ನವದೆಹಲಿ: ಜು-19:
ದೆಹಲಿಯ ಕರ್ನಾಟಕ ಭವನ ಕಾವೇರಿ ಯಲ್ಲಿ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಮುಖಂಡರ ನಿಯೋಗ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯ ಕೇಂದ್ರ ಸಚಿವ ಕುಮಾರಸ್ವಾಮಿ ಯವರನ್ನು ಭೇಟಿ ಮಾಡಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಬಗ್ಗೆ ಚರ್ಚೆ ಮಾಡಿತು.
ಐಐಟಿಯಿಂದ ವಂಚಿತಗೊAಡ ಮಹತ್ವಾಕಾಂಕ್ಷಿ ಜಿಲ್ಲೆ ರಾಯಚೂರಿಗೆ ಏಮ್ಸ್ (ಂIIಒS) ಮಂಜೂರು ಮಾಡುವಂತೆ ಒತ್ತಾಯಿಸಿ ಸುಧೀರ್ಘ ಹೋರಾಟ ನಡೆಯುತ್ತಿದೆ, ೨೦೨೪ರ ಬಜೇಟನಲ್ಲಿ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಘೋಷಿಸುವ ಬಗ್ಗೆ ಪ್ರಧಾನ ಮಂತ್ರಿ ಅವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ವಿನಂತಿಸಿ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸ್ವೀಕರಿಸಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿಯವರು, ” ಏಮ್ಸ್ ಗಾಗಿ ರಾಯಚೂರಿನಲ್ಲಿ ನಡೆಯುತ್ತಿರುವ ಸುಧೀರ್ಘ ಹೋರಾಟದ ಬಗ್ಗೆ ನನಗೆ ಮಾಹಿತಿ ಇದೆ, ನಾನು ಖಂಡಿತವಾಗಿಯೂ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವ ಬಗ್ಗೆ ಪ್ರಧಾನಮಂತ್ರಿಯವರೊAದಿಗೆ ಚರ್ಚಿಸುತ್ತೇನೆ. ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದೆಹಲಿ ಕಲ್ಯಾಣ ಕರ್ನಾಟಕ ಸಂಘದ ಅಧ್ಯಕ್ಷ ವೈಜನಾಥ ಬಿರಾದರ್ ಡಾ. ಬಸವರಾಜ ಕಳಸ, ಅಶೋಕ್ ಕುಮಾರ್ ಜೈನ್ , ವಿನಯ್ ಕುಮಾರ್ ಚಿತ್ರಗಾರ, ಅಮರೆಗೌಡ ಪಾಟೀಲ್, ಥಾಮಸ್ ಮುಂತಾದವರೆಲ್ಲ ಇದ್ದರು.