ಲಿಂಗಸೂಗೂರು ತಾಲೂಕಿನ ನೆರೆಹಾವಳಿ ನಡುಗಡ್ಡೆ ಪ್ರದೇಶಕ್ಕೆ ಡಿಸಿ, ಎಸ್‌ಪಿ ಭೇಟಿ

Eshanya Times

ರಾಯಚೂರು: ಲಿಂಗಸೂಗೂರು ತಾಲೂಕಿನ ಬಸವಸಾಗರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದದರಿಂದ ಜಲಾಶಯದಿಂದ ನದಿಗೆ 3 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು ನಡುಗಡ್ಡೆಯ ಜನತೆಗೆ ಆಗುವ ತೊಂದರೆಯನ್ನು ಅರಿಯಲು ಶನಿವಾರದಂದು ಜಿಲ್ಲಾಧಿಕಾರಿ ನಿತೀಶ ಕೆ. ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ಪುಟ್ಟಮಾದಯ್ಯ, ಭೇಟಿ ನೀಡಿದರು.
ಈ ಸಂದರ್ಬದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ನಿತೀಶ ಕೆ. ನಡುಗಡ್ಡೆಯ ಜನತೆಗೆ ಪೂಟ್ ಬ್ರೀಜ್ ಮಾಡುವ ಮೂಲಕ ಸಮಸ್ಯೆ ಪರಿಹಾರಕ್ಕೆ ಯತ್ನ ಮಾಡಲಾಗುವುದೆಂದು ಹೇಳಿದರು.
ಕೃಷ್ಣಾನದಿಗೆ ನೀರು ಬರುತ್ತಲೆ ಲಿಂಗಸೂಗೂರ ತಾಲೂಕಿನ ಯರಗೋಡೆ ,ಯಳಗುಂದಿ,ಕಡದರಗಡ್ಡಿ ಹಂಚಿನಾಳ ಹಾಗೂ ಜಲದುರ್ಗ ಸಂಪರ್ಕಕ್ಕೆ ತೊಂದರೆಯಾಗಲಿದೆ. ಅಲ್ಲದೆ ಕರಕಲಗಡ್ಡಿ ಮ್ಯಾದರಗಡ್ಡಿ ಸಂಪೂರ್ಣವಾಗಿ ನಡುಗಡೆಯಾಗುತ್ತದೆ. ನಡುಗಡ್ಡೆ ಜನರ ಎಲ್ಲಾ ತೊಂದರೆಗಳನ್ನು ಜಿಲ್ಲಾಧಿಕಾರಿ ಕೆ ನಿತೀಶ ಹಾಗೂ ಎಸ್ಪಿ ಪುಟ್ಟಮಾದಯ್ಯ ಅರಿತುಕೊಂಡರು.
ಕರಕಲಗಡ್ಡಿಗೆ ಪೂಟ್ ಬ್ರೀಜ್, ಶೀಲಹಳ್ಳಿ ಸೇತುವೆಗೆ ಗ್ರೀಲ್ ಗೆ ಯತ್ನ: ನೆರೆಹಾವಳಿಯ ನಡುಗಡ್ಡೆ ಪ್ರದೇಶದ ಶೀಲಹಳ್ಳಿ ಸೇತುವೆ ಮುಳುಗಿರುವುದನ್ನು ವೀಕ್ಷಣೆ ಮಾಡಿದರು.
ನಂತರ ಯಳಗುಂದಿಯ ವಿದ್ಯುತ್ ಉತ್ಪಾದನಾ ಸ್ಥಳದ ವೀಕ್ಷಣಾ ಸ್ಥಳದಿಂದ ಕರಕಲಗಡ್ಡಿಯ ಜನವಸತಿಯ ಪ್ರದೇಶವನ್ನು ವೀಕ್ಷಣೆ ಮಾಡಿ ನಂತರ ಮಾತನಾಡುತ್ತಾ ನದಿಯಾಚೆ ನಡುಗಡ್ಡೆಯಲಿರುವ ಕರಕಲಗಡ್ಡಿಯ ಜನರಿಗೆ ನದಿಗೆ ಪ್ರವಾಹ ಬಂದಾಗ ಮಾತ್ರ ತೊಂದರೆಯಾಗಲಿದ್ದು ಅದರಿ ಸಮಯದಲ್ಲಿ ಅವರಿಗೆ ಓಡಾಡಲು ವ್ಯವಸ್ಥೆಯಾಗುವಂತೆ ಪೂಟ್ ಬ್ರೀಜ್(ಕಾಲುಸೇತುವೆ) ನಿರ್ಮಾಣ ಮಾಡಲು ಸರಕಾರಕ್ಕೆ ಬರೆಯಲಾಗುವುದು ಮತ್ತು ಬ್ರಿಜ್ ತರಲು ಯತ್ನಿಸಲಾಗುವುದು ಎಂದು ಹೇಳಿದರು ಹಾಗೆಯೆ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು ಕಡಿಮೆ ನೀರು ಇರುವಾಗಲು ಜನರು ಓಡಾಡಲು ಅನುಕೂಲವಾಗುವಂತೆ ಸೇತುವೆ ಅಕ್ಕಪಕ್ಕ ಗ್ರಿಲ್ ಅಳವಡಿಕೆಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು ಸಹಾಯಕ ಆಯುಕ್ತರಾದ ಅವಿನಾಶ ಸಿಂಧೆ ಸಂಜೀವನ್ ರವರು ಸದರಿ ನಡುಗಡ್ಡೆಯ ಸಮಸ್ಯೆಯ ಬಗೆಗೆ ಜಿಲ್ಲಾಧಿಕಾರಿಗಳಿಗೆ ವಿವರಿಸಿದರು
ಈ ಸಂದರ್ಭದಲ್ಲಿ ಎಸ್ಪಿ ಎಂ ಪುಟ್ಟಮಾದಯ್ಯ, ತಹಸಿಲ್ದಾರ ಶಂಶಾಲ0, ಡಿವೈಎಸ್ಪಿ ದತ್ತಾತ್ರೆಯ ಕಾರ್ನಾಡ, ಪಿಐ ಪುಂಡಲೀಕ್ ಪಟತ್ತರ ಸೇರಿದಂತೆ ಇದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";