗೌಡ ಪಾಟೀಲ್, ಸೋಮು ಶ್ರೀಗಿರಿ, ಶಂಕರ ಸೋಬಾನಿ, ಜಯಶ್ರೀ ಉಪ್ಪಿನ್, ಇತರರಿದ್ದರು.