ರಾಯಚೂರು: ವಕೀಲರು ತಮ್ಮ ಕಾರ್ಯನಿರತ ಒತ್ತಡದ ನಡುವೆ ಕ್ರೀಡೆಯಲ್ಲಿ ಭಾಗವಹಿಸಲು ರಾಯಚೂರು ಜಿಲ್ಲಾ ವಕೀಲರ ಸಂಘದಿAದ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿ ಪಂದ್ಯಾವಳಿಯನ್ನು ಏರ್ಪಡಿಸಿದ್ದು ಶ್ಲಾಘನೀಯ ಕಾರ್ಯವಾಗಿದೆ ಎಂದು ಜಿಲ್ಲಾ ತ್ರ ನ್ಯಾಯಾಲಯದ ನ್ಯಾಧೀಶರಾದ ಮಾರುತಿ ಬಗಾಡೆ ಹೇಳಿದರು.
ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘದಿAದ ಏರ್ಪಡಿಸಿದ ಜಿಲ್ಲಾಮಟ್ಟದ ವಕೀಲರ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಈ ಪಂದಾವಳಿಯಲ್ಲಿ ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕು ಸಂಘದ ವಕೀಲರು ಭಾಗವಹಿಸಿದ್ದು ಸಂತೋಷ ವಿಷಯವಾಗಿದೆ ಎಂದು ಹೇಳಿದರು
ಎರಡನೆಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಹತ್ತಿಕಾಳು ಪ್ರಭು ಸಿದ್ದಪ್ಪ ಮಾತನಾಡಿ “ವಕೀಲರು ದಿನನಿತ್ಯ ನ್ಯಾಯಾಲಯದ ಕಾರ್ಯಗಳಲ್ಲಿ ಭಾಗವಹಿಸಿ ಕಕ್ಷಿದಾರರ ಪ್ರಕರಣಗಳಲ್ಲಿ ಮುಳುಗಿರುತ್ತಾರೆ ಆದರೆ ಈ ರೀತಿ ಕ್ರೀಡಾಕೂಟ ಹಮ್ಮಿಕೊಳ್ಳುವುದರ ಮುಖಾಂತರ ಅವರ ಕ್ರೀಡೆ ಪ್ರತಿಭೆಯನ್ನು ಗುರುತಿಸುವ ಕೆಲಸವಾಗುತ್ತದೆ ಎಂದು ಹೇಳಿದರು
ಎನ್ ಶಿವಶಂಕರ ಹಿರಿಯ ವಕೀಲರು ಮಾತನಾಡಿ
“ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ವಕೀಲರು ಕ್ರಿಕಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದ್ದು ಈ ಪಂದ್ಯದಲ್ಲಿ ಗೆಲುವು- ಸೋಲು ಮುಖ್ಯವಲ್ಲ ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿಬೇಕು ಈ ಪಂದ್ಯಾವಳಿಯು ಮೂಲಕ ವಕೀಲರು ಎಲ್ಲಾ ಕ್ಷೇತ್ರಗಳಲ್ಲಿ ಸಮರ್ಥರಿದ್ದಾರೆ ತೋರಿಸಿದ್ದಾರೆ ಎಂದು ಹೇಳಿದರು
ರಾಯಚೂರು ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ ನಮ್ಮ ಸಂಘದಿAದ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ, ಕ್ರೀಡಾಕೂಟಗಳ ಹಮ್ಮಿಕೊಳ್ಳಲಾಗುತ್ತಿದ್ದು ಕ್ರಿಕೆಟ್ ಪಂದ್ಯಾವಳಿಯನ್ನು ಎಲ್ಲಾ ವಕೀಲರು ತನು ಮನಧನ ಸಹಾಯದಿಂದ ಏರ್ಪಡಿಸಲಾಗಿದೆ ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ವಲಯದ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳುಲಾಗುವುದು ಎಂದರು ಸ್ವಾಗತ ಕಾರ್ಯದರ್ಶಿ ಲಕ್ಷ್ಮಪ್ಪ ಭಂಡಾರಿ ಮಾಡಿದರು
ಈ ಸಂದರ್ಭದಲ್ಲಿ ಉಪಾಧ್ಯಕ್ಷ ನಜೀರ ಅಹ್ಮದ್, ಜಂಟಿ ಕಾರ್ಯದರ್ಶಿ ಹನುಮಂತಪ್ಪ ಮೇಟಿ, ಖಂಚಾಚಿ ಸೈಯ್ಯದ್ ನವಾಜ್, ವಕೀಲರಾದ ಶ್ರೀಧರಎಲಿ ,ರಾಮು , ಲೋಕಶ್, ಮಲ್ಲಿಕಾರ್ಜುನಗೋನಳ, ಮಾನ್ವಿ ಅಧ್ಯಕ್ಷ ರವಿ ಪಾಟೀಲ ಮಸ್ಕಿ ಅಧ್ಯಕ್ಷ ಈರಪ್ಪ ದೇಸಾಯಿ, ಲಿಂಗಸುಗೂರ ಕಾರ್ಯದರ್ಶಿ ಆನಂದ ರಾಥೋಡ ಸಿಂಧನೂರ ವಕೀಲರಾದ ವೀರೇಶ ಚಿಂಚರಿಕಿ ಉಪಸಿತದ್ದರು ಕಾರ್ಯಕ್ರಮ ನಿರೂಪಣೆಯನ್ನು ಚನ್ನಪ್ಪ ಮಲ್ಲಪ್ಪನವರ ಮಾಡಿದರು