ಮಾನ್ವಿ,: ಗುಲರ‍್ಗಾದ ರೌಡಿಪಡಿಗಳು ಸುಳ್ಳು ಸಾಕ್ಷಿ ಸೃಷ್ಟಿಸಿ ದಲಿತ ಸಮಾಜದ ಪ್ರತಿಷ್ಠಿತ ವ್ಯಕ್ತಿ ಹಾಗೂ ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ ಜಿ.ಯಳಸಂಗಿ ವಿರುದ್ಧ ಸುಳ್ಳು ಪ್ರಕರಣ ರದ್ದಪಡಿಸಬೇಕು ಮತ್ತು ಆಮಾಯಕರ ಮೇಲೆ ಸುಳ್ಳು ದೂರು ದಾಖಲಿಸಿ ಅಟ್ಟಹಾಸ ಮೇರೆಯುತ್ತಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ದಲಿತ ಸೇನೆ ತಾಲೂಕ ಅಧ್ಯಕ್ಷ ಹುಸೇನಪ್ಪ ನಂದಿಹಾಳ ಆಗ್ರಹಿಸಿದ್ದಾರೆ. ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ನೀಡಿರುವ ಮನವಿಯಲ್ಲಿ ರಾಜು ಕಪನೂರ ಮತ್ತು ಆತನ ಗ್ಯಾಂಗನ ಪಾತ್ರದ ಬಗ್ಗೆ ಕಂಡು ಹಿಡಿದು ಉದ್ದೇಶಪರ‍್ವಕವಾಗಿ ಹನುಮಂತ ಜಿ. ಯಳಸಂಗಿ ರವರ ತೇಜೋವಧೆ, ಕ್ರಿಮಿನಲ್ ಪ್ರಕರಣಗಳು ದಾಖಲಿಸಿದ ಕುರಿತು ಗಂಭೀರವಾಗಿ ತನಿಖೆ ನಡೆಸಿ ಸಮಾಜಘಾತುಕ ಶಕ್ತಿಗಳಿಗೆ ಇಡೀ ರಾಜ್ಯ ನೋಡುವಂತಹ ಕಠಿಣ ಶಿಕ್ಷೆಗೆ ಗುರುಪಡಿಸುವಂತಹ ಕ್ರಮಕ್ಕೆ ಆದೇಶಿಸಬೇಕೆಂದು ದಲಿತ ಸೇನೆಯು ನ್ಯಾಯಕ್ಕಾಗಿ ಒತ್ತಾಯಿಸಿದೆ ಎಂದರು.
ದಲಿತ ಸೇನೆಯು ಈ ದೇಶದ ಸಾಮಾಜಿಕ ಚಳುವಳಿಯಾಗಿದ್ದು, ಪದ್ಮಭೂಷಣ ಪ್ರಶಸ್ತಿ ಪಡೆದ ರಾಮವಿಲಾಸ ಪಾಸ್ವಾನರವರು ಕಟ್ಟಿ ಬೆಳೆಸಿದ ರಾಷ್ಟ್ರೀಯ ಸಂಘಟನೆಯಾಗಿದ್ದು, ಫುಲೆ, ಶಾಹು, ಡಾ.ಬಿ.ಆರ್. ಅಂಬೇಡ್ಕರ್ ವಿಚಾರಧಾರೆಯಲ್ಲಿ ಸಾಮಾಜಿಕ ಸಮಾನತೆಗಾಗಿ, ಅನ್ಯಾಯ, ಅತ್ಯಾಚಾರ, ಸಾಮಾಜಿಕ ಬಹಿಷ್ಕಾರ, ದರ‍್ಜನ್ಯ ಕೊಲೆ. ಭ್ರಷ್ಟಾಚಾರದಂತಹ ಸಾಮಾಜಿಕ ಅನಾಚಾರಗಳ ವಿರುದ್ಧ ರಾಷ್ಟ್ರಾಧ್ಯಂತ ಹೋರಾಟ ಮಾಡುತ್ತಿದೆ. ಇಂತಹ ಹಿನ್ನೆಲೆಯುಳ್ಳ ದಲಿತ ಸೇನೆಯು ರ‍್ನಾಟಕದಲ್ಲಿ ರಾಜ್ಯಾಧ್ಯಕ್ಷ ಹನುಮಂತ ಜಿ. ಯಳಸಂಗಿ (ನ್ಯಾಯವಾದಿಗಳು) ಗುಲರ‍್ಗಾರವರ ಸೂಕ್ತ ಮರ‍್ಗರ‍್ಶನ, ಮುಂದಾಳತ್ವದಲ್ಲಿ ಚಳುವಳಿಗಳನ್ನು ರೂಪಿಸುತ್ತಾ ಈ ರಾಜ್ಯದ ಯುವ ಸಮೂಹ ಸ್ವಾಭಿಮಾನಿ ಸಂಘಟನೆಯಾಗಿದೆ. ಇಂತಹ ಸಂಘಟನೆಯ ನಾಯಕರುಗಳ ವಿರುದ್ಧ ಗುಲರ‍್ಗಾದ ಬಜಾರ ಪೊಲೀಸ್ ಠಾಣೆಯಲ್ಲಿ ದರೋಡೆ, ಅತ್ಯಾಚಾರ, ಹಣ ವಸೂಲಿಯಂತಹ ಗಂಭೀರ ಪ್ರಕರಣಗಳ ಅಡಿಯಲ್ಲಿ ಕೇಸು ದಾಖಲಿಸಿರುವುದು ಆತಂಕಕ್ಕೀಡು ಮಾಡಿದೆ. ದಲಿತ ಸೇನೆಯ ಪ್ರಗತಿಪರ ವಿಚಾರಧಾರೆಯ ಗುಲರ‍್ಗಾ ಜಿಲ್ಲಾ ನಾಯಕರುಗಳ ವಿರುದ್ಧ ಸುಳ್ಳು ಪ್ರಕರಣದ ರೂವಾರಿ ಚುಚಂದ್ರಿ ರಾಜಾ ರಾಜು ಕಪನೂರ ಎಂಬ ಹೆಸರಿನ ಕುಖ್ಯಾತ ರೌಡಿಶೀಟರ ಮತ್ತು ಗಡಿಪಾರ ಆದೇಶಕ್ಕೊಳಗಾಗಿರುವ ಗೂಂಡಾಪಡೆಯು ಕಳೆದ ಡಾ.ಬಿ.ಆರ್. ಅಂಬೇಡ್ಕರರವರ ಜಯಂತಿಯ ಸಮಾರಂಭವನ್ನು ದಲಿತ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ ಎಸ್. ಭಂಡಾರರವರ ನೇತೃತ್ವದಲ್ಲಿ ಆಚರಿಸಿದ್ದರಿಂದ ಕುಪಿತಗೊಂಡ ವಿಠಲ ದೊಡ್ಡಮನಿವೆಂಬ ಹೆಸರಿನ ವ್ಯಕ್ತಿಯ ಗೂಂಡಾಗಳು ಕಳೆದ ಏ.೧೪ ರಿಂದ ಹಗೆಸಾಗಿಸುತ್ತಾ ಬಂದಿದ್ದರು. ಆದ್ದರಿಂದ ಹನುಮಂತ ಜಿ.ಯಳಸಂಗಿ ವಿರುದ್ದದ ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಯಳಸಂಗಿ ಇವರಿಗೆ ನ್ಯಾಯ ದೊರಕಿಸಬೇಕು. ಗೂಂಡಾ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನಿನ ಕ್ರಮ ಜರುಗಿಸಬೇಕು ಎಂದು ಹುಸೇನಪ್ಪ ನಂದಿಹಾಳ ಒತ್ತಾಯಿಸಿದರು.
ದಲಿತ ಸೇನೆಯ ಮುಖಂಡರಾದ ಬಸವರಾಜ ಬೂದಿಹಾಳ, ತಾಯಣ್ಣ ಕಪಗಲ್, ತಿಪ್ಪಣ್ಣ ಜಾನೇಕಲ್, ಹನುಮಂತ ಬೈಲ್‌ರ‍್ಜೆಡ್, ಕಾಶಿನಾಥ ಕರ‍್ಡಿ, ಸಿದ್ದರಾಮೇಶ್ವರರೆಡ್ಡಿ, ಮಹೆಬೂಬ್ ಕೊರವಿ ಸೇರಿದಂತೆ ಇನ್ನಿತರರಿದ್ದರು.