ರಾಯಚೂರು: ಅಂತರ ಜಲ ಮಟ್ಟ ಹೆಚ್ಚಿಸುವಲ್ಲಿ ಕೆರೆಗಳ ಪಾತ್ರ ಬಹಳ ಮಹತ್ವದಾಗಿದ್ದು, ಜಲ ಮೂಲಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಉಪಾಧ್ಯಕ್ಷ ಗಾರಲದಿನ್ನಿ ಸಿದ್ದನಗೌಡ ಹೇಳಿದರು.
ತಾಲೂಕಿನ ಬೋಳಮಾನದೊಡ್ಡಿ ಗ್ರಾಮದಲ್ಲಿ ಭಾರತೀಯ ಜೈನ್ ಸಂಘಟನೆ ವತಿಯಿಂದ ಕೆರೆ ಹೂಳೆತ್ತುವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಾಳಗಿ ಆಗಮಿಸಿ ಮಾತನಾಡಿ, ಜಲಮೂಲಗಳ ಹೂಳು ತೆಗೆಯುವದರಿಂದ ಸುತ್ತಮುತ್ತಲಿನ ಎಲ್ಲಾ ಕೊಳವೆಬಾವಿಗಳು ಹಾಗೂ ಬಾವಿಗಳು ರೀಚಾರ್ಜ್ ಆಗುತ್ತಿವೆ ಹಾಗೂ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಾಗುವುದರಿಂದ ಗ್ರಾಮದ ಸುತ್ತಮುತ್ತಲಿನ ಜನರಿಗೆ,ರೈತರಿಗೆ,ಪ್ರಾಣಿ ಪಕ್ಷಿಗಳಿಗೆ ಜಾನುವಾರುಗಳಿಗೆ ಅನುಕೂಲವಾಗಲಿದೆ.
ಜಿಲ್ಲೆಯು ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಈ ಅದ್ಭುತ ಯೋಜನೆಯ ಮೂಲಕ ಜಿಲ್ಲೆಯ ಜಲ ಮೂಲಗಳ ಸಂರಕ್ಷಣೆಗೆ ಜೈನ ಸಮುದಾಯ ಮತ್ತು ಭಾರತಿ ಜೈನ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು.
ಗ್ರೀನ್ ರಾಯಚೂರು ಸಂಸ್ಥೆಯ ರಾಜೇಂದ್ರ ಶಿವಾಳೆ ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು,ಈ ಪವಿತ್ರ ಕಾರ್ಯದಿಂದ ಅಂತರ್ಜಲ ಹೆಚ್ಚಾಗಿ ರೈತರಿಗೆ ಉಪಯೋಗವಾಗಲಿದೆ. ಭಾರತಿಯ ಜೈನ ಸಂಘಟನೆಯಿಂದ ವೈಜ್ಞಾನಿಕವಾಗಿ ಜಲಮೂಲಗಳ ಹೂಳು ತೆಗೆಯುವ ಕಾರ್ಯ ನಡೆಯುತ್ತಿದ್ದು, ಗ್ರೀನ್ ರಾಯಚೂರು ಸಂಸ್ಥೆಯಿಂದ ಮರಗಳನ್ನು ನೆಡುತ್ತಿದ್ದೇವೆ ಮತ್ತು ಭಾರತೀಯ ಜೈನ ಸಂಘಟನೆಯು ಈಗಿರುವ ಜಲಮೂಲಗಳಲ್ಲಿ ಹೆಚ್ಚಿನ ನೀರು ಸಂಗ್ರಹವನ್ನು ಸೃಷ್ಟಿಸುತ್ತಿದೆ, ಇದು ರಾಯಚೂರು ಜಿಲ್ಲೆಯಲ್ಲಿ ಎಲ್ಲಾ ರೀತಿಯಲ್ಲೂ ಸಹಾಯವಾಗಲಿದೆ ಎಂದು ತಿಳಿಸಿದರು, ಈ ಸಂದರ್ಭದಲ್ಲಿ ಎಸ್ ಕುಮಲಕುಮಾರ ಜೈನ್ ಮಾತನಾಡಿ ಇಂದು ಬೋಳಮನ ದೊಡ್ಡಿ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಈಗಾಗಲೇ ಬಿಜನಗೆರಾ ಗ್ರಾಮದಲ್ಲಿ ಮೊದಲ ಕೆರೆ ಹೂಳೆತ್ತುವ ಕಾರ್ಯ ಕಳೆದ 16 ದಿನಗಳಿಂದ ಭರದಿಂದ ಸಾಗಿದೆ ಎಂದರು.
ಭಾರತೀಯ ಜೈನ್ ಸಂಘಟನೆ ಯೋಜನೆಗಳ ಜಿಲ್ಲಾ ಮುಖ್ಯಸ್ಥ ಹಾಗೂ ರಾಯಚೂರು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷರಾದ ಎಸ್ ಕಮಲ್ ಕುಮಾರ್ ಜೈನ ಮಾತನಾಡಿ,
ಅಭಯ್ ಫಿರೋಡಿಯಾ, ಫೋರ್ಸ್ ಮೋಟಾರ್ಸ್ ಇವರು ತಮ್ಮ ಸಿಎಸ್ಆರ್ ನಿಧಿಯ ಮೂಲಕ
ರಾಜ್ಯದ 56 ಕೆರೆ ಹೂಳು ತೆಗೆಯುವ ಕಾಮಗಾರಿ ಆರಂಭಿಸುವ ಪ್ರಸ್ತಾವನೆ ಇದ್ದು, ಈಗಾಗಲೇ ಮೈಸೂರು ಜಿಲ್ಲೆಯ ,ಧಾರವಾಡ , ಕೋಲಾರ, ರಾಮನಗರ, ಯಾದಗಿರಿ, ರಾಯಚೂರು,ಕಲಬುರಗಿ, ಬಳ್ಳಾರಿ ಸೇರಿದಂತೆ
8 ಜಿಲ್ಲೆಗಳಲ್ಲಿ 21 ಕೆರೆಗಳ ಹೂಳು ತೆಗೆಯುವ ಕಾಮಗಾರಿಗಳು ನಡೆಯುತ್ತಿದೆ ಎಂದು ತಿಳಿದರು.
ಈ ಸಂದರ್ಭದಲ್ಲಿ ಭಾರತೀಯ ಜೈನ್ ಸಂಘಟನೆ ಕಾರ್ಯದರ್ಶಿ ಸುಮೀತ್ ಜೈನ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೆ. ಯೇಮಣ್ಣ ಉನ್ನಿ ಗ್ರೀನ್ ರಾಯಚೂರು ಸಂಸ್ಥೆಯ ಗುರುರಾಜ್ ಪೊನ್ನೂರು, ಸಂಧ್ಯಾ ನಾಯಕ್, ಪುರುಷೋತ್ತಮ, ಕರಿಬಸಪ್ಪ, ರವಿಕುಮಾರ್ ಸುಗಂಧಿ, ದೇವರಾಜ್, ತಿಮ್ಮಪ್ಪ ಗೌಡ, ವೆಂಕಟೇಶ, ಮಹೇಶ್, ನರಸಿಂಹ, ಚನ್ನಬಸವ ಬೋಳೋಮಡಡ್ಡಿ ಗ್ರಾಮದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.