ರಾಯಚೂರು: ಮೇ-೧೮: ಸುರಿದ ಭಾರೀ ಮಳೆಯಿಂದ ನಗರದ ಸ್ಲಂಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಪ್ರತಿ ವರ್ಷ ಮಳೆ ಬಂದ ಸಂದರ್ಭದಲ್ಲಿ ಸ್ಲಂಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಯಿಂದ ಸ್ಲಂಗಳ ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿದೆ. ಸ್ಲಂನ ಕಾಕನಕೆರೆ, ಉರುಕುಂದಿ ಈರಣ್ಣ ನಗರ, ಯಲ್ಲಮ್ಮ ಗುಂಡಿ ಸ್ಲಂ, ಹರಿಜನವಾಡ, ದೇವಿ ನಗರ, ಹೊಸೂರು, ಜಲಾಲ್ ನಗರದ, ಮೈಲಾರ ನಗರ, ಕಾಳಿದಾಸ ನಗರ, ಸಿಯಾತಲಾಬ್, ನೀರಬಾವಿ ಕುಂಟಾ ಮತ್ತು ಇನ್ನಿತರ ಸ್ಲಂಗಳಿಗೆ ನೀರು ನುಗ್ಗಿದೆ. ಇದರಿಂದ ಮನೆಯಲ್ಲಿದ್ದ ಧವಸಧಾನ್ಯ, ಮಕ್ಕಳ ಪಠ ಪುಸ್ತಕ, ವೈಯಕ್ತಿಯ ದಾಖಲೆಗಳು ಮತ್ತು ನಿತ್ಯ ಬಳಕೆ ವಸ್ತುಗಳು ಹಾಲಾಗಿದ್ದು, ಇದರ ಬಗ್ಗೆ ಜಿಲ್ಲಾಡಳಿತ, ನಗರಸಭೆ ಮತ್ತು ಸ್ಲಂ ಬೋರ್ಡ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ದೂರಿದರು.
ರಾಜಕಾಲುವೆ ಪಕ್ಕದ ಸ್ಲಂಗಳು ಮತ್ತು ಎಗ್ಗು ಪ್ರದೇಶದಲ್ಲಿರುವ ಸ್ಲಂಗಳ ಸ್ಥಿತಿ ಚಿಂತಾಜನಕವಾಗಿದೆ. ಮಳೆ ಬಂದ ಸಮಯದಲ್ಲಿ ೧೫ ದಿನಗಳ ಕಾಲ ಮನೆಗಳಲ್ಲಿ ಮತ್ತು ಸುತ್ತ-ಮುತ್ತ ನೀರು ನಿಲ್ಲುತ್ತರುವುದರಿಂದ ಸ್ಲಂ ನಿವಾಸಿಗಳು ಮನೆ ಬಟ್ಟು ಬಂದು ಬೀದಿ ಬದಿಯ ಸಮುದಾಯ ಭವನದಲ್ಲಿ ಜೀವನ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ವಹಿಸಿ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು, ರಾಜಕಾಲುವೆಗಳು ಮತ್ತು ಚರಂಡಿಗಳನ್ನು ಅತ್ರಮಿಸಿರುವುದನ್ನು ತೆರವುಗೊಳಿಸಬೇಕು,ಚರಂಡಿಗಳ ಹುಳೆತ್ತುವ ಕಾರ್ಯ ಶೀಘ್ರದಲ್ಲಿ ಪ್ರಾರಂಭಿಸಬೇಕು ಸೇರಿದಂತೆ ಅನೇಕ ಬೇಡಿಕೆಗಳು ಈಡೇರಿಸಲು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಅಧ್ಯಕ್ಷ ಜರ್ನಾಧನ ಹಳ್ಳಬೆಂಚಿ, ಮಾರುತಿ, ಕಾರ್ಯದರ್ಶಿ ಮಹೇಶ, ರಾಜಶೇಖರ,ನೂರಜಾನ್, ಬಸವರಾಜ್, ಶರಣ ಬಸವರೆಡ್ಡಿ, ನಾಗರಾಜ, ಪವನ್, ನಿತಿನ್, ಮಾಧವರೆಡ್ಡ, ಚಂದ್ರಶೇಖರ, ಪ್ರವೀಣ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.