ಸುರಪುರ: ಟ್ರ್ಯಾಕ್ಟರ್ ಟ್ರಾಲಿ ಖರಿದಿಗೆ ಸಬ್ಸಿಡಿ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಘಟನೆ ವತಿಯಿಂದ ನಗರದ ತೋಟಗಾರಿಗೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಸುರಪುರ ಹಾಗೂ ಹುಣಸಗಿ ತಾಲ್ಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಟ್ರ್ಯಾಕ್ಟರ್ ಖರಿದಿಸಿದ್ದಾರೆ.ಆದರೆ ಟ್ರಾಲಿ ಖರಿದಿ ಮಾಡಲು ಸಾಧ್ಯವಾಗದೆ ರೈತರು ತುಂಬಾ ತೊಂದರೆ ಪಡುವಂತಾಗಿದೆ.ಆದ್ದರಿ0ದ ವಾಗಣಗೇರಾ ಗ್ರಾಮದ ರೈತ ನಿಂಗಪ್ಪ ಟಣಕೆದಾರ,ಬೈಚಬಾಳ ಗ್ರಾಮದ ಸಂಜೀವಪ್ಪ ಕೊಂಬಿನ್ ಮತ್ತು ವಾಗಣಗೇರಾ ಗ್ರಾಮದ ಮಲ್ಲಿಕಾರ್ಜುನ ಕಟ್ಟಿಮನಿ ಸೇರಿದಂತೆ ಇತರೆ ಅರ್ಹ ಎಲ್ಲಾ ರೈತರಿಗೆ ಸಬ್ಸಿಡಿ ನೀಡಬೇಕು ಎಂದು ಆಗ್ರಹಿಸಿದರು.
ನಂತರ ಹಿರಿಯ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆ ತಾಲ್ಲೂಕ ಸಂಚಾಲಕ ಮಾನಪ್ಪ ಶೆಳ್ಳಗಿ,ಜಿಲ್ಲಾ ಮುಖಂಡ ಅಪ್ಪಣ್ಣಾ ಗಾಯಕ್ವಾಡ್,ಕಾನೂನು ಸಲಹೆಗಾರ ರವಿ ನಾಯಕ ಕಬಾಡಗೇರ,ಫಕೀರಪ್ಪಗೌಡ ವಾಗಣಗೇರಾ,ವೀರಭದ್ರಪ್ಪ ತಳವಾರಗೇರ,ಇಮಾಮಸಾಬ್ ಅರಕೇರಿ,ಮಲ್ಲಿಕಾರ್ಜುನ ವಾಗಣಗೇರ,ಸಾಹೇಬಗೌಡ ವಾಗಣಗೇರ,ಮರೆಪ್ಪ ಕಟ್ಟಿಮನಿ ಕಕ್ಕೇರಾ,ಬಸವರಾಜ ಮಂಗಳೂರು,ಬಸವರಾಜ ಶಖಾಪುರ,ಶರಣು ಕೋಗಿಲೆ,ತಮ್ಮಣ್ಣ ಚಲವಾದಿ,ಶೇಖ್ ಅಮ್ಜಾದ್ ಹುಸೇನ,ಆನಂದ ನಾಯಕ ಮ್ಯಾಗೇರಿ,ಹುಸನಪ್ಪ ಶೆಳ್ಳಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.