ಸಿರುಗುಪ್ಪ.ಮೇ.೦೨: ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಸಾರ್ವಜನಿಕರಿಗೆ ಕಾಂಗ್ರೇಸ್ ಪಕ್ಷದ ಗ್ಯಾರಂಟಿ ಕಾರ್ಡ್ಗಳನ್ನು ವಿತರಿಸಿದರು.
ಕಾಂಗ್ರೇಸ್ ಮುಖಂಡ ಎಸ್.ಎಂ.ನಾಗರಾಜಸ್ವಾಮಿ ಮಾತನಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದು ೫ ಗ್ಯಾರಂಟಿಗಳನ್ನು ಈಡೇರಿಸಿದಂತೆ ಮುಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳಾ ನ್ಯಾಯ ಯೋಜನೆಯಲ್ಲಿ ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಗೆ ಪ್ರತಿ ವರ್ಷ ಒಂದು ಲಕ್ಷ ರೂಪಾಯಿ, ಹಾಗೂ ಯುವ ನ್ಯಾಯ ದಲ್ಲಿ, ಪ್ರತಿ ವಿದ್ಯಾವಂತ ಯುವಕರಿಗೆ ವರ್ಷಕ್ಕೆ ಒಂದು ಲಕ್ಷ ಶಿಷ್ಯವೇತನ, ರೈತ ನ್ಯಾಯ ದಲ್ಲಿ ಕೃಷಿ ಸಾಲ ಮನ್ನಾ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಶಾಶ್ವತ ಆಯೋಗವನ್ನು ರಚಿಸುವುದು, ಶ್ರಮಿಕ ನ್ಯಾಯದಲ್ಲಿ, ಪ್ರತಿ ದಿನ ೪೦೦ ರಾಷ್ಟ್ರೀಯ ಕನಿಷ್ಠ ವೇತನ, ಹಾಗೂ ಪಾಲುದಾರಿಕೆಯ ನ್ಯಾಯದಲ್ಲಿ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರ ವ್ಯಾಪ್ತಿ ಜನಗಣತಿ, ಹೀಗೆ ಸುಮಾರು ೨೫ ಭರವಸೆಗಳನ್ನು ಕಾಂಗ್ರೆಸ್ ಪಕ್ಷವು ನೀಡಿದ್ದು, ಅಧಿಕಾರಕ್ಕೆ ಬಂದರೆ ೨೫ ಆಶ್ವಾಸನೆಗಳನ್ನು ಈಡೇರಿಸಲಿದೆ, ಆದ್ದರಿಂದ ಕಾಂಗ್ರೇಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಅವರಿಗೆ ಮತನೀಡಬೇಕೆಂದು ಮನವಿ ಮಾಡಿದರು.
ಗ್ರಾ.ಪಂ. ಅಧ್ಯಕ್ಷೆ ಹೊಳಗುಂದಿ ಲಕ್ಷ್ಮಿದೇವಣ್ಣ, ಸದಸ್ಯರಾದ ಕೆ.ನೀಲಮ್ಮ ಬಸವರಾಜ್, ವಿ ರಮೇಶ್, ಮುಖಂಡರಾದ ಸಿ.ಎಂ ನಾಗರಾಜ ಸ್ವಾಮಿ, ಬಿ.ಸೋಮಶೇಖರ್, ವಿ.ರೇಣುಕಪ್ಪ, ಬಿ.ನಾಗೇಂದ್ರ, ಎಸ್. ಎಮ್. ಅಡಿವೆಯ್ಯ ಸ್ವಾಮಿ, ಕೆ. ದ್ಯಾವಣ್ಣ, ರಾರಾವಿ ವೆಂಕಟೇಶ್, ಬಿ. ಉಮೇಶ, ಜಲಾಲೀ ಪೀರಾ, ಎಚ್. ಲಕ್ಷ್ಮಣ ಭಂಡಾರಿ, ಬಿಚುಗತ್ತಿ ನಾಗರಾಜ, ತಿಮ್ಮಯ್ಯ, ಹಾಗೂ ಕಾರ್ಯಕರ್ತರು