ದೇವದುರ್ಗ : ತಾಲೂಕಿನ ಮಲದಕಲ್ ಗ್ರಾಮದ ನಿವಾಸಿ ಅಹ್ಮದ್ ಹುಸೇನ್ ಒಂದು ವರ್ಷದ ಮೊಮ್ಮಗಳು ಮಾಹಿನ್ ರೀದಾ ಹುಟ್ಟು ಹಬ್ಬದ ನಿಮಿತ್ಯ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆಎಲ್ಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್‌ನ್ನು ಕೊಡುಗೆಯಾಗಿ ವಿತರಿಸಲಾಯಿತು.
ಅಹ್ಮದ್ ಹುಸೇನ್ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳಲ್ಲಿ ಉತ್ಸಾಹ ಮೂಡಿ ಓದುವ ಕಡೆ ಆಸಕ್ತಿ ಹೊಂದಿ ಶೈಕ್ಷಣಿಕ ಅಭಿವೃದ್ಧಿ ಹೊಂದಲಿ ಎಂಬ ಆಶಾಭಾವದಿಂದ ಮೊಮ್ಮಗಳ ಹುಟ್ಟು ಹಬ್ಬ ನೆಪ ಮಾತ್ರವಾಗಿದೆ ಎಂದು ತಿಳಿಸಿದರು.
ಶಾಲೆಯ ಮುಖ್ಯಪಾಧ್ಯಾಯ ಸುಧಾಕರ ಮಾತನಾಡಿ, ನಮ್ಮ ಶಾಲಾ ಮಕ್ಕಳಿಗೆ ದಾನಿಗಳು ಈ ರೀತಿ ಪ್ರೋತ್ಸಾಹಿಸಿದರೆ ಖಂಡಿತವಾಗಿ ಉತ್ತಮವಾಗಿ ಓದಿನಲ್ಲಿ ತೊಡಗಿಕೊಳ್ಳುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಾಲು ನಾಯಕ್, ಪ್ರಶಾಂತ್, ಶಾಲೆಯ ಶಿಕ್ಷಕರು ಮತ್ತು ಗ್ರಾಮಸ್ಥರು ಇದ್ದರು