ರಾಯಚೂರು: ಪಿಡಿಓ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಕುರಿತು ಸಮಗ್ರ ತನಿಖೆ ಕೈಗೊಂಡು ಮರು ಪರೀಕ್ಷೆಗೆ ನಡೆಸಬೇಕೆಂದು ಆಗಹಿಸಿ ಭಾರತ ಕ್ರಾಂತಿಕಾರಿ ಯೋಜನೆ ಒಕ್ಕೂಟ(ಆರ್ ವೈಎಪ್ಐ) ದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲೆಯ ಸಿಂಧನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪಿಡಿಓ ಪರೀಕ್ಷೆ ನಿರ್ವಹಣೆ ಮಾಡುವಲ್ಲಿ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭಾರತ ಕ್ರಾಂತಿಕಾರಿ ಯೋಜನೆ ಒಕ್ಕೂಟದ ಸದಸ್ಯರು ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಲೋಕಸೇವಾ ಆಯೋಗದಿಂದ ಕಳೆದ ಭಾನುವಾರ ಸಿಂಧನೂರು ಸರಕಾರಿ ಮಹಾ ವಿದ್ಯಾಲಯದಲ್ಲಿ ನಡೆದ ಪಿಡಿಒ ಹುದ್ದೆಗಳ ಪರೀಕ್ಷೆಯಲ್ಲಿ ಕೆಲ ಪರೀಕ್ಷಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಕೆಲ ಅಭ್ಯರ್ಥಿಗಳು ಪ್ರತಿಭಟನೆ ಮಾಡಿದ್ದರು.
ಪ್ರತಿಬಾರಿ ಯಾವುದೇ ಪರೀಕ್ಷೆ ನಡೆಸುವಾಗ ಕೆಪಿಎಸ್ ಸಿ ಲೋಪ ಎಸಗುತ್ತಲೆ ಇರುತ್ತದೆ. ಈಗ ಪಿಡಿಓ ಪರೀಕ್ಷೆ ಸರಿಯಾಗಿ ನಡೆಸದಿರುವುದು ಅದನ್ನು ಪುಷ್ಠಿಕರಿಸುತ್ತದೆ. ಕೂಡಲೇ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ಲೋಪ ಎಸಗಿದ ಹಾಗೂ ದಾಂಧಲೆ ನಡೆಸಿ ಅಭ್ಯರ್ಥಿಗಳಿಗೆ ತೊಂದರೆ ಉಂಟು ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, 12 ವಿದ್ಯಾರ್ಥಿಗಳ ಮೇಲೆ ಹಾಕಿದ ಕೇಸ್ ವಾಪಸ್ ಪಡೆದು ಕೂಡಲೇ ಮರು ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ:ಆರ್.ವೈ.ಎಫ್ ಐ ಜಿಲ್ಲಾ ಮುಖಂಡ ಅಜೀಜ್ ಜಾಗೀರ್ದಾರ್, ರವಿಚಂದ್ರ ಕಾರ್ಮಿಕ ಮುಖಂಡ ಅಡವಿ ರಾವ್, ರೈತ ಮುಖಂಡ ಸೈಯದ್ ಅಬ್ಬಾಸ್ ಅಲಿ, ಹನೀಫ್ ಅಬಕಾರಿ, ಶಫಿ, ನಲ್ಲಾರೆಡ್ಡಿ, ನರಸಪ್ಪ, ನಾಗರಾಜ್ ಇದ್ದರು.