ಕೆಂಭಾವಿಯಲ್ಲಿ ಅದ್ದೂರಿಯಾಗಿ ದಸರಾ ಹಬ್ಬ ಆಚರಣೆ, ಕಲೆ ಸಂಸ್ಕೃತಿ ಬಾಂದವ್ಯಕ್ಕೆ ಹಬ್ಬಗಳೆ ಸೇತುವೆ : ಅಮೀನರಡ್ಡಿ

Eshanya Times

ಕೆಂಭಾವಿ : ದಸರಾ ಎನ್ನುವದು ವಿಶ್ವಕ್ಕೆ ಮಾದರಿಯಾದ ಹಬ್ಬ ಎಲ್ಲಾ ರ‍್ಮ ಜಾತಿಗಳ ಮಧ್ಯೆ ಉತ್ತಮ ಬಾಂಧವ್ಯ ಬೆಸೆದು ಧರ‍್ಮಿಕ ಮನೋಭಾವನೆಯನ್ನು ಪ್ರತಿಯೊಬ್ಬರಲ್ಲಿ ಬಿತ್ತುವ ಮತ್ತು ಸ್ನೇಹ ಸೌಹರ‍್ದತೆಯನ್ನು ಇಮ್ಮಡಿಗೊಳಿಸುವ ಹಬ್ಬವಾಗಿದೆ ಈ ನಿಟ್ಟಿನಲ್ಲಿ ಪಟ್ಟಣದ ದಸರಾ ಉತ್ಸವ ಸಮಿತಿಯು ಹಮ್ಮಿಕೊಂಡಿರುವ ದಸರಾ ಉತ್ಸವ ಕರ‍್ಯ ಶ್ಲಾಘನೀಯ ಎಂದು ಬಿಜೆಪಿಯ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಪಾಟೀಲ ಯಾಳಗಿ ಹೇಳಿದರು.

ದಸರಾ ಉತ್ಸವ ಸಮಿತಿಯಿಂದ ಗುರುವಾರ ಪಟ್ಟಣದ ಪುರಸಭೆ ಆವರಣದಲ್ಲಿ ಹಮ್ಮಿಕೊಂಡಿದ್ದ ನಾಲ್ಕನೆ ರ‍್ಷದ ದಸರಾ ಉತ್ಸವ ಸಂಭ್ರಮ ಹಾಗೂ ಸಾಂಸ್ಕೃತಿಕ ಕರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಬ್ಬ-ಹರಿದಿನಗಳು ಮನುಷ್ಯನ ಸಂಬಂಧವನ್ನು ಗಟ್ಟಿಗೊಳಿಸುತ್ತವೆ. ಸತತ ನಾಲ್ಕು ರ‍್ಷಗಳಿಂದ ವಿಶೇಷ ಕರ‍್ಯಕ್ರಮಗಳು ಆಯೋಜಿಸುವ ಮೂಲಕ ಶಾಲಾ ಮಕ್ಕಳಿಗೆ, ರೈತರಿಗೆ, ಮಹಿಳೆಯರಿಗೆ ಪ್ರೋತ್ಸಾಹಿಸುವುದರ ಜತೆಗೆ ಸಾಧಕರನ್ನು ಗುರುತಿಸುತ್ತಿರುವ ಸಮಿತಿಯ ಕರ‍್ಯ ಪ್ರತಿಯೊಬ್ಬರು ಮೆಚ್ಚುವಂಥದ್ದು ಎಂದು ಹೇಳಿದರು
ಹಿರಿಯ ಸಾಹಿತಿ ಲಿಂಗನಗೌಡ ಮಾಲಿಪಾಟೀಲ ಉದ್ಘಾಟಿಸಿದರು ಡಿಸಿಸಿ ಬ್ಯಾಂಕ್ ನರ‍್ದೇಶಕ ಬಾಪುಗೌಡ ಪಾಟೀಲ ಹಾಗೂ ಪಿಎಲ್‌ಡಿ ಬ್ಯಾಂಕ್ ನರ‍್ದೇಶಕ ವಾಮನರಾವ ದೇಶಪಾಂಡೆ ಮಾತನಾಡಿದರು. ನಂತರ ನಡೆದ ಹಾಸ್ಯ ಸಂಜೆ ಕರ‍್ಯಕ್ರಮದಲ್ಲಿ ಖ್ಯಾತ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ನೆರೆದಿದ್ದ ಪ್ರೇಕ್ಷಕರನ್ನು ತಮ್ಮ ಮಾತಿನ ಮೂಲಕ ನಗೆಗಡಲಲ್ಲಿ ತೇಲಿಸಿದರು. ಅಡವಿ ಸೋಮಪುರದ ಜಾನಪದ ಕಲಾ ತಂಡದ ಸದಸ್ಯರು ನಡೆಸಿಕೊಟ್ಟ ಜಾನಪದ ನೃತ್ಯ ಮತ್ತು ಸಾಂಸ್ಕೃತಿಕ ಕರ‍್ಯಕ್ರಮ ನೋಡುಗರನ್ನು ತನ್ನತ್ತ ಸೆಳೆಯಿತು. ಇದೇ ಸಂರ‍್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವರನ್ನು ದಸರಾ ಉತ್ಸವ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಹಿರೇಮಠದ ಷ.ಬ್ರ.ಚನ್ನಬಸವ ಶಿವಾಚರ‍್ಯರು ಸಾನಿಧ್ಯ ವಹಿಸಿದ್ದರು. ಸಮಿತಿ ಗೌರವಾಧ್ಯಕ್ಷ ಮುದಿಗೌಡ ಮಾಲಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ, ಪುರಸಭೆ ಸದಸ್ಯ ರಹೆಮಾನ ಪಟೇಲ ಯಲಗೋಡ, ಅರುಣೋದಯ ಸೊನ್ನದ, ಶರಣಬಸವ ಕಾಕಾ ಡಿಗ್ಗಾವಿ, ನಿವೃತ್ತ ಶಿಕ್ಷಕ ಅಬ್ದುಲ್ ರಜಾಕ ನಾಲತವಾಡ, ನೀಲಕಂಠರಾಯಗೌಡ, ರಫೀಕ್ ವಡಕೇರಿ, ಬಿ. ರಾಘವೇಂದ್ರ, ತೋಟಪ್ಪ ಸಾಹು ಅರಕೇರಿ, ಗುರುಮರ‍್ತಿ ಪತ್ತಾರ, ನರಸಿಂಹ ವಡ್ಡೆ, ಶಿವನಗೌಡ ಪಾಟೀಲ ಸೇರಿದಂತೆ ಇತರರಿದ್ದರು.

ಸನ್ಮಾನಿತಗೊಂಡ ಸಾಧಕರು : ಹಿರಿಯ ಪತ್ರರ‍್ತ ಸಂಜೀವರಾವ ಕುಲಕಣ ð (ರ‍್ಷದ ವಿಶೇಷ ವ್ಯಕ್ತಿ), ಯಮುನೇಶ ಯಾಳಗಿ, ರಾಜಅಹ್ಮದ ಹುಳಬುತ್ತಿ, ಚಂದ್ರನೀಲಾ ಕಟ್ಟಿ, ಬಸಮ್ಮ ಕುಂಬಾರ (ಆರ‍್ಶ ಶಿಕ್ಷಕ ರತ್ನ ಪ್ರಶಸ್ತಿ), ಗಿರೆಪ್ಪ ಮ್ಯಾಗೇರಿ (ಉತ್ತಮ ಕೃಷಿಕ ಪ್ರಶಸ್ತಿ), ಮಾಸಾಬಿ ಮಾಸುಮಸಾಬ ವಡಕೇರಿ (ಸೇವಾ ರ‍್ವೋತ್ತಮ ಪ್ರಶಸ್ತಿ) ನೀಡಿ ಗೌರವಿಸಲಾಯಿತು.

“ಪಟ್ಟಣದ ಎಲ್ಲ ಜಾತಿ-ರ‍್ಮದವರನ್ನು ಒಂದೆಡೆ ಸೇರಿಸಿ ಪ್ರತಿರ‍್ಷ ಕರ‍್ಯಕ್ರಮ ಯಶಸ್ವಿಗೊಳಿಸುತ್ತಿರುವ ದಸರಾ ಉತ್ಸವ ಸಮಿತಿ ಎಲ್ಲ ಸದಸ್ಯರ ಕರ‍್ಯ ಮೆಚ್ಚುವಂತದ್ದು. ಹಿರಿಯರಿಗೆ, ಕಿರಿಯರಿಗೆ, ಸಾಧಕರಿಗೆ ಸನ್ಮಾನಿಸಿ ಗೌರವಿಸುತ್ತಿರುವದು ಉತ್ತಮ ಬೆಳವಣ ಗೆ. ದಸರಾ ಉತ್ಸವ ಸಮಿತಿಯಿಂದ ಇಂತಹ ಕರ‍್ಯಗಳು ಇನ್ನೂ ಹೆಚ್ಚು ಹೆಚ್ಚು ನಡೆಯುವಂತಾಗಲಿ.”

ಲಿಂಗನಗೌಡ ಮಾಲಿಪಾಟೀಲ, ಜಿಪಂ ಮಾಜಿ ಸದಸ್ಯರು ಕೆಂಭಾವಿ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";