ಸಿಂಧನೂರು,ಅ.೦8: ಮೊದಲ ಬಾರಿಗೆ ಮೈಸೂರು ಮಾದರಿಯಲ್ಲಿ ಒಂಬತ್ತು ದಿನಗಳ ಕಾಲ ನಡೆಯುವ ಸಿಂಧನೂರು ದಸರಾ ಉತ್ಸವದಲ್ಲಿಂದು ರೈತ ದಸರಾ ಕಾರ್ಯಕ್ರಮದ ಉದ್ಘಾಟನೆಗೆ ನಗರಕ್ಕೆ ಆಗಮಿಸಿದ ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ನಗರದ ಮಹಾತ್ಮಗಾಂಧಿ ವೃತ್ತದಿಂದ ಎಪಿಎಂಸಿಯ ಆವರಣದವರೆಗೆ ತೆರೆದ ವಾಹನದಲ್ಲಿ ಅದ್ದೂರಿಯಾಗಿ ಜೋಡೆತ್ತುಗಳ ಬಂಡಿ ಹಾಗೂ ವಿವಿಧ ಕಲಾ ತಂಡಗಳಿ0ದ ಭವ್ಯ ಮೆರವಣಿಗೆ ಮೂಲಕ ಸ್ವಾಗತ ಕೊರಲಾಯಿತು.
ಕುಷ್ಟಗಿ ರಸ್ತೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿಯವರ ಅಭಿಮಾನಿಗಳು ಸಾವಿರಾರು ಜನರೊಂದಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು, ಯುವಕರು, ಸೇರಿ ಜೆಸಿಬಿಯಿಂದ ಭಾರಿ ಗಾತ್ರದ ಹೂವಿನ ಹಾರ ಹಾಕಿ ಸನ್ಮಾನಿಸಿ ಗೌರವಿಸಿ ದಸರಾ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಇದಕ್ಕೂ ಮುಂಚೆ ನಗರದ ಸರ್ಕ್ಯೂಟ್ ಹೌಸ್ ನ ಹೆಲಿಪ್ಯಾಡ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯವರು ಗಂಗಾನಗರದ ಕಾಲುವೆ ಪಕ್ಕದಲ್ಲಿನ ನಿವಾಸಿಗಳಿಗೆ ಪ್ಲಾಟ್, ಮತ್ತು ಮನೆಗಳನ್ನು ಒದಗಿಸಿ ಕೊಡಬೇಕೆಂದು ಮನವಿ ಸಲ್ಲಿಸಿದರು ಹಾಗೂ ಒಳ ಮಿಸಲಾತಿ ಐಕ್ಯ ಹೋರಾಟ ಸಮಿತಿಯಿಂದ ಒಳಮಿಸಲಾತಿ ಜಾರಿಗೆ ತರುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಮೆರವಣಿಗೆಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ, ಕನ್ನಡ ಸಂಸ್ಕೃತಿ ಸಚಿವರಾದ ಶಿವರಾಜ ತಂಗಡಗಿ, ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್, ಶಾಸಕರಾದ ಹಂಪನಗೌಡ ಬಾದರ್ಲಿ, ರಾಘವೇಂದ್ರ ಹಿಟ್ನಾಳ್, ಬಸನಗೌಡ ಬಾದರ್ಲಿ, ಬಸನಗೌಡ ತುರವಿಹಾಳ, ಬಿ.ಎಮ್.ನಾಗರಾಜ, ಎಮ್.ಎಲ್.ಸಿ ಶರಣೇಗೌಡ ಬಯ್ಯಾಪುರ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮ್ಮದ್, ಜಿಲ್ಲಾಧಿಕಾರಿ ನಿತೀಶ್ ಕೆ, ಸಿಇಒ ತುಕರಾಂ ರಾಹುಲ್ ಪಾಂಡ್ವೆ, ಹನುಮನಗೌಡ ಬೆಳಗುರ್ಕಿ, ಸೇರಿದಂತೆ ಹಲವರಿದ್ದರು.
ದಸರಾ ಉತ್ಸವ ಡಿಸಿಎಂ ಡಿಕೆಶಿಗೆ ಭವ್ಯ ಸ್ವಾಗತ ಅದ್ದೂರಿ ಮೆರವಣಿಗೆ
