ಬೀದರ. ಜೂ. ೦೭ : ಚಾಲಕರಿಗೆ ಬೆದರಿಕೆ ಒಡ್ಡುತ್ತಿರುವ ಶ್ರೀರಾಮ ಫೈನಾನ್ಸ್‌ನವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ರ‍್ನಾಟಕ ಚಾಲಕರ ಒಕ್ಕೂಟದವರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಚಾಲಕರು ಶ್ರೀರಾಮ ಫೈನಾನ್ಸ್‌ನವರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಅವರ ಕರ‍್ಯವೈಖರಿಯನ್ನು ಖಂಡಿಸಿದರು. ಆನಂತರ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿ, ಮನವಿ ಪತ್ರ ಸಲ್ಲಿಸಿದರು.
ಯಾರು ಶ್ರೀರಾಮ ಫೈನಾನ್ಸ್‌ನವರ ಬಳಿ ವಾಹನದ ಮೇಲೆ ಸಾಲ ಪಡೆದಿದ್ದಾರೋ ಅಂತಹವರು ಅವರ ಬಳಿಯಲ್ಲೇ ಇನ್‌ಶೂರೆನ್ಸ್ ಮಾಡಿಸಿಕೊಳ್ಳಬೇಕು ಎಂದು ಬೆದರಿಕೆ ಹಾಕುತ್ತಿದ್ದಾರೆ. ಚಾಲಕರ ಗಮನಕ್ಕೂ ತರದೇ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ. ಕಡು ಬಡ ಚಾಲಕರಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದರು.
ಚಾಲಕರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಿ, ಶ್ರೀರಾಮ ಫೈನಾನ್ಸ್‌ನವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಒಕ್ಕೂಟದ ಜಿಲ್ಲಾ ಅಧ್ಯಕ್ಷ ಹುಲ್ಲೆಪ್ಪಾ ಡುಮ್ಮೆ, ಉಪಾಧ್ಯಕ್ಷ ವೀರೇಶ ಬಿರಾದಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಶ್ರೀರಾಮ ಫೈನಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚಾಲಕರ ಒಕ್ಕೂಟ ಪ್ರತಿಭಟನೆ
WhatsApp Group
Join Now